Connect with us

ಮೈಸೂರು

ನಾದಬ್ರಹ್ಮ ಹಂಸಲೇಖರಿಂದ ದಸರಾ ಉದ್ಘಾಟನೆ – ಸಿದ್ದರಾಮಯ್ಯ ಘೋಷಣೆ

Ad Widget

Ad Widget

ಮೈಸೂರು, ಆಗಸ್ಟ್ 29: ಈ ಬಾರಿಯ ದಸರಾ ಮಹೋತ್ಸವವನ್ನು ನಾಡಿನ ಖ್ಯಾತ
ಸಂಗೀತ ನಿರ್ದೇಶಕ ಹಂಸಲೇಖ ಅವರ ಮೂಲಕ ಈ ಬಾರಿಯ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

Ad Widget

Ad Widget

Ad Widget

Ad Widget

ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

Ad Widget

Ad Widget

Ad Widget

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ , ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗಿದ್ದರು.

Ad Widget
Click to comment

Leave a Reply

ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತ ‘ಅರ್ಜುನ’ ಸಕಲೇಶಪುರದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯ ಕಾಳಗದಲ್ಲಿ ಮೃತ್ಯು – ಪ್ರಾಣಾರ್ಪಣೆ ವೇಳೆಯೂ ಹಲವರ ಪ್ರಾಣ ರಕ್ಷಿಸಿದ ಅರ್ಜುನ

Ad Widget

Ad Widget

ಹಾಸನ ಡಿ.4: ಹಾಸನ ಜಿಲ್ಲೆಯ ಸಕಲೇಶಪುರ (Sakleshpura) ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ನಡೆದ ಕಾಳಗದಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟಿದೆ.

Ad Widget

Ad Widget

Ad Widget

Ad Widget

ಬರೋಬ್ಬರಿ 22 ವರ್ಷಗಳ ಕಾಲ ಜಂಬೂ ಸವಾರಿಯಲ್ಲಿ ಅರ್ಜುನ ಪಾಲ್ಗೊಂಡಿತ್ತು. ಸಾಕಾನೆ ಅರ್ಜುನ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 2012ರಿಂದ 2019ರವರೆಗೆ 8 ವರ್ಷಗಳ ಕಾಲ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿತ್ತು.

Ad Widget

Ad Widget

Ad Widget

ಸೋಮವಾರ ಬೆಳಗ್ಗೆಯೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಡಾನೆಗಳು ಇದ್ದ ಸ್ಥಳಕ್ಕೆ ಹೋದಾಗ 12 ಆನೆಗಳಿದ್ದವು. ಆನೆಗಳ ಗುಂಪನ್ನು ಗಂಡಾನೆಯೊಂದು ಲೀಡ್​ ಮಾಡ್ತಿತ್ತು. ಕಾಡಾನೆ ಮತ್ತಿನಲ್ಲಿ ಇದ್ದರೂ ಅರ್ಜುನ ಕಾಳಗಕ್ಕೆ ಇಳಿದಿದ್ದ ಎಂದು ಅವರು ತಿಳಿಸಿದ್ದಾರೆ.

Ad Widget

ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಮತ್ತಿನಲ್ಲಿದ್ದಾಗ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿದೆ. ಇದೇ ವೇಳೆ ಇತರ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಿಹೋಗಿದ್ದಾರೆ. ಆದರೆ, ಅರ್ಜುನ ಮಾತ್ರ ಅದರ ಜತೆ ಕಾಳಗ ನಡೆಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.

Ad Widget

Ad Widget

ಇದೀಗ ಮೃತಪಟ್ಟಿರುವ ಅರ್ಜುನ ಆನೆ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತ ಕಾಡಾನೆಗಳು ಇನ್ನೂ ಓಡಾಡುತ್ತಿವೆ. ಮೇಲಧಿಕಾರಿಗಳಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನ್ ​ಕುಮಾರ್ ತಿಳಿಸಿದ್ದಾರೆ.

ಪ್ರಜ್ಞೆತಪ್ಪಿ ಬಿದ್ದ ಮಾವುತ
ದಸರಾ ಆನೆ ಅರ್ಜುನನ ಸಾವಿನಿಂದ ಮಾವುತ ವಿನೋದ್‌ ಕಂಗಾಲಾಗಿದ್ದಾರೆ. ಅಸ್ವಸ್ಥಗೊಂಡ ಅವರು ಪ್ರಜ್ಞೆತಪ್ಪಿ ಬಿದ್ದಿದ್ದು, ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತರ ಮಾವುತರು ಕೂಡ ಅರ್ಜುನನನ್ನು ಕಳೆದುಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಕಂಡುಬಂದಿದೆ.

