ಪುತ್ತೂರು: ಮಹಿಳೆಯೊಬ್ಬರು ಬಸ್ ನಲ್ಲಿ ಸಂಚಿಸುವ ಸಂದರ್ಭದಲ್ಲಿ ವ್ಯಕ್ತಿ ದುರ್ನಡತೆ ತೋರಿಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಳಿಸರು ಬಂಧಿಸಿದ್ದಾರೆ
ಪುತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿ ಸೆ.೬ರಂದು ಪ್ರಯಾಣಿಸುತ್ತಿದ್ದಾಗ, ಪಕ್ಕದಲ್ಲಿದ್ದ ವ್ಯಕ್ತಿ ಅನುಚಿತವಾಗಿ ವರ್ತಿಸಿ, ಬಸ್‌ನಿಂದ ಇಳಿಯುವ ವೇಳೆ ಚೀಟಿಯೊಂದರಲ್ಲಿ ಮೊಬೈಲ್ ನಂಬರನ್ನು ಫಿರ್ಯಾದುದಾರರಿಗೆ ನೀಡಿ ಕರೆಮಾಡುವಂತೆ ಕೈ ಸನ್ನೆ ಮಾಡಿರುವುದಾಗಿ ತಿಳಿಸಿದ ಬಗ್ಗೆ ಸಂತ್ರಸ್ಥ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ( ಟ್ವಿಟ್ಟರ್) ದಲ್ಲಿ ಬರೆದಿದ್ದಾರೆ.
ಮಹಿಳೆಯಿಂದ ದೂರನ್ನು ಸ್ವೀಕರಿಸಿಕೊಂಡು ಬೆಳ್ಳಾರೆ ಪೊಲೀಸ್ ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.