E cigarate ಇ-ಸಿಗರೇಟ್‌ ಮತ್ತು ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್‌ ಮಾರಾಟ : ಮಂಗಳೂರಿನಲ್ಲಿ ನಾಲ್ವರ ಬಂಧನ

Dp f
Ad Widget

Ad Widget

Ad Widget

ಮಂಗಳೂರು ನಗರದ ಲಾಲ್‌ಬಾಗ್‌ ಬಳಿಯ ಸಾಯಿಬಿನ್‌ ಕಾಂಪ್ಲೆಕ್ಸ್‌ಗೆ ದಾಳಿ ಮಾಡಿದ ಪೊಲೀಸರು ಇ-ಸಿಗರೇಟ್‌ ಮತ್ತು ಪ್ಯಾಕೆಟ್‌ ಮೇಲೆ ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್‌ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.

Ad Widget

ಸಾಯಿಬಿನ್‌ ಕಾಂಪ್ಲೆಕ್ಸ್‌ ನ ನೆಲಮಹಡಿಯಲ್ಲಿರುವ ಆಮಂತ್ರಣ, ಯೂನಿಕ್‌ ವರ್ಲ್ಡ್ ಮತ್ತು ಫೆಂಟಾಸ್ಟಿಕ್‌ ವರ್ಲ್ಡ್ ಅಂಗಡಿಗಳ ಮೇಲೆ ಬರ್ಕೆ ಪೊಲೀಸರು ಸೋಮವಾರ ದಾಳಿ ನಡೆಸಿದರು. ಈ ವೇಳೆ ನಿಷೇಧಿತ ಇ-ಸಿಗರೇಟ್‌ ಮತ್ತು ಪ್ಯಾಕೆಟ್‌ ಮೇಲೆ ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್‌ ಸೇರಿದಂತೆ ಒಟ್ಟು ಅಂದಾಜು 2.70 ಲ.ರೂ.ಮೌಲ್ಯದ ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Ad Widget

Ad Widget

Ad Widget

ಸುಳ್ಯದ ಯುವತಿ ಸಹಿತ ನಾಲ್ವರ ಬಂಧನ

Ad Widget

ಸುಳ್ಯ ನೆಲ್ಲೂರು ಕೆಮ್ರಾಜೆ ನಿವಾಸಿ ಸ್ವಾತಿ (26), ಮಣ್ಣಗುಡ್ಡೆಯ ಶಿವಕುಮಾರ್‌ (34), ಕುತ್ತಾರ ಪದವಿನ ಹಸನ್‌ ಶರೀಫ್ (50) ಮತ್ತು ರೆಹಮತುಲ್ಲಾ (45) ಬಂಧಿತರು.  ಬಂಧಿತ ಆರೋಪಿಗಳ ಪೈಕಿ ಇಬ್ಬರನ್ನು ಸ್ಟೇಷನ್‌ ಬೇಲ್‌ ನಲ್ಲಿ ಬಿಡುಗಡೆ ಮಾಡಲಾಗಿದ್ದು ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

ಬರ್ಕೆ ಠಾಣೆ ಪೊಲೀಸರು ಆರೋಪಿಗಳ ವಿರುದ್ದ Prohibition of Electronic Cigarettes Act-2019 ಹಾಗೂ ಕೊಟ್ಟಾ ಕಾಯಿದೆ- 2003 ಹಾಗೂ Cigarettes and Other Tobacco Products (Packing and Labelling Rules 2020) .ರೀತ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಐ.ಪಿ.ಎಸ್ ರವರ ನೇತೃತ್ವದಲ್ಲಿ, ಡಿಸಿಪಿ (ಕಾ& ಸು) ರವರಾದ ಅಂಶುಕುಮಾರ್ ಐ.ಪಿ.ಎಸ್. ಡಿಸಿಪಿ (ಅಪರಾಧ & ಸಂಚಾರ) ರವರಾದ ದಿನೇಶ್ ಕುಮಾರ್ ಕೆ.ಎಸ್.ಪಿ.ಎಸ್ ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ರವರಾದ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.

ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ನಾಗೇಶ್, ಎಸ್ ಹಸ್ಟರ್, ರೇಖಾ, ಆರ್ ಪಿ.ಎಸ್.ಐ ಶೋಭಾ ಪಿ.ಎಸ್.ಐ ಎ.ಎಸ್.ಐ ಧರ್ಮಾವತಿ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ರಾಘವೇಂದ್ರ, ಮ.ಹೆಚ್.ಸಿ ಜಲಜಾಕ್ಷಿ, ಪಿ.ಸಿ ನಿತೇಶ್, ಪಿ.ಸಿ ಮಂಜುನಾಥ, ಪಿ.ಸಿ. ಅಖಿತ್ ಕುಮಾರ, ಪಿ.ಸಿ ವಿಜಯ ಕುಮಾರ್, ಪಿಸಿ ಚೇತನ್‌ ಕುಮಾರ್, ಪಿ.ಸಿ ರಾಮಲಿಂಗ, ಪಿ.ಸಿ ಸಿದ್ದು, ಮ.ಪಿ.ಸಿ ಚಂದ್ರಿಕಾ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ಏನಿದು ಇ-ಸಿಗರೇಟ್

ಇ-ಸಿಗರೇಟ್(E-Cigarettes ) ಅನ್ನು ಇತ್ತೀಚಿನ ದಿನಗಳಲ್ಲಿ ಕದ್ದು ಮುಚ್ಚಿ ಜನ ಬಳಕೆ ಮಾಡುತ್ತಿದ್ದಾರೆ. ಇದನ್ನು ಇ-ಸಿಗಾರ್, ವೇಪ್ ಅಥವಾ ಎಲೆಕ್ಟ್ರಾನಿಕ್ ಸಿಗರೇಟ್ ಎಂದೂ ಕರೆಯುತ್ತಾರೆ. ಇದು ಬ್ಯಾಟರಿ-ಚಾಲಿತ ಡಿವೈಸ್ ಆಗಿದ್ದು ನಿಕೋಟಿನ್, ಸುವಾಸನೆ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುವ ದ್ರವವನ್ನು ಬಿಸಿ ಮಾಡುತ್ತದೆ. ಜೊತೆಗೆ ದ್ರವವನ್ನು ಏರೋಸಾಲ್ ಅಥವಾ ಆವಿಯಾಗಿ ಪರಿವರ್ತಿಸಲಾಗುತ್ತದ.


ಭಾರತದಲ್ಲಿ ನಿಷೇಧ


ಇ-ಸಿಗರೆಟ್‌ಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ತಂಬಾಕು ಸಿಗರೇಟ್‌ಗಳಿಗೆ(Tobacco cigarettes) ಪರ್ಯಾಯವಾಗಿ ಪರಿಗಣಿಸಲಾಗುತ್ತದೆ. ಇವು ಹಾನಿಕಾರಕ ರಾಸಾಯನಿಕಗಳನ್ನು ಉತ್ಪಾದಿಸದ ಕಾರಣ ಕಡಿಮೆ ಹಾನಿಕಾರಕವೆಂದು ಪ್ರಚಾರ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಮಾರಾಟ ಮತ್ತು ಬಳಕೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ನಿಷೇಧ ಮಾಡಿದೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: