Royal Enfield Bullet 350 : ಎದೆಯಲ್ಲಿ ನಡುಕ ಹುಟ್ಟಿಸುವ ಸದ್ದಿನೊಂದಿಗೆ ಭಾರತದಲ್ಲಿ ಗ್ರ್ಯಾಂಡ್‌ ಎಂಟ್ರಿ – ಅಗ್ಗದ ದರದೊಂದಿಗೆ ಹೊಸ ರಾಯಲ್ ಎನ್‌ಫೀಲ್ಡ್‌ ಬುಲೆಟ್ 350 : ಬೆಲೆ, ವೈಶಿಷ್ಟ್ಯಗಳ ವಿವರ

gallery-thumbnail
Ad Widget

Ad Widget

Ad Widget

ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈಗ ಈ ಕಂಪೆನಿಯು ಮತ್ತೊಂದು ಜಬರ್‌ದಸ್ತ್‌ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅದೇ ಬುಲೆಟ್ 350. ಮಿಲಿಟರಿ, ಸ್ಟ್ಯಾಂಡರ್ಡ್ ಮತ್ತು ಗೋಲ್ಡ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಸಿಗಲಿದೆ. ಈ ಹೊಸ ಬೈಕ್ ಅನ್ನು ಕಂಪನಿ ಮಿಲಿಟರಿ ರೆಡ್, ಮಿಲಿಟರಿ ಬ್ಲಾಕ್, ಸ್ಟ್ಯಾಂಡರ್ಡ್ ಮೆರೂನ್, ಸ್ಟ್ಯಾಂಡರ್ಡ್ ಬ್ಲಾಕ್ ಮತ್ತು ಬ್ಲ್ಯಾಕ್ ಗೋಲ್ಡ್ ಹೀಗೆ ಐದು ಬಣ್ಣಗಳ ಆಯ್ಕೆಯಲ್ಲಿ ನೀಡುತ್ತದೆ.

Ad Widget

ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ದೇಶಾದ್ಯಂತ ಇರುವ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಅನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. . ಈ ಬೈಕ್‌ಗೆ ಬುಕ್ಕಿಂಗ್ ಕೂಡಾ ಶುರುವಾಗಿದೆ2023ರ ಸೆಪ್ಟೆಂಬರ್ 3ರಿಂದ ಈ ಬೈಕ್‌ ಅದಿಕೃತವಾಗಿ ರಸ್ತೆಗಿಳಿಯಲಿದೆ.

Ad Widget

Ad Widget

ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಜೆ-ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದೇ ಪ್ಲಾಟ್‌ಫಾರ್ಮ್ ಅನ್ನು ಕ್ಲಾಸಿಕ್ 350, ಹಂಟರ್ 350 ಮತ್ತು ಮೆಟಿಯೊರ್ 350 ಬೈಕ್ ಗಳು ಕೂಡ ಆಧರಿಸಿದೆ. ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನಲ್ಲಿ 349 ಸಿಸಿ, ಏರ್-ಆಯಿಲ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Ad Widget

ರೇಟ್

Ad Widget

Ad Widget

ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಬೈಕ್‌ನ ಆರಂಭಿಕ ಎಕ್ಸ್‌ಶೋರೂಮ್ ಬೆಲೆ 1.73 ಲಕ್ಷ ರೂಪಾಯಿ
ಹೊಸ ರಾಯಲ್ ಎನ್‌ಫೀಲ್ಡ್‌ ಬುಲೆಟ್ 350 . ಹೊಸ ಬೈಕ್‌ನ ರೂಪಾಂತರ ಮತ್ತು ಬೆಲೆಯ ವಿವರ ಇಲ್ಲಿದೆ
ರೂಪಾಂತರಗಳು – ಎಕ್ಸ್ ಶೋ ರೂಂ ಬೆಲೆ
ಬುಲೆಟ್ 350 ಮಿಲಿಟರಿ – 1,73,562 ರೂಪಾಯಿ
ಬುಲೆಟ್ 350 ಸ್ಟ್ಯಾಂಡರ್ಡ್ – 1,97,436 ರೂಪಾಯಿ
ಬುಲೆಟ್ 350 ಗೋಲ್ಡ್‌ – 2,15,801 ರೂಪಾಯಿ‌

2023 ರಾಯಲ್‌ ಎನ್‌ಫೀಲ್ಡ್‌ ಬುಲೆಟ್ 350 ಕ್ಲಾಸಿಕ್ ಬುಲೆಟ್ 350 ಸ್ಟೈಲಿಂಗ್ ಅನ್ನು ಉಳಿಸಿಕೊಂಡಿದೆ. ಈ ಹೊಸ ಬೈಕ್ ಹೊಸ ಹೆಡ್‌ಲೈಟ್ ಮತ್ತು ಟೈಲ್‌ಲೈಟ್ ಅನ್ನು ಹೊಂದಿದೆ. ಫ್ರೇಮ್, ಎಂಜಿನ್ ಮತ್ತು ಸೀಟ್ ವಿನ್ಯಾಸ, ಹ್ಯಾಂಡಲ್ ಸೇರಿ ಸಾಕಷ್ಟು ಅಂಶಗಳಲ್ಲಿ ಬದಲಾವಣೆಗಳು ಕಾಣುತ್ತಿವೆ. ಜನಪ್ರಿಯ ಕ್ಲಾಸಿಕ್ 350ಯಿಂದ ಪಡೆದ ಹೊಸ ಚಾಸಿಸ್ ಸೆಟಪ್ ಅನ್ನು ಇದು ಒಳಗೊಂಡಿದ್ದು, ಈ ಬೈಕ್ ಹೊಸ ಡಿಜಿಟಲ್-ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಎಲ್‌ಸಿಡಿ ಸ್ಕ್ರೀನ್, ಹೊಸ ಹ್ಯಾಂಡಲ್ ಬಾರ್, ಸ್ವಿಚ್ ಗೇರ್ ಮತ್ತು ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ. ಟಾಪ್-ಸ್ಪೆಕ್ ರೂಪಾಂತರ ಬ್ಲ್ಯಾಕ್ಡ್-ಔಟ್ ಎಂಜಿನ್ ಸೇರಿ ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕ್ಲಾಸಿಕ್ 350 ಮಾದರಿಯಲ್ಲಿ ಜೆ-ಸರಣಿಯ ಎಂಜಿನ್ ಅನ್ನು ಹೊಂದಿದೆ. ಇದು ಈ ಬೈಕ್‌ನ ಪ್ರಮುಖ ಅಪ್‌ಡೇಟ್ ಆಗಿದೆ. ಈ ಬೈಕ್ 349ಸಿಸಿ , ಸಿಂಗಲ್-ಸಿಲಿಂಡರ್, ಏರ್-ಆಯಿಲ್-ಕೂಲ್ಡ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಇದು 20.17 ಎಚ್‌ಪಿ ಶಕ್ತಿ ಮತ್ತು 27 Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350ಯ ಮುಂಭಾಗದ ವೀಲ್‌ನಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕಿಂಗ್ ಕರ್ತವ್ಯಗಳನ್ನು ನಿರ್ವಹಿಸುತ್ತದೆ. ಈ ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಕ್ಲಾಸಿಕ್ 350 ಮಾದರಿಗಳ ನಡುವೆ ಬರುತ್ತದೆ. 2023ರ ಬುಲೆಟ್‌ 350 ಮಾದರಿಯು ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಕೂಡ ಇದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಕಂಪನಿಯ ಹಳೆಯ ವಿನ್ಯಾಸದ ಶೈಲಿಯನ್ನು ಇಟ್ಟುಕೊಂಡು ವಿನೂತನ ವಿನ್ಯಾಸ, ವೈಶಿಷ್ಟ್ಯ ಮತ್ತು ಎಂಜಿನ್ ಅನ್ನು ನೀಡುವ ಮೂಲಕ ಬಿಡುಗಡೆಯಾಗಿದೆ.

ಈ ಬೈಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇಂಧನ ಟ್ಯಾಂಕ್‌ನ ಮೇಲೆ ಕೈಯಿಂದ ಚಿತ್ರಿಸಿದ ಗೋಲ್ಡನ್ ಲೈನ್‌ಗಳು. ಇದು ಬುಲೆಟ್ ಬೈಕ್‌ಗಳಿಗೆ ವಿಶಿಷ್ಟವಾಗಿದೆ. ರಾಯಲ್‌ ಎನ್‌ಫೀಲ್ಡ್‌ ಈ ಗೋಲ್ಡನ್ ಲೈನ್‌ಗಳನ್ನು ಹೊಸ ಮಾದರಿಯಲ್ಲೂ ನೀಡುವುದನ್ನು ಮುಂದುವರೆಸಿದೆ. 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಹೋಂಡಾ ಎಚ್’ನೆಸ್ ಸಿಬಿ350 ಮತ್ತು ಜಾವಾ 42 ಸೇರಿ ಇತರ ಬೈಕ್‌ಗಳೊಂದಿಗೆ ಸ್ಪರ್ಧೆಗೆ ನಿಲ್ಲಲಿದೆ.

Leave a Reply

Recent Posts

error: Content is protected !!
%d bloggers like this: