ನಿಧನ ವಾರ್ತೆ
ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷ, 2 ಬಾರಿ ಕಾಂಗ್ರೇಸಿನ ಅಭ್ಯರ್ಥಿಯಾಗಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ಹಾಗೂ ರಾಜಗೋಪುರದ ರುವಾರಿ ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಇನ್ನಿಲ್ಲ

ಇತಿಹಾಸ ಪ್ರಸಿದ್ಧ ಕಿಲ್ಲೆ ಮೈದಾನದ ದೇವತಾ ಸಮಿತಿ ಗಣೇಶೋತ್ಸವ ಅಧ್ಯಕ್ಷರಾದ ಹಿರಿಯ ಕಾಂಗ್ರೇಸ್ ಮುಖಂಡರಾದ ಎನ್ ಸುಧಾಕರ್ ಶೆಟ್ಟಿ ಸೆ.10ರಂದು ನಿಧನರಾದರು.
ಸುಧಾಕರ್ ಶೆಟ್ಟಿಯವರು 2016ರಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ದೇವಸ್ಥಾನದ ಧ್ವಜಸ್ತಂಭ ಹಾಗೂ ರಾಜಗೋಪುರದ ಸಮರ್ಪಣೆಯ ರುವಾರಿಯಾಗಿದ್ದರು.
ನೆಲ್ಲಿಕಟ್ಟೆ ಸುಧಾಕರ ಶೆಟ್ಟಿಯವರು ದೇವತಾ ಸಮಿತಿಯ ಅಧ್ಯಕ್ಷರಾಗಿ ಕಳೆದ 40 ವರ್ಷಗಳಿಂದ ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸರ್ಮಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು.
ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
1999ಯಲ್ಲಿ ಮತ್ತು 2004 ರಲ್ಲಿ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1999ರಲ್ಲಿ ಬಿಜೆಪಿಯ ಡಿವಿ ಸದಾನಂದ ಗೌಡರು 62306 ಓಟ್ ಪಡೆದರೆ ಸುಧಾಕರ್ ಶೆಟ್ಟಿಯವರು 55013 ಓಟು ಪಡೆದಿದ್ದರು.
2004ರಲ್ಲಿ ಬಿಜೆಪಿಯ ಶಕುಂತಲ ಶೆಟ್ಟಿ 65119 ಓಟ್ ಪಡೆದರೆ 54007 ಓಟ್ ಪಡೆದು ಸೋಲನನ್ನುಭವಿಸಿದ್ದರು. ವಿದ್ಯಾರ್ಥಿ ದಿಸೆಯಿಂದಲೂ ಸಾಮಾಜಿಕ ಧಾರ್ಮಿಕ ರಾಜಕೀಯ, ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರು ನಗರದ ನೆಲ್ಲಿಕಟ್ಟೆಯ ನಿವಾಸಿಯಾಗಿದ್ದು ಸುಧಾಣ್ಣ ಎಂದೇ ಪುತ್ತೂರಿನ ಜನತೆ ಕರೆಯುತ್ತಾರೆ.
ನಿಧನ ವಾರ್ತೆ
sit ups as punishment: ಒಡಿಶಾದಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಬಸ್ಕಿ ತೆಗೆಸಿದ್ದರಿಂದ ಬಾಲಕ ಸಾವು

