ಬೆಂಗಳೂರು: ಬೈಂದೂರು ಕ್ಷೇತ್ರದ ಪ್ರಭಾವಿ ಕಾಂಗ್ರೇಸ್ ನಾಯಕ , 2023ರ ಕಾಂಗ್ರೇಸ್‍ನ ಅಭ್ಯರ್ಥಿಯಾಗಿದ್ದ ಗೋಪಾಲ ಪೂಜಾರಿಯೊಂದಿಗೆ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೇಸ್‍ನ ರಾಜ್ಯ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರನ್ನು ಭೇಟಿಯಾಗಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ.ರಾಜೇಗೌಡ ಅವರು ಇಂದು ನನ್ನನ್ನು ಕುಮಾರ ಕೃಪಾದಲ್ಲಿ ಭೇಟಿ ಮಾಡಿದರು. ಈ ವೇಳೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು ಎಂದು ಡಿಕೆ ಶಿವಕುಮಾರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಯಡಿಯೂರಪ್ಪ ತಂಡದೊಂದಿಗಿದ್ದ ಸುಕುಮಾರ್ ಶೆಟ್ಟಿ ಪ್ರಭಾವಿ ಮುಖಂಡರಾಗಿದ್ದರು. 2023ರಲ್ಲಿ ಗುರುರಾಜ್ ಗಂಟಿಹೊಳಿ ಗೆ ಬಿಜೆಪಿ ಟಿಕೇಟ್ ಘೋಷಣೆಯಾದಗ ಮೊದಲು ವಿರೋಧ ವ್ಯಕ್ತಪಡಿಸಿದರು.
ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಡಿಕೆಶಿ ಪಾಲ್ಗೊಂಡಿದ್ದರು.
ಇಂದು ಮತ್ತೊಬ್ಬ ಪ್ರಭಾವಿ ಬಿಜೆಪಿ ನಾಯಕ ಮುಂಬೈ ತಂಡದ ಶಿವರಾಮ್ ಹೆಬ್ಬಾರ್ ರು ಡಿಕೆಶಿಯನ್ನು ಭೇಟಿ ಮಾಡಿದ್ದರು.
ಇತ್ತೀಚೆಗಷ್ಟೇ ರೇಣುಕಾಚಾರ್ಯ, ತೇಜಸ್ವಿನಿ ಅನಂತಕುಮಾರ್, ಬಿ ಸಿ ಪಾಟೀಲ್ ಸಹಿತ ಹಲವು ನಾಯಕರು ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿದ್ದರು.