ಐದೂವರೆ ತಿಂಗಳಿನಲ್ಲಿಯೇ ದಕ್ಷ ಅಧಿಕಾರಿ ಮಂಗಳೂರು ಪೊಲೀಸ್‌ ಕಮೀಷನರ್‌ ಕುಲದೀಪ್ ಜೈನ್ ಗೆ ಪೋಸ್ಟಿಂಗ್‌ ತೋರಿಸದೆ ದಿಢೀರ್‌ ವರ್ಗಾವಣೆ – ಹಿಂದಿರುವ ಕಾಣದ ಕೈ ಯಾವುದು ಗೊತ್ತೇ?

ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಪಿಆರ್‌ಓ ರೀತಿ ಕೆಲಸ ಮಾಡುವ ವ್ಯಕ್ತಿಯೇ ಈ ಚಾಕಲೇಟ್‌ ಸರಬರಜು ಮಾಡುತ್ತಿದ್ದ ಪ್ರಕರಣದ ಕಿಂಗ್‌ ಪಿನ್‌ ಎನ್ನಲಾಗುತ್ತಿದೆ. ಆ ಪ್ರಕರಣದಲ್ಲಿ ಕಿಂಗ್‌ ಪಿನ್‌ ವಿರುದ್ದ ಕೇಸ್‌ ಆಗದಿದ್ದರೂ, ಆತ ಪೊಲೀಸ್‌ ಇಲಾಖೆಯ ರಾಡರ್‌ ನಲ್ಲಿದ್ದ
download (2)
Ad Widget

Ad Widget

Ad Widget

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಬಗ್ಗೆ ಆದೇಶ ಹೊರಬಿದ್ದಿದೆ. ಈ ವರ್ಗಾವಣೆ ಆದೇಶದಲ್ಲಿ ಅಚ್ಚರಿ ತಂದಿರುವುದು ಮಂಗಳೂರು ಪೊಲೀಸ್‌ ಕಮೀಷನರ್‌ ಕುಲದೀಪ್ ಜೈನ್ ಅವರ ವರ್ಗಾವಣೆ . ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಉಡುಪಿ ಎಸ್ ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಅವರ ಬದಲಿಗೆ ಡಾ ಅರುಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

Ad Widget

ದಕ್ಷ ಅಧಿಕಾರಿ ಎಂದೇ ಪ್ರಖ್ಯಾತಿ ಪಡೆದಿದ್ದ ಕುಲದೀಪ್‌ ಅವರು ಕೇವಲ ಐದೂವರೆ ತಿಂಗಳ ಹಿಂದೆಯಷ್ಟೆ ಮಂಗಳೂರಿಗೆ ಪೋಸ್ಟಿಂಗ್‌ ಪಡೆದಿದ್ದರು. ಇಷ್ಟು ತರಾತುರಿಯಲ್ಲಿ ಕಾಂಗ್ರೆಸ್‌ ನೇತ್ರತ್ವದ ಸಿದ್ದರಾಮಯ್ಯ ಸರಕಾರ ಅವರನ್ನು ವರ್ಗಾವಣೆಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಮೂಡಿಸಿದೆ . ಇದರ ಹಿಂದೆ ಕಾಣದ ಕೈ ಯೊಂದು ಕೆಲಸ ಮಾಡಿದೆ , ಇದರ ಹಿಂದೆ ಡ್ರಗ್ಸ್‌ ಮಾಫಿಯಾದ ನೆರಳಿದೆ ಎಂಬ ಮಾತುಗಳು ಪೊಲೀಸ್‌ ಮೂಲಗಳು ಹೇಳುತ್ತಿವೆ.

Ad Widget

Ad Widget

ತಿಂಗಳ ಹಿಂದೆ ಡ್ರಗ್ಸ್‌ ಲೇಪಿತ ಚಾಕಲೇಟ್‌ ಮಾರುವ ಜಾಲವೊಂದನ್ನು ಕಮೀಷನರ್‌ ನೇತ್ರತ್ವದ ಪೊಲೀಸರು ಬೇಧಿಸಿದ್ದರು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಪಿಆರ್‌ಓ ರೀತಿ ಕೆಲಸ ಮಾಡುವ ವ್ಯಕ್ತಿಯೇ ಈ ಚಾಕಲೇಟ್‌ ಸರಬರಜು ಮಾಡುತ್ತಿದ್ದ ಪ್ರಕರಣದ ಕಿಂಗ್‌ ಪಿನ್‌ ಎನ್ನಲಾಗುತ್ತಿದೆ. ಆ ಪ್ರಕರಣದಲ್ಲಿ ಕಿಂಗ್‌ ಪಿನ್‌ ವಿರುದ್ದ ಕೇಸ್‌ ಆಗದಿದ್ದರೂ, ಆತ ಪೊಲೀಸ್‌ ಇಲಾಖೆಯ ರಾಡರ್‌ ನಲ್ಲಿದ್ದ. ಈ ವ್ಯಕ್ತಿಯ ಮೇಲೆ ಮರ್ಡರ್‌ ಕೇಸೊಂದು ಈಗಾಗಲೇ ಇದ್ದು , ವಿಚಾರಣೆಯಲ್ಲಿದೆ. ಈತನ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ, ಈ ವ್ಯಕ್ತಿ ಎಲ್ಲ ಪಕ್ಷದವರೊಂದಿಗೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದಾನೆ. ಇದೆ ಸಂಪರ್ಕವನ್ನು ಬಳಸಿಕೊಂಡು ಅಡಳಿತರೂಢ ಪಕ್ಷದ ಶಾಸಕರೊಬ್ಬರ ಮೂಲಕ ಕಮೀಷನರ್‌ ಬದಲಾವಣೆಗೆ ಯತ್ನಸಿದ್ದ ಎನ್ನಲಾಗುತ್ತಿದೆ.

Ad Widget

ಇದರ ಜತೆಗೆ ಮಂಗಳೂರು ಸಿಸಿಬಿ ಪೊಲೀಸರ ಮೂಲಕ ಕಮೀಷನರ್‌ ಕುಲದೀಪ್‌ ಅವರು ಡ್ರಗ್‌ ದಂಧೆ ವಿರುದ್ದ ಸಮರ ಸಾರಿದ್ದರು. ಈ ಡ್ರಗ್ಸ್‌ ದಂಧೆಕೋರರ ವಿರುದ್ದ ಯಾವುದೇ ಮುಲಾಜಿಗೆ ಒಳಗಾಗದೇ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರು. ಕಳೆದ 3 ತಿಂಗಳ ಅವಧಿಯಲ್ಲಿ ನೂರಾರು ಡ್ರಗ್‌ ಪೆಡ್ಲರ್‌ ಗಳ ಹೆಡೆಮುರಿ ಕಟ್ಟಿದ್ದರು.
ಎರಡು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಯಲಹಂಕದಲ್ಲಿದ್ದುಕೊಂಡು ಮಂಗಳೂರು, ಬೆಂಗಳೂರಿಗೆ ಎಂಡಿಎಂಎ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜಿರೀಯನ್‌ ಪ್ರಜೆ ಮಹಿಳೆಯನ್ನು ಬಂದಿಸಿದ್ದರು. ಈ ಮೂಲಕ ಡ್ರಗ್‌ ದಂಧೆಯ ಮೂಲಕ್ಕೆ ಕಮೀಷನರ್‌ ಕೈ ಹಾಕಿದ್ದರು. ಇದು ಜಿಲ್ಲೆಯ ಡ್ರಗ್‌ ದಂಧೆಕೋರರನ್ನು ಕೆರಳಿಸಿತ್ತು.

Ad Widget

Ad Widget

ಇವರ ಜತೆ ಚಾಕಲೇಟ್‌ ದಂಧೆಕೋರನ್ನು ಸೇರಿದ್ದಾನೆ. ಕರಾವಳಿ ಮೂಲದ ಶಾಸಕರೊಬ್ಬರ ಮೂಲಕ ಕಮೀಷನರ್‌ ವರ್ಗಾವಣೆಗೆ ಪ್ರಯತ್ನಿಸಲಾಗಿದೆ ಎMದು ಮೂಲಗಳಿಂದ ತಿಳಿದು ಬಂದಿದೆ. ಇದರ ಪರಿಣಾಮವೇ ಈ ವರ್ಗಾವಣೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿದೆ. ಹೀಗಾಗಿಯೇ ಕುಲದೀಪ್‌ ಅವರನ್ನು ವರ್ಗಾವಣೆಗೊಳಿಸಿರವ ಸರಕಾರ ಅವರಿಗೆ ಯವುದೇ ಪೋಸ್ಟಿಂಗ್‌ ತೋರಿಸಲ್ಲ ಎಂದು ಹೇಳಲಾಗುತ್ತಿದೆ.

ಕುಲದೀಪ್‌ ಕುಮಾರ್ ಜೈನ್‌ ಕಳೆದ 2023 ಪೆಬ್ರವರಿ 24 ರಂದು ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿಂದಿನ ಕಮಿಷನರ್ ಆಗಿದ್ದ ಶಶಿಕುಮಾರ್ ವಿರುದ್ದ ಭ್ರಷ್ಟಾಚಾರದ ಆರೋಪ ಅವರ ಅಧಿಕಾರವಧಿಯಲ್ಲಿ ಕೇಳಿ ಬಂದಿತ್ತು. ಹಾಗಿದ್ಧೂ ಅವರು ಎರಡೂವರೆ ವರ್ಷ ಪೂರ್ಣಗೊಳಿಸುವಲ್ಲಿ ಸಪಲರಾಗಿದ್ದರು ಆದರೆ ಕುಲದೀಪ್‌ ಅಧಿಕಾರ ಅವಧಿ ಕೇವಲ ಐದೂವರೆ ತಿಂಗಳಿನಲ್ಲಿ ಮೊಟಕುಗೊಂಡಿದೆ. ಸರಕಾರ ಯಾವುದೇ ಇದ್ದರೂ ಪ್ರಮಾಣಿಕರಿಗೆ ನಬೆಲೆಯಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.

ಅನುಪಮ್ ಅಗರ್ವಾಲ್

ನೂತನ ಆಯುಕ್ತರಾಗಿರುವ ಅನುಪಮ್ ಅಗರ್ವಾಲ್ 2008-ಬ್ಯಾಚ್ IPS ಅಧಿಕಾರಿಯಾಗಿದ್ದು ಮೂಲತಃ ರಾಜಸ್ಥಾನದ ಜೋದ್‌ಪುರದವರು ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿ ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Leave a Reply

Recent Posts

error: Content is protected !!
%d bloggers like this: