ಮಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹ*ತ್ಯೆ

maxresdefault_1474362294_1474362300
Ad Widget

Ad Widget

Ad Widget

ಮಂಗಳೂರು: ನಗರದ ಶಕ್ತಿನಗರ ನಾರ್ಲಪದವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.

Ad Widget

ಹರ್ಷದ್ ಕೌಶಲ್ (17) ಮೃತಪಟ್ಟ ವಿದ್ಯಾರ್ಥಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ಪ್ರತಿಭಾವಂತನಾಗಿದ್ದ. ಕರಾಟೆ ಪಟುವೂ ಆಗಿದ್ದ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬ೦ದಿದ್ದ ಕೌಶಲ್ ಈ ಕೃತ್ಯ ಮಾಡಿಕೊಂಡಿದ್ದಾನೆ.

Ad Widget

Ad Widget

ಮನೆಯ ಮೇಲಿನ ಅಂತಸ್ತಿನಲ್ಲಿ ಕೌಶಲ್ ಮಾತ್ರ ಇದ್ದು ಕೆಳಗೆ ಆತನ ಅಜ್ಜಿ ಮತ್ತು ಸಂಬಂಧಿ ಹುಡುಗಿ ಇದ್ದರು. ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದು, ಕೌಶಲ್ ಕರೆ ಸ್ವೀಕರಿಸಿರಲಿಲ್ಲ. ತಾಯಿ ಕೂಡಲೇ ಹರ್ಷದ್‌ನ ಅಜ್ಜಿಗೆ ಕರೆ ಮಾಡಿ ತಿಳಿಸಿದ್ದರು.

Ad Widget

ಬಳಿಕ ಮಹಡಿಯ ಕೋಣೆಯಲ್ಲಿ ನೋಡಿದಾಗ ಆತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget

Ad Widget

Leave a Reply

Recent Posts

error: Content is protected !!
%d bloggers like this: