ಕ್ರೀಡೆ
Asia Cup | 8ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಭಾರತ : ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ – ಮಳೆಯಿಂದ ಗ್ರೌಂಡ್ ಸ್ವಚ್ಚ ಮಾಡಿದವರಿಗೆ ಬಹುಮಾನದ ಹಣ ಕೊಟ್ಟ ಸಿರಾಜ್

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ (Asia Cup) ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಭಾರತ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ 8 ನೇ ಬಾರಿ ಭಾರತ ಗೆಲುವು ದಾಖಲಿಸಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 15.2 ಓವರ್‌ಗಳಲ್ಲಿ 50 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು
ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಸಿರಾಜ್ ಏಳು ಓವರ್‌ಗಳಲ್ಲಿ 21 ರನ್ ತೆತ್ತು ಆರು ವಿಕೆಟ್ ಕಬಳಿಸಿದರು. ಇದರಲ್ಲಿ ಒಂದೇ ಓವರ್‌ನಲ್ಲಿ ಮೇಡನ್ ಸಹಿತ ನಾಲ್ಕು ವಿಕೆಟ್ ಕಬಳಿಸಿದರು.
ಹಾರ್ದಿಕ್ ಪಾಂಡ್ಯ ಮೂರು ಹಾಗೂ ಜಸ್‌ಪ್ರೀತ್ ಬೂಮ್ರಾ ಒಂದು ವಿಕೆಟ್ ಕಬಳಿಸಿದರು.
ಶ್ರೀಲಂಕಾದಲ್ಲಿ ಮಳೆಯಾಗುತ್ತಿದ್ದರಿಂದ ಗ್ರೌಂಡ್ಸ್ ಮೆನ್ ಗಳು ಉತ್ತಮ ರೀತಿ ಕೆಲಸ ನಿರ್ವಹಿಸಿದ್ದಕ್ಕೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲಿ ಪಡೆದ 4.15 ಲಕ್ಷ ಹಣವನ್ನು ಸಿರಾಜ್ ಗ್ರೌಂಡ್ ನಿರ್ವಹಿಸಿದ ಕಾರ್ಮಿಕರಿಗೆ ನೀಡಿದ್ದು , ಈ ಉತ್ತಮ ಕೆಲಸದ ಮೂಲಕ ಸಿರಾಜ್ ಸಾಮಾಜಿಕ ಜಾಲತಾಣದಲ್ಲಿ ಮಿಂಚುತಿದ್ದಾರೆ.
ಬಳಿಕ ಗುರಿ ಬೆನ್ನಟ್ಟಿದ ಭಾರತ 6.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಶುಭಮನ್ ಗಿಲ್ 27 ಹಾಗೂ ಇಶಾನ್ ಕಿಶನ್ 23 ರನ್ ಗಳಿಸಿ ಔಟಾಗದೆ ಉಳಿದರು.
ಕ್ರೀಡೆ
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?

Jay Shah: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ 2023ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು‘2023 ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾದ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ಅಭಿನಂದನೆಗಳು. ಕ್ರೀಡಾ ಆಡಳಿತದಲ್ಲಿ ಈ ವಿಶೇಷ ಗೌರವವನ್ನು ಪಡೆದ ಮೊದಲ ವ್ಯಕ್ತಿ ಜಯ್ ಶಾ. ಅವರು ನಿಜವಾಗಿಯೂ ಈ ಗೌರವಕ್ಕೆ ಅರ್ಹರು ಎಂದು ಬರೆದುಕೊಂಡಿದೆ.
ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆಯ ಹೊರತಾಗಿ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಈ ಹುದ್ದೆಗೇರುವ ಮೊದಲು ಅವರು ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು
2019 ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಆಯ್ಕೆಯಾದರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್ ಮತ್ತು ಶ್ರೀಲಂಕಾ ಹಾಗೂ ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಶಾ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರಿಗೆ 2023ರ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ಒಲಿದಿದೆ.ಮತ್ತು ವರ್ಷದ ಆರಂಭದಲ್ಲಿ ಎಸಿಸಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.
ಜಯ್ ಶಾ ಅವರು ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ.ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅವರನ್ನು ಅತ್ಯುತ್ತಮ ಕ್ರೀಡಾ ಉದ್ಯಮ ನಾಯಕ ಎಂದು ಗುರುತಿಸಿದೆ.
ಕ್ರೀಡೆ
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?

ಬೆಂಗಳೂರು : Bangalore: Bomb Threat ಪತಿ ಹಾಗೂ ಪತ್ನಿ ನಡುವೆ ಮತ್ತೊಬ್ಬ ಎಂಟ್ರಿ ಕೊಟ್ಟ ಬಳಿಕ ಉಂಟಾದ ಮನಸ್ತಾಪ ಬಾಂಬ್ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಬೆಳೆದಿದೆ. ಪ್ರಿಯಕರನ ಮಾತು ಕೇಳಿ ಗಂಡನನ್ನು ಕೇಸಿನಲ್ಲಿ ಫಿಟ್ ಮಾಡಲು ಹೋಗಿ ಸ್ವತ: ಪತ್ನಿಯೇ ಜೈಲು ಸೇರಿದ ಘಟನೆ ಬೆಂಗಳುರಿನ ಹೊರ ವಲಯ ಆನೇಕಲ್‍ನಲ್ಲಿ ಬೆಳಿಕಗೆ ಬಂದಿದೆ
ಆನೇಕಲ್‍ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ (Uttara Karnataka) ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು. ಇತ್ತೀಚೆಗಿನ ದಿನಗಳಲ್ಲಿ ಒಳ್ಳೊಳ್ಳೆ ಸಂಸಾರಕ್ಕೆ ಹುಳಿ ಹಿಂಡುತ್ತಿರುವ ಸೋಷಿಯಲ್ ಮೀಡಿಯಾ ಇಲ್ಲೂ ಕೂಡ ತನ್ನ ಆಟ ಆಡಿದೆ. ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಬಳಸುವ ಖಯಾಲಿ. ಅದರಲ್ಲಿ ಅವರಿಗೆ ರಾಮ್ ಪ್ರಸಾದ್ ಎಂಬಾತ ಗಂಟು ಬಿದ್ದಿದ್ದಾನೆ. ಇಬ್ಬರ ಮಧ್ಯೆ ಫೋನ್ ನಲ್ಲಿ ಸರಸ ಸಲ್ಲಾಪ ಶುರುವಾಗಿದೆ . ನಿತ್ಯ ನಿರಂತರ ಚ್ಯಾಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ
ಸ್ವಲ್ಪ ದಿನದಲ್ಲೆ ಇದು ವಿದ್ಯಾಳ ಗಂಡ ಕಿರಣ್ ಗೆ ಗೊತ್ತಾಗಿದೆ. ಸಿಟ್ಟುಗೊಂಡ ಆತ ವಿದ್ಯಾಳ ಫೊನನ್ನು ತೆಗೆದು ಎಸೆದಿದ್ದಾನೆ ಅದು ಹುಡಿ ಹುಡಿಯಾಗಿದೆ. ಗಂಡ ಅತ್ತ ಕೆಲಸಕ್ಕೆ ಹೋಗುತ್ತಲೇ ವಿದ್ಯಾ ಇನ್ನೊಂದು ಫೊನ್ ಮೂಲಕ ಪ್ರಿಯಕರನನ್ನು ಸಂಪರ್ಕಿಸಿ ಗಂಡ ಮೊಬೈಲ್ ಒಡೆದು ಹಾಕಿದ ವಿಷಯ ತಿಳಿಸಿದ್ದಾಳೆ.