ತರಗತಿ ಸಮಯದಲ್ಲಿ ಆಟವಾಡಿರುವುದಕ್ಕೆ ಶಿಕ್ಷಕರೊಬ್ಬರು ಬಸ್ಕಿ ತೆಗೆಸಿದ್ದರಿಂದ ಶಿಕ್ಷೆಗೆ ಒಳಗಾದ ನಾಲ್ಕನೇ ತರಗತಿ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಜಾಜ್ಪುರ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಮಂಗಳವಾರ ಸಂಭವಿಸಿದೆ.
ಒರಾಲಿಯಲ್ಲಿರುವ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ರುದ್ರ ನಾರಾಯಣ ಸೇಥಿ ತರಗತಿ ಅವಧಿಯಲ್ಲಿ ನಾಲ್ವರು ಸಹಪಾಠಿಗಳೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದ. ಇದನ್ನು ನೋಡಿದ ಶಿಕ್ಷಕರೊಬ್ಬರು ರುದ್ರ ನಾರಾಯಣ ಸೇಥಿಗೆ ಬಸ್ಕಿ ತೆಗೆಯುವ ಶಿಕ್ಷೆ ನೀಡಿದ್ದರು.
ಈ ಸಂದರ್ಭ ರುದ್ರ ನಾರಾಯಣ ಸೇಥಿ ಕುಸಿದು ಬಿದ್ದಿದ್ದಾನೆ. ಕೂಡಲೇ ರಸೂಲ್ಪುರ ಬ್ಲಾಕ್ನ ಒರಾಲಿ ಗ್ರಾಮದ ಸಮೀಪದ ನಿವಾಸಿಯಾಗಿರುವ ಆತನ ಹೆತ್ತವರಿಗೆ ಮಾಹಿತಿ ನೀಡಲಾಗಿತ್ತು. ಅನಂತರ ಬಾಲಕನ ಹೆತ್ತವರು ಹಾಗೂ ಶಿಕ್ಷಕರು ಬಾಲಕನನ್ನು ಸಮೀಪದ ಸಮುದಾಯ ಕೇಂದ್ರಕ್ಕೆ, ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಂತಿಮವಾಗಿ ಕತಕ್ನಲ್ಲಿರುವ ಎಸ್ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಕೊಡೊಯ್ದರು. ಆದರೆ, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಮಂಗಳವಾರ ರಾತ್ರಿ ಪ್ರಕಟಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಸೂಲ್ಪುರ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ನಿಲಾಂಬರ ಮಿಶ್ರಾ, ತಾನು ಇದುವರೆಗೆ ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ. ಔಪಚಾರಿಕ ದೂರು ಸ್ವೀಕರಿಸಿದರೆ, ತನಿಖೆ ಆರಂಭಿಸುತ್ತೇನೆ ಹಾಗೂ ತಪ್ಪೆಸಗಿದವರ ವಿರುದ್ಧ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ರಸೂಲ್ಪುರ ಬ್ಲಾಕ್ನ ಉಪ ಶಿಕ್ಷಣಾಧಿಕಾರಿ ಪ್ರವಾಂಜನ್ ಪಾಟಿ ಶಾಲೆಗೆ ಭೇಟಿ ನೀಡಿದ್ದಾರೆ ಹಾಗೂ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ನಿಧನ ವಾರ್ತೆ
Heart Attack | ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಪತ್ರಕರ್ತ ಶೇಖರ್ ಅಜೆಕಾರು ಹೃದಯಾಘಾತದಿಂದ ನಿಧನ

ಕಾರ್ಕಳ : ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರು (54) ಅವರು ಅ. 31ರಂದು ಹೃದಯಾಘಾತದಿಂದ (Heart Attack) ನಿಧನ ಹೊಂದಿದ್ದಾರೆ. ಮಂಗಳವಾರ ಬೆಳಿಗ್ಗೆ ಕಾರ್ಕಳ ಅಜೆಕಾರಿನ ತನ್ನ ಮನೆಯಲ್ಲಿ ಕುಸಿದು ಬಿದ್ದ ಶೇಖರ್ ಅವರನ್ನು ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿಯಾದ್ರೂ ಆ ವೇಳೆಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕವಿಗೋಷ್ಟಿಯಂಥ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದ ಶೇಖರ ಅಜೆಕಾರು ಮುಂಬಯಿಯಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದವರು. ಮುಂಬಯಿಯ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಅವರು ಬಳಿಕ ಮಂಗಳೂರಿನ ಜನವಾಹಿನಿಗೆ ಸೇರಿದ್ದರು.
ಅನಂತರ ಕನ್ನಡ ಪ್ರಭ ಸಹಿತ ಕೆಲವು ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇತ್ತೇಚೆಗಿನ ಕೆಲವು ವರ್ಷಗಳಿಂದ ಪತ್ರಿಕೋದ್ಯಮ ಬಿಟ್ಟು ಪೂರ್ಣವಾಗಿ ಸಾಹಿತ್ಯ ಮತ್ತು ಸಂಘಟನೆಯ ಕೆಲಸಗಳಲ್ಲಿ ತೊಡಗಿದ್ದರು.
ಗ್ರಾಮೀಣ ಭಾಗದ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದ ಶೇಖರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ನಿಧನ ವಾರ್ತೆ
ಬೆಳ್ತಂಗಡಿ : ಉದ್ಯಮಿಯ ಪತ್ನಿ ಆತ್ಮಹ*ತ್ಯೆ

ಬೆಳ್ತಂಗಡಿ ಅಗಸ್ಟ್ 21 : ವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿರುವ ಆಲ್ವಿನ್ ಎಂಬವರ ಪತ್ನಿ ಸಿಂಥಿಯಾ(40) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್14 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ11 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?