ಹಲವರ ಪ್ರಾಣ ಉಳಿಸಿದ ಅರ್ಜುನ
ಮತ್ತಿನಲ್ಲಿದ್ದ ಕಾಡಾನೆಯೊಂದಿಗೆ ಹೋರಾಟ ನಡೆಸುವ ಮೂಲಕ ಅರ್ಜುನ ಹಲವರ ಪ್ರಾಣ ಉಳಿಸಿದೆ. ಅರ್ಜುನ ಹೋರಾಟ ನಡೆಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ. ಕೊಂಚ ಎಡವಟ್ಟಾಗಿದ್ರೂ ಹಲವು ಸಿಬ್ಬಂದಿ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಅರ್ಜುನ ಕಾಡಾನೆ ಜತೆ ಸೆಣಸಿದ್ದರಿಂದ ಇತರ ಆನೆಗಳಿಗೆ ಹಾಗೂ ಸಿಬ್ಬಂದಿಗೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.

Continue Reading

ಮೈಸೂರು

Venugopal Mysore | ಯುವ ಬ್ರಿಗೇಡ್ ಕಾರ್ಯಕರ್ತ ಮೈಸೂರಿನ ವೇಣುಗೋಪಾಲ್ ಕೊಲೆ ಪ್ರಕರಣ – ವಿಪಕ್ಷವನ್ನು ತಡೆಯುವ ಸಾಹಸ ಪಡುತಿದ್ದಾರೆ ಸಂಸದರು..! ಹೆಸರೆತ್ತದೆ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೇ ಸೂಲಿಬೆಲೆ..?

Ad Widget

Ad Widget

ಹನುಮಜಯಂತಿ ಮೆರವಣಗೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಮೈಸೂರಿನ ವೇಣುಗೋಪಾಲ್ ಕೊಲೆ (Venugopal Mysore) ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಚಕ್ರವರ್ತಿ ಸೂಲಿಬೆಲೆ ಹಾಕಿರುವ ಪೋಸ್ಟ್ ಒಂದು ಸಂಸದ ಪ್ರತಾಪ್ ಸಿಂಹ ಮೇಲೆಯೇ ಅನುಮಾನ ಸೃಷ್ಟಿಸುತ್ತಿದೆ. ಹಲವು ರಾಜಕಾರಣಿಗಳು ಕೊಲೆಗಡುಕರ ಪರ ನಿಂತಿದ್ದರು. ಸಂಸದರೊಬ್ಬರು ವಿರೋಧ ಪಕ್ಷದವರ ಧ್ವನಿ ಎತ್ತದಂತೆ ತಡೆದರು ಎಂದು ಪೋಸ್ಟ್ ಹಂಚಿಕೊಂಡಿದ್ದು ಅನುಮಾನ ಸೃಷ್ಟಿಸಿದೆ.

Ad Widget

Ad Widget

Ad Widget

Ad Widget

ಸೂಲಿಬೆಲೆ ಪೋಸ್ಟ್ ಈ ರೀತಿ ಇದೆ,
ಮಿತ್ರ ವೇಣುಗೋಪಾಲನ ಮರಣಾನಂತರದ ಧಾರ್ಮಿಕ ವಿಧಿ ವಿಧಾನಗಳು ನಿನ್ನೆಗೆ ಮುಕ್ತಾಯವಾದವು. ಗೋಪಾಲ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಕಷ್ಟು ಕಾಲ ಬೇಕಾಗಬಹುದು. ಆದರೆ ಅವನ ನೆನಪಿನಲ್ಲಿ ನಡೆಯಬೇಕಿದ್ದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಅಡ್ಡಗಾಲು ಹಾಕಿದ್ದನ್ನು ಜೀವನಪರ್ಯಂತ ಅರ್ಥೈಸಿಕೊಳ್ಳುವುದು ಕಷ್ಟವೇನೋ. ಅವನಿಗಾಗಿ ಎಲ್ಲರೂ ಸೇರಿ ನಾಲ್ಕು ಹನಿ ಕಂಬನಿ ಸುರಿಸಲೂ ಅನುಮತಿ ನಿರಾಕರಿಸಿದ ಮಂದಿಯ ಮಾನಸಿಕತೆ ಕೊಲೆಗಡುಕರದಕ್ಕಿಂತಲೂ ಹೀನವಾದದು.‌ ಮಿತ್ರ ಅರುಣ್ ಶ್ಯಾಮ್ ಉಚ್ಚ ನ್ಯಾಯಾಲಯಕ್ಕೆ ಇದನ್ನೊಯ್ದದ್ದರಿಂದ ಅನುಮತಿ ದಕ್ಕಿತಲ್ಲದೇ ಕಳೆದುಕೊಂಡವನಿಗೆ ಶ್ರದ್ಧಾಂಜಲಿ ಅರ್ಪಿಸುವುದು ಕರ್ತವ್ಯವೆಂದು ಹೇಳಿರುವುದು ನ್ಯಾಯಾಲಯದ ನ್ಯಾಯವಿಧಿಗೆ ಸಾಕ್ಷಿ.

