ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ನಾಣ್ಯವಿಟ್ಟು ಸೌಜನ್ಯ ತಾಯಿಯಿಂದ ಪ್ರಾರ್ಥನೆ -ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ರಿಂದಲೂ ಪ್ರಾರ್ಥನೆ

WhatsApp Image 2023-08-27 at 12.13.53
Ad Widget

Ad Widget

Ad Widget

ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳ ಕ್ಷೇತ್ರದ ಬಳಿ ವಿಹಿಂಪ,ಬಜರಂಗಳ ಕಾರ್ಯಕರ್ತರ ಜತೆ ಪಾದಯಾತ್ರೆಯಲ್ಲಿ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿಯವರು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸದ್ದರು. ಈ ವೇಳೆ ಅವರು ಅಣ್ನಪ್ಪನ ಮುಂದೆ ಕಣ್ಣೀರಿಟ್ಟರು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ನೈಜ ಆರೋಪಿಗಳ ಪತ್ತಗೆ ಪ್ರಾರ್ಥನೆ ಸಲ್ಲಿಸಿದ ಅವರು ಅಣ್ಣಪ್ಪನಿಗೆ ನಾಣ್ಯ ಹಾಕಿ ಕಾಣಿಕೆ ಸಲ್ಲಿಸಿದರು.

Ad Widget

ಅವರಿಗೆ ವಿಹಿಂಪ,ಬಜರಂಗಳ ಮುಖಂಡರು ಸಾಥ್‌ ನೀಡಿದರು. ವಿಹಿಂಪ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಸಂಘಟನೆಯ ಪರವಾಗಿ ಪ್ರಾರ್ಥಿಸಿದರು. ” ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಾಗಿದ್ದರು.

Ad Widget

Ad Widget

Ad Widget

ಸೌಜನ್ಯ ತಾಯಿ ಪ್ರಾರ್ಥನೆ ಸಲ್ಲಿಸಿದ ತಕ್ಷಣ ಸೌಜನ್ಯ ತಾಯಿ ಆರೋಪಿಸಿದವರಿಂದಲೂ ಪ್ರಾರ್ಥನೆ ನಡೆಯಿತು. ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಕೆಲ್ಲ ಗುಡಿ ಮುಂಭಾಗ ಪ್ರಾರ್ಥನೆ ಸಲ್ಲಿಸಿದರು . ಧರ್ಮಸ್ಥಳದಲ್ಲಿ ದುರ್ಮರಣವೊಂದು ನಡೆದಿದ್ದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ. ನಮ್ಮ ಹೆಸರನ್ನು ಅನಾವಶ್ಯಕ ವಾಗಿ ಎಳೆದು ತರಲಾಗಿದೆ. ನಮ್ಮ ಹೆಸರನ್ನು ಎಳೆದು ತರುವವರಿಗೆ ಶಿಕ್ಷೆಯಾಗಲಿ ಪ್ರಾರ್ಥಿಸಿ ಕಾಣಿಕೆ ಸಲ್ಲಿಸಿದರು. ಸಾವಿರಾರು ಜನರ ಮುಂಭಾಗ ಎರಡೂ ಕಡೆಯವರು ಪ್ರಾರ್ಥನೆ ನಡೆಯಿತು.

Ad Widget

ಆ 27 ರಂದು ಬೆಳಿಗ್ಗೆ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳವು ನೇತ್ರಾವತಿ ನದಿಯಿಂದ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ಸಾಮೂಹಿಕ ಪ್ರಾರ್ಥನೆ ಆಯೋಜಿಸಿತ್ತು. ಈ ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಅವರ ಕುಟುಂಬದ ಮಹಿಳಾ ಸದಸ್ಯರು ಭಾಗಿಯಾದ್ದರು.

Ad Widget

Ad Widget

ಈ ಪಾದಯಾತ್ರೆಯಲ್ಲಿ ಸೌಜನ್ಯಳ ತಾಯಿ ಭಾಗವಹಿಸುವುದು ಖಚಿತವಾದ ಕೂಡಲೇ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಸಾಮಾಜಿಕ ಜಾಲತಾಣದಲ್ಲಿ ನಾವು ನಿಮ್ಮಗಾಗಿ ಅಣ್ಣಪ್ಪ ಬೆಟ್ಟದ ಬಳಿ ಕಾಯುತ್ತಿರುತ್ತೇವೆ ಎಂಬ ಸಂದೇಶವನ್ನು ಕುಸುಮಾವತಿಯವರನ್ನು ಉದ್ದೇಶಿಸಿ ಹಾಕಿದರು. ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಅಣ್ಣಪ್ಪ ಸ್ವಾಮಿಯ ಮುಂದೆ ಅಣೆ ಪ್ರಮಾಣ ಮಾಡುವುದಾಗಿ ತಿಳಿಸಿದ್ದರು. ಈ ಬಳಿಕ ಇಂದಿನ ಪಾದಯಾತ್ರೆ ಭಾರೀ ಕುತೂಹಲಕ್ಕೆ ಕಾರಣವಾಯಿತು.

ಅಣ್ಣಪ್ಪ ಬೆಟ್ಟದ ಮುಂಭಾಗ ಧರ್ಮಸ್ಥಳದ ನಾಗರೀಕರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬೆಟ್ಟದ ಸುತ್ತ ಸರ್ಪಗಾವಲು ಹಾಕಿದ್ದರು. ಘಟನೆಯ ಗಂಭೀರತೆಯನ್ನು ಅರಿತ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಶ್ಯಂತ್‌ ಅವರು ಸ್ವತ: ಫೀಲ್ಡ್‌ ಗಿಳಿದಿದ್ದು ಧರ್ಮಸ್ಥಳಕ್ಕೆ ದೌಡಯಿಸಿ ಕಾನೂನು ಸುವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: