Soujnya Case dharmasthala Legal Team clarification ಸೌಜನ್ಯ ಪ್ರಕರಣ : ಆರೋಪಿಗಳೆಂದು ಹೋರಾಟಗಾರರು ಹೇಳುವ ಮೂವರನ್ನು ತನಿಖಾ ಸಂಸ್ಥೆಗಳು ಏನೆಲ್ಲ ಪರೀಕ್ಷೆ ನಡೆಸಲಾಗಿದೆ ಗೊತ್ತೆ..? ಹೋರಾಟಗಾರರು ಜನತೆಯ ನಡುವೆ ಗೊಂದಲ ಸೃಷ್ಟಿಸಿ ಕ್ಷೇತ್ರದ ವಿರುದ್ಧ ಷಡ್ಯಂತ್ರ ಹಣೆಯುತ್ತಿದ್ದಾರೆ : ಶ್ರೀಕ್ಷೇತ್ರ ಧರ್ಮಸ್ಥಳದ ಕಾನೂನು ಸಲಹೆಗಾರರಿಂದ ಮಾಧ್ಯಮ ಪ್ರಕಟನೆ

ಆಗ ಆರೋಪ ಮಾಡುತ್ತಿರುವವರಾಗಲಿ ಅಥವಾ ಇತರ ಯಾರೊಬ್ಬರಾಗಲಿ ಈ ಮೂವರೂ ಸೌಜನ್ಯಳ ಹತ್ಯೆಯಲ್ಲಿ ಭಾಗೀದಾರರಾಗಿದ್ದರು ಎಂದು ಸಿ.ಬಿ.ಐ ತನಿಖಾಧಿಕಾರಿಗಳ ಎದುರು ಬಂದು ಸಾಕ್ಷಿ ನುಡಿಯಲಿಲ್ಲ, ಬದಲಾಗಿ ಇವರು ಆರೋಪಿಗಳೆಂದೂ, ಅವರಿಗೆ ದೊಡ್ಡ ಶಕ್ತಿಗಳ ಬೆಂಬಲ ಇದೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಅಲ್ಲಲ್ಲಿ ಸಭೆ ಮಾಡಿ ಸಾರ್ವಜನಿಕರಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಗೊಂದಲ ಸೃಷ್ಟಿಸುವುದಷ್ಟೇ ಅವರ ಆರಂಭಿಕ ಉದ್ದೇಶವಾಗಿತ್ತು.
WhatsApp Image 2023-08-26 at 11.54.10
Ad Widget

Ad Widget

Ad Widget

Soujnya Case dharmasthala Legal Team clarification ಸೌಜನ್ಯ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗೆಡೆಯವರ ತೇಜೊವಧೆ ಮಾಡುವ ಕಾರ್ಯವನ್ನು ಸ್ವಯಂ ಘೋಷಿತ ಹೋರಾಟಗಾರರರು ಮಾಡುತ್ತಿದ್ದು, ಇದನ್ನು ಮುಂದುವರಿಸಿದಲ್ಲಿ ಅಂತಹವರ ವಿರುದ್ದ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಕಾನೂನು ಸಲಹೆಗಾರರಾದ ರತ್ನವರ್ಮ ಬುಣ್ಣು ಅವರ ಸಾರ್ವಜನಿಕ ಪ್ರಕಟನೆ ಮೂಲಕ ರವಾನಿಸಿದ್ದಾರೆ.  ರತ್ನವರ್ಮ ಬುಣ್ಣು ಅವರು ಹೊರಡಿಸಿದ ಮಾದ್ಯಮ ಪ್ರಕಟನೆಯ ಯಥಾರೂಪ ಇಲ್ಲಿದೆ

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕಟಣೆ

ಇತ್ತೀಚಿನ ಕೆಲ ಸಮಯದಿಂದ ಸಾರ್ವಜನಿಕರಲ್ಲಿ ಒಂದಷ್ಟು ಗೊಂದಲವಿರುವ ನಿಟ್ಟಿನಲ್ಲಿ ಈ ಸ್ಪಷ್ಟನೆ ನೀಡಲಾಗುತ್ತಿದೆ.