Ad Widget

Ad Widget

Ad Widget

ಗೋಪಾಲನ ಪತ್ನಿ ಸಹೋದರಿ ಪೂರ್ಣಿಮಾ ಬಲು ಬಲಾಢ್ಯ ವ್ಯಕ್ತಿತ್ವದವರು. ಆಕೆ ನಮ್ಮೆಲ್ಲರಿಂದ ಧನಸಹಾಯ ಕೇಳುತ್ತಿಲ್ಲ. ತೀರಿಕೊಂಡವನಿಗೆ ನ್ಯಾಯ ಕೊಡಿಸಿ ಎಂದಷ್ಟೇ ಗೋಗರೆಯುತ್ತಿದ್ದಾಳೆ. ಕೆಲವು ರಾಜಕಾರಣಿಗಳು ಕೊಲೆಗಡುಕರ ಪರವಾಗಿ ತೆರೆಮರೆಯ ಹಿಕಮತ್ತುಗಳನ್ನು ನಡೆಸಿದ್ದಾರೆ. ಸಂಸದರೊಬ್ಬರು ವಿರೋಧ ಪಕ್ಷ ದನಿ ಎತ್ತದಂತೆ ಮಾಡುವುದಕ್ಕೆ ಸಾಹಸ ಪಡುತ್ತಿದ್ದಾರೆ. ನಮ್ಮದ್ದೂ ಇವೆಲ್ಲಕ್ಕೂ ಅಷ್ಟೇ ಪ್ರತಿರೋಧವಿದೆ‌. ಇವೆಲ್ಲವನ್ನೂ ಮೀರಿದ ನಂತರವೂ ಕಾಲ ಎಂಬುದು ಇದೆಯಲ್ಲ, ಅದು ಸರಿಯಾದ ಜವಾಬು ನೀಡುತ್ತದೆ.

Ad Widget

ಗೋಪಾಲನಿಗೆ #ಸದ್ಗತಿ‌ ದೊರೆಯಲಿ.

Ad Widget

Ad Widget

ಈಗಾಗಲೇ ಕೊಲೆ ಪ್ರಕರಣದಲ್ಲಿ ಬಿಜೆಪಿ ಮೈಸೂರು ಮಹಾನಗರ ಪಾಲಿಕೆಯ ಸದಸ್ಯೆಯ ಸಹೋದರ ಬಂಧನ ಆಗಿದೆ.

Continue Reading

ಮೈಸೂರು

Venugopal | ಮೈಸೂರು : ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಹತ್ಯೆ – 6 ಆರೋಪಿಗಳ ಬಂಧನ : ಹೋರಾಟಕ್ಕಿಳಿದಿದ್ದ ಬಿಜೆಪಿಗೆ ಬಿಗ್ ಶಾಕ್ – ಪ್ರಮುಖ ಆರೋಪಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ..!

Ad Widget

Ad Widget

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕಳೆದ ಭಾನುವಾರ ನಡೆದಿದ್ದ ಯುವ ಬ್ರಿಗೇಡ್ ಸಂಘಟನೆ ಸಂಚಾಲಕ ವೇಣುಗೋಪಾಲ (Venugopal) ನಾಯಕ (31) ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಣಿಕಂಠ, ಸಂದೇಶ, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್ ಬಂಧಿತ ಆರೋಪಿಗಳು. ಎಲ್ಲರೂ ಸ್ಥಳೀಯರೇ ಆಗಿದ್ದಾರೆ.

Ad Widget

Ad Widget

Ad Widget

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು‌ ಮಾಹಿತಿ ನೀಡಿದರು. ಉಳಿದವರ ಪತ್ತೆಗೂ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿರುವ ಶಂಕರ್ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ತಮ್ಮ ಎಂದು ವರದಿಯಾಗಿದೆ. ಕಾಂಗ್ರೇಸ್ ವಿರುದ್ಧ ಹೋರಾಟಕ್ಕಿಳಿದ ಬಿಜೆಪಿಗೆ ಈ ವಿಚಾರ ಬಿಗ್ ಶಾಕ್ ನೀಡಿದೆ.

Ad Widget

Ad Widget

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ನಡೆದ ಜಗಳ ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರ ಪಟ್ಟಣದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಮೆರವಣಿಗೆ ವೇಳೆ ಸಂಧಾನ ಮಾಡಿ ಕಳುಹಿಸಲಾಗಿತ್ತು. ಆದರೆ ಭಾನುವಾರ ಮತ್ತೆ ಜಗಳ ನಡೆದಿತ್ತು, ಆ ವೇಳೆ ವೇಣುಗೋಪಾಲ್ ನಾಯಕ್ ಹತ್ಯೆ ಮಾಡಲಾಗಿತ್ತು.

ಈ ಮಧ್ಯೆ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹತ್ಯೆ ಖಂಡಿಸಿ ಗಂಭೀರ ಆರೋಪ ಮಾಡಿದ್ದಾರೆ. ದಲಿತ ಯುವಕ ವೇಣುಗೋಪಾಲ್ ಹತ್ಯೆ ಹಿಂದೆ ಸಚಿವ ಮಹದೇವಪ್ಪನ ಪುತ್ರನ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಮಧ್ಯೆ ಕೊಲೆ ಆರೋಪಿ ಬಿಜೆಪಿ ಸದಸ್ಯೆಯ ಸಹೋದರ ಎನ್ನುವುದು ಗೊತ್ತಾಗಿದೆ.

Continue Reading

Trending

error: Content is protected !!