ತಕ್ಷಣ ತನ್ನ ಪ್ರಿಯತಮೆಯ ಗಂಡನಿಗೆ ಬುದ್ದಿ ಕಳುಹಿಸಲು ಜತೆಗೆ ಆತನನ್ನು ಜೈಲಿಗೆ ಕಳುಹಿಸಲು ರಾಮ್ ಪ್ರಸಾದ್ ಮಾಸ್ಟರ್ ಪ್ಲ್ಯಾನ್ ಹೆಣೆದಿದ್ದಾನೆ. ಅದರಂತೆ ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ವೊಂದನ್ನು ಬರೆದು ವಿದ್ಯಾಳ ಮೊಬೈಲ್ ಗೆ ಫಾರ್ವಾರ್ಡ್ ಮಾಡಿದ್ದಾನೆ. ಇದನ್ನು ಗಂಡನ ಮೊಬೈಲ್ ಗೆ ಫಾರ್ವಾಡ್ ಮಾಡುವಂತೆ ತಿಳಿಸಿದ ಆತ ಬಳಿಕ ಅದನ್ನು ಗಂಡನ ನಂಬರ್‍ನಿಂದ ಪೊಲೀಸ್ ಅಧಿಕಾರಿಗಳಿಗೆ ಸೆಂಡ್ ಮಾಡುವಂತೆ ತಿಳಿಸಿದ್ದ.
Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?
ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್‍ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಇತ್ತ ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕ್ರೀಡೆ
PKL 2023: ಪ್ರೊ ಕಬಡ್ಡಿ ಲೀಗ್: ವಿಜಯ ಪತಾಕೆ ಹಾರಿಸಿದ ಗುಜರಾತ್ ಜೈಂಟ್ಸ್ – ರಣ ರೋಚಕ ಪಂದ್ಯದಲ್ಲಿ ಯು ಮುಂಬಾಕ್ಕೆ ಜಯ

ಅಹಮದಾಬಾದ್: ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‍ನ 10ನೇ ಸೀಸನ್ ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.
ಸೋನು ಅವರ ಉತ್ತಮ ರೈಡಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ, ಶನಿವಾರ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 38–32 ಪಾಯಿಂಟ್ಸ್‌ಗಳಿಂದ ಸೋಲಿಸಿತು. ಗುಜರಾತ್ ಜೈಂಟ್ಸ್ ಪರ ಅದ್ಭುತ ರೈಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್ ಗಳ ಮೂಲಕ 5 ಅಂಕ ಗಳಿಸಿದರು.
ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವು 16 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್ ತಂಡ 13 ಪಾಯಿಂಟ್ಸ್ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಕಂಬ್ಯಾಕ್ ಮಾಡಿತು.
ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ 22 ಹಾಗೂ ಟೈಟಾನ್ಸ್ 16 ಅಂಗ ಗಳಿಸಿದರು. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 10 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿದರೆ, ತೆಲುಗು ಟೈಟಾನ್ಸ್ 9 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ 38-32 ಅಂತರದಿಂದ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡವು ಭರ್ಜರಿ ಜಯ ಸಾಧಿಸಿತು.
ಯು ಮುಂಬಾಕ್ಕೆ ಜಯ:
ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 34–31 ಪಾಯಿಂಟ್‌ಗಳಿಂದ ಯು.ಪಿ ಯೋಧಾಸ್ ತಂಡವನ್ನು ಸೋಲಿಸಿತು.ರಣರೋಚಕ ಹೋರಾಟದಲ್ಲಿ ಒಂದು ಹಂತದಲ್ಲಿ ಉಭಯ ತಂಡಗಳು 30-30 ಅಂಕ ಸಂಪಾದಿಸಿ ಸಮಬಲದ ಹೋರಾಟ ನೀಡಿತ್ತು.
ಯು ಮುಂಬಾ ಪರ ಅಮಿರ್ ಮೊಹಮ್ಮದ್ 6 ರೇಡ್ ಪಾಯಿಂಟ್ಸ್, 5 ಬೋನಸ್ ಹಾಗೂ 1 ಟ್ಯಾಕ್ಲ್ ಪಾಯಿಂಟ್ನೊಂದಿಗೆ 12 ಅಂಕಗಳಿಸಿದರು.ಅವರಿಗೆ ಉತ್ತಮ ಬೆಂಬಲ ನೀಡಿದ ರಿಂಕು 6 ಪಾಯಿಂಟ್ಸ್ ಕಲೆಹಾಕಿದರು. ಇನ್ನು ಯುಪಿ ಯೋಧ ಪರ ಸುರೇಂದರ್ ಗಿಲ್ ಹಾಗೂ ಅನಿಲ್ ಕುಮಾರ್ ತಲಾ 7 ಅಂಕ ಗಳಿಸಿದರು.
-
ಸುಳ್ಯ2 days ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು23 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್23 hours ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು