ಮಂಗಳೂರು: ಯಮಸ್ವರೂಪಿ ರೀತಿ ವೇಗವಾಗಿ ಉಡುಪಿಯಿಂದ ಮಂಗಳೂರಿನ ಕಡೆ ಬರುತಿದ್ದ ಖಾಸಗಿ ಬಸ್ (Udupi Mangalore Bus) ಡಿವೈಡರ್ ಬಳಿ ನಿಂತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ.
ಮಂಗಳೂರು ನಗರದ ಕುಳಾಯಿ ಸಮೀಪದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಹೊಸಬೆಟ್ಟು ನಲ್ಲಿ ಘಟನೆ ನಡೆದಿದೆ.
ವಿಪರೀತ ವೇಗವಾಗಿ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ , ರಸ್ತೆ ಕ್ರಾಸ್ ಮಾಡಲು ಡಿವೈಡರ್ ಬಳಿ ನಿಂತಿದ್ದ ಬೈಕ್ ಸವಾರರ ಮೇಲೆ ನೇರವಾಗಿ ಹರಿದಿದೆ.
ಬಸ್ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರರಾದ ಮಹಮ್ಮದ್ ಸಾಹಿಲ್, ಅರಾಫತ್ ಗೆ ಗಂಭೀರ ಗಾಯಗೊಳಗಾಗಿದೆ.
ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಫಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.