ಸಮಯದಿಂದ ಕ್ಷೇತ್ರದ ಭಕ್ತರಲ್ಲಿ, ಅಮಾಯಕ – ಸೌಜನ್ಯಳ ಹತ್ಯೆಯ ಪ್ರಕರಣದ ತನಿಖೆಗಾಗಿ ಆಗ್ರಹಿಸಲಾಗುತ್ತಿರುವ ಪ್ರತಿಭಟನೆಯಲ್ಲಿ ಶ್ರೀ ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ.

Ad Widget

Ad Widget

ಘಟನೆಯ ಯಾವುದೇ ಹಂತದಲ್ಲಿ ನಡೆಯುವುದಾದರೂ ಅದರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯಾರದ್ದೂ ಹಸ್ತಕ್ಷೇಪ ಈವರೆಗೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.

Ad Widget

ತಮಗೆಲ್ಲ ತಿಳಿದಿರುವಂತೆ ದಿನಾಂಕ : 09-10-2012ರ ಕುಮಾರಿ ಸೌಜನ್ಯ ಕಾಣೆಯಾಗಿದ್ದಾಳೆ ಎಂಬ ಸುದ್ದಿ ತಿಳಿದು ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅಂದಿನ ಮಾನ್ಯ ಗೃಹಮಂತ್ರಿಯವರನ್ನು ಹಾಗೂ ಮಾನ್ಯ ಉಸ್ತುವಾರಿ ಸಚಿವರನ್ನು ದೂರವಾಣಿ ಮುಖೇನ ಸಂಪರ್ಕಿಸಿ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದರು.

Ad Widget

Ad Widget

ಅರ್ಜಿ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ದಾಖಲಾದಂತೆ ಬೆಳ್ತಂಗಡಿ ಪೋಲೀಸರಿಂದ ತು ಪರಂಭವಾಗುತ್ತದೆ. ದಿನಾಂಕ: 10-10-2012 ರಂದು ಹತ್ಯೆಯಾದ ಸೌಜನ್ಗಳ ಶವವು ಪತ್ತೆಯಾಗುತ್ತದೆ. ದಿನಾಂಕ: 28-11-2012 ರಲ್ಲಿ ಕರ್ನಾಟಕದ ಸಿ.ಐ.ಡಿ ಇಲಾಖೆ ತನಿಖೆಯನ್ನು ಕೈಗೆತ್ತಿಕೊಂಡಿತು.

ಈ ಪ್ರಕರಣದ ತನಿಖೆಯ ತೀವ್ರತೆಯ ಕುರಿತು ಸಮಾಜದಲ್ಲಿ ಅಸಮಾಧಾನ ಕಂಡುಬಂದ ಕಾರಣ ತರುಣಿಯನ್ನು ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದಸಿ.ಬಿ.ಐಗೆ ವರ್ಗಾಯಿಸುವಂತೆ ಶ್ರೀ ಹೆಗ್ಗಡೆಯವರು ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆದರು. ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಪ್ರಕರಣವನ್ನು ಸಿ.ಬಿ.ಐಗೆ ಹಸ್ತಾಂತರಿಸಿದರು. ಅಂತೆಯ ದಿನಾಂಕ 05-11-2013 ರಲ್ಲಿ ಸಿ.ಐ.ಡಿ ಇಲಾಖೆಯಿಂದ ತನಿಖೆ ಸಿ.ಬಿ.ಐ ಇಲಾಖೆ ನಡೆಸುವಂತೆ ವರ್ಗಯಿಸಲ್ಪಟ್ಟಿತು.

ಸುಮಾರು ಒಂದು ವರ್ಷದ ನಂತರ ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ ಜೈನ್ ಎಂಬ ಮೂವರು ಯುವಕರನ್ನು ಆರೋಪಿಗಳ ಸ್ಥಾನದಲ್ಲಿ ಬಿಂಬಿಸಿ ಇವರನ್ನು ಶ್ರೀ ಕ್ಷೇತ್ರದಿಂದ ರಕ್ಷಿಸಲಾಗುತ್ತಿದೆ ಎಂದು ದಿನ ಪತ್ರಿಕೆ, ಸಾಮಾಜಿಕ ಜಾಲತಾಣ. ಹಾಗು ಟಿ.ವಿ ಮಾಧ್ಯಮಗಳಲ್ಲಿ ಸುಳ್ಳು ಪ್ರಸಾರ ಮಾಡಲಾಯಿತು.

ಆಗ ಆರೋಪ ಮಾಡುತ್ತಿರುವವರಾಗಲಿ ಅಥವಾ ಇತರ ಯಾರೊಬ್ಬರಾಗಲಿ ಈ ಮೂವರೂ ಸೌಜನ್ಯಳ ಹತ್ಯೆಯಲ್ಲಿ ಭಾಗೀದಾರರಾಗಿದ್ದರು ಎಂದು ಸಿ.ಬಿ.ಐ ತನಿಖಾಧಿಕಾರಿಗಳ ಎದುರು ಬಂದು ಸಾಕ್ಷಿ ನುಡಿಯಲಿಲ್ಲ, ಬದಲಾಗಿ ಇವರು ಆರೋಪಿಗಳೆಂದೂ, ಅವರಿಗೆ ದೊಡ್ಡ ಶಕ್ತಿಗಳ ಬೆಂಬಲ ಇದೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಅಲ್ಲಲ್ಲಿ ಸಭೆ ಮಾಡಿ ಸಾರ್ವಜನಿಕರಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಗೊಂದಲ ಸೃಷ್ಟಿಸುವುದಷ್ಟೇ ಅವರ ಆರಂಭಿಕ ಉದ್ದೇಶವಾಗಿತ್ತು. ವಿಷಯ ಹೀಗಿದ್ದಾಗ್ಯೂ ಶ್ರೀ ಕ್ಷೇತ್ರದ ಕಡೆಯಿಂದ ಪೂರಕವಾದ ದಾಖಲೆಗಳನ್ನು ಮಾದ್ಯಮಗಳ ಮುಂದೆ ನೀಡಿದ್ದು ನಂತರದ ದಿನಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ನಿವಾರಣೆಯಾಗಿತ್ತು.

ಈಗ ಮತ್ತೊಂದು ಸುತ್ತಿನ ಆರೋಪಕ್ಕೆ ಪ್ರಾರಂಭಿಸಿ ಮಾಧ್ಯಮದ ಮುಂದೆ ಗಂಟೆಗಟ್ಟಲೆ ಮಾತನಾಡಲು ಧೈರ್ಯ ತೋರಿಸುವ ಹೋರಾಟಗಾರರು ಅಥವಾ ಅವರ ಬೆಂಬಲಿಗರು ಸಿ.ಬಿ.ಐ ತನಿಖಾ ಸಂದರ್ಭದಲ್ಲಿ ಅವರು ಆರೋಪಿಸುತ್ತಿರುವವರ ಬಗ್ಗೆ ಯಾವುದೇ ಸಾಕ್ಷಿಗಳನ್ನು ನೀಡಲು ಬರಲಿಲ್ಲ.

ಇವರ ಗಾಳಿ ಸುದ್ದಿ / ಆರೋಪಗಳನ್ನು ಸಿ.ಬಿ.ಐ ಯವರೂ ಆಲಿಸಿದ್ದಾರೆ / ಗಮನಿಸಿದ್ದಾರೆ. ಹಾಗಾಗಿ ಅತ್ಯಂತ ಆಳವಾಗಿ ಮತ್ತು ಸುದೀರ್ಘವಾಗಿ ಈ ಮೂವರೂ ಯುವಕರ ತನಿಖೆಯೂ ನಡೆದಿದೆ. ಆದರೆ ಈ ಸತ್ಯವನ್ನು ಮರೆಮಾಚಿ ಅವರನ್ನು ಸಿ.ಬಿ.ಐ ತನಿಖೆಯೇ ಮಾಡಿಲ್ಲ. ಅಥವಾ ಸಿ.ಟಿ.ಐ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯೊಂದರ ಮೇಲೆ ಆರೋಪ ಹೊರಿಸುವುದು ಸಹನೀಯವಲ್ಲ.

ಧೀರಜ್ ಕೆಲ್ಲ, ಮಲ್ಲಿಕ್ ಜೈನ್, ಉದಯ ಜೈನ್ ಎಂಬ ಈ ಮೂವರು ಯುವಕರನ್ನು ಈ ಕೆಳಗಿನಂತೆ ಸಿ.ಬಿ.ಐ ನ್ಯಾಯಾಲಯದ ಆದೇಶದ ಪ್ರಕಾರ ತನಿಖೆಗೆ ಒಳಪಡಿಸಲಾಗಿದೆ.

2014 ನೇ ಇಸವಿಯ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಿ.ಬಿ.ಐ ತನಿಖಾ ಸಂಸ್ಥೆ ಎರಡೆರಡು ಬಾರಿ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ, ಚೆನ್ನೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ತನಿಖೆ ನಡೆಸಿರುತ್ತದೆ. ಅದಕ್ಕಿಂತ ಮುಂಚೆ ಸಿ.ಐ.ಡಿ ಇಲಾಖೆಯವರೂ ಎರಡೆರಡು ಬಾರಿ ತನಿಖೆ ನಡೆಸಿದರು.

ತನಿಖೆಯ ಪ್ರಮುಖ ಭಾಗವಾಗಿ ಸಿ.ಬಿ.ಐ ಇಲಾಖೆಯು ಬೇರೆ ಬೇರೆ ಕೋನಗಳಿಂದ ಈ ಕೆಳಗಿನಂತೆ ತನಿಖೆ ನಡೆಸಿರುತ್ತದೆ.

1 ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿರುತ್ತಾರೆ.

  1. ರಕ್ತ ಪರೀಕ್ಷೆ ನಡೆಸಿರುತ್ತಾರೆ.
  2. ಡಿ.ಎನ್.ಎ. ಪರೀಕ್ಷೆ ಮಾಡಿರುತ್ತಾರೆ.
  3. ಸುಳ್ಳು ಪತ್ತೆ ಪರೀಕ್ಷೆ (ಸಾಲಿಗ್ರಾಫ್ ಟೆಸ್ಟ್ ಮಾಡಿರುತ್ತಾರೆ.
  4. ಮಂಪರು ಪರೀಕ್ಷೆ ಸಹ ಮಾಡಿರುತ್ತಾರೆ. ಬೈನ್‌ಮ್ಯಾಪಿಂಗ್)
  5. ಇನ್ನೂ ಅನೇಕ ರೀತಿಯ ವೈಜ್ಞಾನಿಕ ವಿಧಿ-ವಿಧಾನ ಅನುಸರಿಸಿ ತನಿಖೆ ನಡೆಸಿರುತ್ತಾರೆ.

ಬೈನ್‌ಮ್ಯಾಪಿಂಗ್’ (ಮಂಪರು ಪರೀಕ್ಷೆ) ಅಂದರೆ ಸತ್ಯಾಂಶ ಪಡೆಯಲು ಆ ವ್ಯಕ್ತಿಯ ಒಪ್ಪಿಗೆ ಇದ್ದಲ್ಲಿ ಮಾತ್ರ ನ್ಯಾಯಾಲಯ ಮಂಪರು ಪರೀಕ್ಷೆಗೆ ಆದೇಶ ನೀಡುತ್ತದೆ. ಈ ಪರೀಕ್ಷೆಯಲ್ಲಿ ವ್ಯಕ್ತಿಗೆ ಸೋಡಿಯಂ ಅಮಿಟಾಲ್‌ನಂತಹ ಔಷಧಿ ನೀಡಲಾಗುತ್ತದೆ ಇದು ವ್ಯಕ್ತಿಯ ಮೇಲೆ ಸಮ್ಮೋಹನದಂತಹ ಪರಿಣಾಮ ಬೀರುತ್ತದೆ. ಅರೆಪ್ರಜ್ಞಾವಸ್ಥೆಯಲ್ಲಿರುವ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ಸತ್ಯವನ್ನೇ ಹೇಳುತ್ತಾನೆ. ಔಷಧ ನೀಡುವಿಕೆಯಲ್ಲಿ ಕಿಂಚಿತ್ತೂ ವ್ಯತ್ಯಾಸವಾದಲ್ಲಿ ವ್ಯಕ್ತಿಯು ಕೋಮಾಗೆ ಜಾರುವ ಅಥವಾ ಮರಣವನ್ನಪ್ಪುವ ಸಾಧ್ಯತೆ ಇದೆ.
ಇಂತಹ ಅಪಾಯಕಾರಿಯಾದ ಪರೀಕ್ಷೆಯನ್ನು ಕೂಡಾ ಸ್ವಇಚ್ಛೆಯಿಂದ ಒಪ್ಪಿಕೊಂಡು ಈ ಮೂವರೂ ಪರೀಕ್ಷೆಗೆ ಒಳಪಟ್ಟಿರುತ್ತಾರೆ.

ಅಂತೆಯೇ ಬೆಂಗಳೂರಿನಲ್ಲಿ ಇವರ ಪಾಲಿಗ್ರಾಫ್ ಪರೀಕ್ಷೆ ಹಾಗೂ ಟ್ರೈನ್‌ಮ್ಯಾಪಿಂಗ್ ನಡೆಸಿ, ಸಿ.ಟಿ.ಐ ಇಲಾಖೆಯು ವರದಿಯನ್ನು ದಿನಾಂಕ 25-03-2015 ರಂದು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಹಾಗು ಈ ಮೂವರಿಗೂ ಸೌಜನ್ಯಳ ಹತ್ಯೆಗೂ ಯಾವುದೇ ಸಂಬಂಧವಿಲ್ಲದ ಕಾರಣ ಮುಂದಕ್ಕೆ ಈ ಪ್ರಕರಣದಲ್ಲಿ ಇವರ ಅವಶ್ಯಕತೆ ಇರುವುದಿಲ್ಲ ಎಂದು ಸಹ ಸಿ.ಬಿ.ಐ ನ್ಯಾಯಾಲಯಕ್ಕೆ ಸಿ.ಬಿ.ಐ. ಇಲಾಖೆ ನಿವೇದಿಸಿದೆ.

ಅದರೂ ಸೌಜನ್ಯಳ ತಂದೆ ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಈ ಮೂವರನ್ನು ಸಹ ಆರೋಪಿಗಳಾಗಿ ಸಮಸ್ಯೆ ಮಾಡಬೇಕೆಂದು ಅರ್ಜಿ ಸಲ್ಲಿಸಿದಂತೆ ಮಾನ್ಯ ಸಿ.ಬಿ.ಐ. ನ್ಯಾಯಾಲಯವು ದಿನಾಂಕ: 07-02-2017 ರಲ್ಲಿ ಸದ್ರಿ ಅರ್ಜಿಯ ಪ್ರಕಾರ ಈ ಮೂವರಿಗೂ ಇವರ ಅನುಪಸ್ಥಿತಿಯಲ್ಲಿ ಸಮನ್ಸ್ ನೀಡಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ ಮಾಡಿತು. ಆದರೆ ಈಗಾಗಲೇ ಎಲ್ಲಾ ರೀತಿಯ ತನಿಖೆಗೆ ಮುಗಿದಿರುವುದರಿಂದ ಈ ರೀತಿ ಸಮನ್ಸ್ ನೀಡಿರುವುದು ಸರಿಯಲ್ಲ ಎಂದು ಸದ್ದಿ ಸಮನ್ಸ್ ಆದೇಶವನ್ನು ರದ್ದುಮಾಡಬೇಕೆಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ CFRL P.No. 1928/2017 ರಂತೆ ಈ ಯುವಕರು ಅರ್ಜಿ ಸಲ್ಲಿಸಿದಾಗ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಇವರ ಮನವಿಯನ್ನು ಪುರಸ್ಕರಿಸಿತು. ಮತ್ತೊಮ್ಮೆ ಈ ಮೂವರನ್ನೂ ಆರೋಪಿಗಳಾಗಿ ಈ ಕೇಸಿನಲ್ಲಿ ಪರಿಗಣಿಸಬೇಕಾಗಿ ಅರ್ಜಿ ಹಾಕಿದಾಗ, ಸ್ವತಃ ಸಿ.ಬಿ.ಐ ನ್ಯಾಯಾಲಯವು.

ಈ ಮೂವರನ್ನೂ ಆರೋಪಿಗಳೆಂದು ಬಿಂಪಿಸುವ ಯಾವುದೇ ಸಾಕ್ಷಿ ಅಥವಾ ಆಧಾರ ಅಥವಾ ಅದಾಗಲೇ ಸಾಕ್ಷಿ ನುಡಿದಿದ್ದ ಯಾರ ಸಾಕ್ಷಿದಲ್ಲೂ ಸಹ ಆರೋಪಿಗಳೆಂದು ತೀರ್ಮಾನಕ್ಕೆ ಬರುವ ಯಾವುದೇ ಅಂಶಗಳು ಕಂಡುಬಾರದ ಕಾರಣ ಅವರ ಅರ್ಜಿಯನ್ನು ದಿನಾಂಕ: 04-10-2021 ರಲ್ಲಿ ವಜಾಗೊಳಿಸಿದೆ.

ಸೌಜನ್ಯಳ ತಂದೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ WP No. 2208/2018 ರಂತೆ ಈ ಕೇಸನ್ನು ಸಿ.ಬಿ.ಐ ಯವರು ಸರಿಯಾಗಿ ತನಿಖೆ ನಡೆಸಲಿಲ್ಲ. ಹಾಗಾಗಿ ಮತ್ತು ಮರುತನಿಖೆ ನಡೆಸುವಂತೆ ಆದೇಶಿಸಬೇಕೆಂದು ಒಂದು ರಿಟ್ ಪಿಟಿಶನ್ (Writ petition) ಸಹ ಸಲ್ಲಿಸಿದ್ದರು. ಸಿ.ಬಿ.ಐ ಯವರು ಸರಿಯಾಗಿ ಮತ್ತು ಆಳವಾಗಿ ತನಿಖೆ ನಡೆಸಿದ್ದರೂ ಅರ್ಜಿದಾರ ಚಂದಪ್ಪ ರವರು ಕೇವಲ ಸಂಶಯ ಅಥವಾ ಅನುಮಾನದಿಂದ ಸಲ್ಲಿಸಿದ ಸದ್ರಿ ರಿಟ್ ಪಿಟಿಶನ್ (writ petition)ಗೆ ಯಾವುದೇ ಮಹತ್ವ ನೀಡುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 27-01-2021 . ರಲ್ಲಿ ಸದ್ರಿ ರಿಟ್ ಪಿಟಿಶನ್ ಸಹ ವಜಾ ಮಾಡಿರುತ್ತದೆ. ಹಾಗೂ ಸದ್ರಿ ಆದೇಶದ ಮೇಲೆ ಯಾವುದೇ ಅಪೀಲು ಸಲ್ಲಿಕೆಯಾಗಿಲ್ಲ. ವಿಷಯ ಹೀಗಿದ್ದಾಗ್ಯೂ ಸಹ, ಪ್ರಸ್ತುತ ಸೌಜನ್ಯಳ ತಾಯಿ ಶ್ರೀ ಕ್ಷೇತ್ರವನ್ನು ಅವಹೇಳನಕಾರಿಯಾಗಿ ನಿಂದಿಸುತ್ತಿರುವುದು ಅವರ ವಸ್ತುಸ್ಥಿತಿಯನ್ನು ಮರೆಮಾಡುವ ಮತ್ತು ಸುಳ್ಳನ್ನು ಪತ್ತ ಮಾಡುವ ಪ್ರಯತ್ನ ಎಂದು ವೇದ್ಯವಾಗುತ್ತದೆ.

ಈ ಮೇಲೆ ತಿಳಿಸಿದ ಎಲ್ಲಾ ವಿಚಾರಗಳು ಅಂದರೆ ಸಿ.ಬಿ.ಐ. ಅವರಿಂದ ಆದ ಈ ಮೂವರ ತನಿಖೆ, ಬೈನ್‌ಮ್ಯಾಪಿಂಗ್‌, ಪಾಲಿಗ್ರಾಪ್‌ ಪರೀಕ್ಷೆ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದ ಎರಡು ಆದೇಶಗಳು ಹಾಗೂ ಸಿ.ಬಿ.ಐ ಕೋರ್ಟು ಈ ಮೂವರ ಪರವಾಗಿ ನೀಡಿದ ಆದೇಶಗಳ ಬಗ್ಗೆ ಪೂರ್ಣ ಮಾಹಿತಿ ಸಹ ಈಗ ಹೋರಾಟ ನಡೆಸುತ್ತಿರುವವರು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಶ್ರೀ ಹೆಗ್ಗಡೆಯವರ ಕುಟುಂಬದ ಓರ್ವ ಸದಸ್ಯನನ್ನು ಈ ಘಟನೆಯಲ್ಲಿ ಸಿಲುಕಿಸಲು ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಅವರು ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳನ್ನು ಈಗಾಗಲೇ ಒದಗಿಸಿರುವುದು ಗಮನಾರ್ಹ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿದ ಮಾನ್ಯ ಸಿವಿಲ್ ನ್ಯಾಯಾಲಯ, ಈಗಾಗಲೇ ದಾಖಲಿಸಿದ ಮಾನನಷ್ಟ ದಾವೆ ಹಾಗೂ ಶಾಶ್ವತ ನಿರ್ಬಂಧಕಾಜ್ಞೆ ದಾವೆಯಲ್ಲಿ ಸ್ವಯಂಘೋಷಿತ ಹೋರಾಟಗಾರರ ವಿರುದ್ಧ ಶ್ರೀ ಕ್ಷೇತ್ರದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಅವರ ಕುಟುಂಬಸ್ಥರನ್ನು ಅವಮಾನಿಸುವುದು ಮತ್ತು ಅವರನ್ನು ಅವಹೇಳನ ಮಾಡಬಾರದಾಗಿ ಆದೇಶ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿರುತ್ತದೆ.

ಅದರೂ ಹೋರಾಟಗಾರರು ಹಾಗೂ ಸಂಸ್ಥೆಯ ಕುಟುಂಬಸ್ಥರು ಪದೇ ಪದೇ ಈ ವಿಷಯವನ್ನು ಪ್ರಸ್ತಾಪಿಸುವುದು ಕಂಡುಬರುತ್ತಿದ್ದು ಇದನ್ನು ಮುಂದುವರಿಸಿದಲ್ಲಿ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಈ ದೇಶದ ಸಂವಿಧಾನವೂ ದೊಡ್ಡದಲ್ಲ, ಈ ದೇಶದ ಕಾನೂನೂ ದೊಡ್ಡದಲ್ಲ. ಈ ರಾಜ್ಯದ ನ್ಯಾಯಾಂಗದ ವ್ಯವಸ್ಥೆಯೂ ದೊಡ್ಡದಲ್ಲ, ಅದರೆ ತಾವು ಹೇಳುವುದೇ ಸತ್ಯ ಎನ್ನುವ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಾ ಯಾವುದೋ ರಹಸ್ಯ ಕಾರ್ಯಕ್ಕೆ ತೊಡಗಿರುವ ಅವರ ಎಲ್ಲಾ ಆರೋಪಗಳನ್ನು ಸಾರ್ವಜನಿಕರು ಖಂಡಿಸಬೇಕಾಗಿದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಹೋರಾಟಗಾರರು ಹಾಗೂ ಅವರ ಜೊತೆಗೆ ಸೇರಿಕೊಂಡಿರುವ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಹೆಗ್ಗಡೆಯವರ ಹಾಗೂ ಅವರ ಕುಟುಂಬದವರ ಮೇಲಿ ಮಾಡುವ ಆರೋಪಗಳು ಹಾಗೂ ಕೀಳು ಭಾಷೆಯ ನಿಂದನೆಗಳ ಹಿಂದೆ, ಭಾರಿ ದೊಡ್ಡ ಷಡ್ಯಂತ್ರ/ದುರುದ್ದೇಶ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಜ್ಞಾವಂತ ಸಾರ್ವಜನಿಕರೆಲ್ಲರೂ ಈ ಸತ್ಯವನ್ನು ತಿಳಿದುಕೊಳ್ಳಬೇಕಾಗಿ ಅಪೇಕ್ಷೆ.

ವಿಷಯ ಹೀಗಿದ್ದಾಗ್ಯೂ ಸಹ ಶ್ರೀ ಕ್ಷೇತ್ರವು ಯಾವುದೇ ರೀತಿಯ ನ್ಯಾಯಾಂಗ ತನಿಖೆ ಅಥವಾ ರಾಜ್ಯ ಸರಕಾರದ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದಾದಲ್ಲಿ ಕುಮಾರಿ ಸೌಜನ್ಯಳ ಸಾವಿಗೆ ನ್ಯಾಯವೊದಗಿಸುವ ದೃಷ್ಟಿಯಿಂದ ಸ್ವಾಗತಿಸುತ್ತೇವೆ ಮತ್ತು ಅದಕ್ಕೆ ಪೂರಕವಾದ ಸಹಕಾರವನ್ನು ಒದಗಿಸುತ್ತೇವೆ.

ರತ್ನವರ್ಮ ಬುಣ್ಣು
ಕಾನೂನು ಸಲಹೆಗಾರರು, ಶ್ರೀ ಕ್ಷೇತ್ರ ಧರ್ಮಸ್ಥಳ

Leave a Reply

Recent Posts

error: Content is protected !!
%d bloggers like this: