Jailer Success | ಜೈಲರ್ ಸಕ್ಸಸ್ ರಜನಿಕಾಂತ್ ಗೆ ಐಷರಾಮಿ ಕಾರು ಸಹಿತ ರೂ 100 ಕೋಟಿ ಉಡುಗೊರೆ

20230901_153105
Ad Widget

Ad Widget

Ad Widget

ಬೆಂಗಳೂರು: ನಟ ರಜನಿಕಾಂತ್ ಅಭಿನಯದ ಜೈಲರ್ (Jailer Success) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಆ ಚಿತ್ರತಂಡದ ಸಂಭ್ರಮ ಹೆಚ್ಚಾಗಿದೆ.

Ad Widget

ಜೈಲರ್ ಸಿನಿಮಾವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಅವರು ರಜನಿಕಾಂತ್‌ಗೆ ಐಷಾರಾಮಿ ಕಾರು ಸಹಿತ ರೂ.100 ಕೋಟಿ ಉಡುಗೊರೆ ರೂಪದ ಚೆಕ್ ನೀಡಿದ್ದಾರೆ ಎನ್ನಲಾಗಿದೆ.

Ad Widget

Ad Widget

ಉಡುಗೊರೆ ನೀಡಿರುವ ವಿಷಯವನ್ನು ಸನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಕಲಾನಿಧಿ ಮಾರನ್ ಅವರಿಂದ ಉಡುಗೊರೆಯನ್ನು ಸ್ವೀಕರಿಸಿರುವ ಚಿತ್ರ ಗಮನ ಸೆಳೆದಿದೆ. ಕೆಲವು ತಮಿಳು ಸಿನಿಮಾ ತಜ್ಞರ ಪ್ರಕಾರ ಸನ್ ಪಿಕ್ಚರ್ಸ್ ಜೈಲ‌ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ರಜನಿಕಾಂತ್ ಅವರಿಗೆ 7 100 ಕೋಟಿ ಉಡುಗೊರೆ ನೀಡಿದೆ ಎಂದು ತಿಳಿದು ಬಂದಿದೆ.

Ad Widget

ಸನ್ ಪಿಕ್ಚರ್ಸ್ ಕಡೆಯಿಂದ ರಜನಿಕಾಂತ್ ಅವರಿಗೆ ದುಬಾರಿ ಬೆಲೆಯ ಬಿಎಂಡಬ್ಲೂ X7 ಕಾರನ್ನು ಉಡುಗೊರೆ ಸಹ ನೀಡಲಾಗಿದೆ.ಇದರ ವಿಡಿಯೊವನ್ನು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

Ad Widget

Ad Widget

ಆದರೆ ರೂ. 100 ಕೋಟಿ ಉಡುಗೊರೆ ಬಗ್ಗೆ ರಜನಿಕಾಂತ್ ಅವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ, ರಜನಿಕಾಂತ್, ಶಿವರಾಜ್‌ಕುಮಾರ್‌, ಮೋಹನ್‌ಲಾಲ್ ಮುಖ್ಯಭೂಮಿಕೆಯಲ್ಲಿರುವ ‘ಜೈಲ‌ರ್’ ಚಿತ್ರ ಆಗಸ್ಟ್ 10ರಂದು ಜಗತ್ತಿನಾದ್ಯಂತ ತೆರೆ ಕಂಡಿತ್ತು.

ಅಧಿಕೃತ ಮಾಹಿತಿ ಪ್ರಕಾರ ಜೈಲರ್ ಸಿನಿಮಾ ಇದುವರೆಗೆ ರೂ. 600 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಸನ್ ಪಿಕ್ಚರ್ಸ್ ತಮ್ಮ ನಿರ್ಮಾಣದ ಇನ್ನೊಂದು ಚಿತ್ರದಲ್ಲಿ ಅಭಿನಯಿಸುವಂತೆ ರಜನಿಕಾಂತ್ ಅವರನು ಕೇಳಿಕೊಂಡಿದೆ.

Leave a Reply

Recent Posts

error: Content is protected !!
%d bloggers like this: