Mushaal Hussein Mullick | ಗಂಡ ಭಯೋತ್ಪಾದನಾ ಕೃತ್ಯದಲ್ಲಿ ಭಾರತದ ಜೈಲಿನಲ್ಲಿ – ಹೆಂಡತಿ ಪಾಕಿಸ್ತಾನದಲ್ಲಿ ನೂತನ ಸಚಿವೆ..! ಯಾರೂ ಈ ಮುಶಾಲ್..? ತನಗಿಂತ 20 ವರ್ಷ ದೊಡ್ಡವನಾದ ಯಾಸಿನ್ ಮಲಿಕ್ ನನ್ನು ಮದುವೆ ಆಗಿದ್ದೇಕೆ ..?

20230819_113524
Ad Widget

Ad Widget

Ad Widget

ಭಾರತದ ಜೈಲಿನಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ (Yasin Malik) ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್​​ಗೆ (Mushaal Hussein Mullick) ಪಾಕಿಸ್ತಾನದ (Pakistan) ಹಂಗಾಮಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ.

Ad Widget

ಜಿಯೋಟಿವಿ ವರದಿಯ ಪ್ರಕಾರ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ (Anwaarul Haq Kakar) ಅವರಿಗೆ ವಿಶೇಷ ಸಲಹೆಗಾರರಾಗಿ ಮುಲ್ಲಿಕ್​​ನ್ನು ನೇಮಿಸಲಾಗಿದೆ. ಮುಶಾಲ್ ಅವರ ಪತಿ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಕಮಾಂಡರ್ ಯಾಸಿನ್ ಮಲಿಕ್, ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

Ad Widget

Ad Widget

ಯಾರೂ ಈಕೆ..? ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಪಾಕಿಸ್ತಾನ ಮೂಲದವರು. ಅವರ ತಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದರೆ, ಅವರ ತಾಯಿ ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮುಶಾಲ್ ಅವರ ಸಹೋದರ ಹೈದರ್ ಅಲಿ ಮಾಲ್ಕಿ ಅವರು ಅಮೆರಿಕಾದಲ್ಲಿ ವಿದೇಶಾಂಗ ನೀತಿ ವಿಚಾರದ ಪ್ರಾಧ್ಯಾಪಕರಾಗಿದ್ದಾರೆ.

Ad Widget

ಮುಶಾಲ್‌ಗೆ ಪೇಟಿಂಗ್ಸ್‌ ಎಂದರೆ ತುಂಬಾ ಬಹಳ ಇಷ್ಟ. ಅವರು ಆರನೇ ವಯಸ್ಸಿನಲ್ಲಿ ಚಿತ್ರಕಲೆ ಆರಂಭ ಮಾಡಿದ್ದರೆ. ಅದರಲ್ಲೂ ಅರೆ-ನಗ್ನ ವರ್ಣಚಿತ್ರಗಳಿಗೆ ಇವರು ಬಹಳ ಜನಪ್ರಿಯರಾಗಿದ್ದಾರೆ. ಅವರು ಕಾಶ್ಮೀರದ ಜನರ ಸಂಕಷ್ಟದ ಸ್ಥಿತಿಯನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ. ಅದರೊಂದಿಗೆ ಈಕೆ ಪಾಕಿಸ್ತಾನದಲ್ಲಿ ಶಾಂತಿ ಮತ್ತು ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.

Ad Widget

Ad Widget

ಈ ಸಂಸ್ಥೆಯು ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತದೆ ಎನ್ನಲಾಗುತ್ತಿದೆ. 2005ರಲ್ಲಿ ಮುಶಾಲ್‌, ಯಾಸೀನ್‌ ಮಲೀಕ್‌ನನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಈ ವೇಳೆ ಯಾಸೀನ್‌ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ಕೋರುವ ಸಲುವಾಗಿ ಇಸ್ಲಾಮಾಬಾದ್‌ಗೆ ಹೋಗಿದ್ದರು. ಫೈಜ್ ಅಹ್ಮದ್ ಫೈಜ್ ಅವರ ಜನಪ್ರಿಯ ಕವಿತೆ ಹಮ್ ದೇಖೇಂಗೆಯನ್ನು ಯಾಸಿನ್ ವಾಚಿಸಿದ ಕಾರ್ಯಕ್ರಮದಲ್ಲಿ ಮುಶಾಲ್ ಸಹ ಭಾಗವಹಿಸಿದ್ದರು. ನಂತರ ಇಬ್ಬರೂ 2009 ರಲ್ಲಿ ವಿವಾಹವಾದರು.

ಮುಶಾಲ್‌, ಯಾಸೀನ್‌ ಮಲೀಕ್‌ ಅವರಿಗಿಂತ 20 ವರ್ಷ ಕಿರಿಯವರು. 2009 ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಇವರ ವಿವಾಹ ಸಮಾರಂಭಕ್ಕೆ ಪಾಕಿಸ್ತಾನದ ಕೆಲವು ಉನ್ನತ ರಾಜಕೀಯ ನಾಯಕರು ವಿವಾಹದಲ್ಲಿ ಭಾಗವಹಿಸಿದ್ದರು.

ಪಾಕಿಸ್ತಾನದ ಉಸ್ತುವಾರಿ ಸರ್ಕಾರಗುರುವಾರ ಐವಾನ್-ಎ-ಸದರ್‌ನಲ್ಲಿರುವ ಅಧ್ಯಕ್ಷ ಆರಿಫ್ ಅಲ್ವಿ ಅವರ ಅಧಿಕೃತ ನಿವಾಸದಲ್ಲಿ 18 ಸದಸ್ಯರ ಪಾಕಿಸ್ತಾನದ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಪ್ರಮಾಣ ವಚನ ಸ್ವೀಕರಿಸಿದರು. ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ದೇಶದ ಆಡಳಿತ ನಡೆಸುವ ಜವಾಬ್ದಾರಿಯನ್ನು ಹಂಗಾಮಿ ಸಚಿವ ಸಂಪುಟಕ್ಕೆ ವಹಿಸಲಾಗಿದೆ.

ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್ ಅವರನ್ನು ಹಂಗಾಮಿ ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಾಕಿಸ್ತಾನವು ಪ್ರತ್ಯೇಕತಾವಾದಿಗಳೊಂದಿಗೆ ನಿಲ್ಲುತ್ತದೆ ಎಂಬ ಪಾಕಿಸ್ತಾನದ ಸ್ಪಷ್ಟ ಸಂದೇಶವಾಗಿದೆ. ಆರ್ಥಿಕ ದಿವಾಳಿತನದ ಹೊರತಾಗಿಯೂ ಯಾವುದೇ ನೀತಿಯನ್ನು ಬದಲಾಯಿಸಲಾಗಿಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಹೇಳಿದ್ದಾರೆ.

ಯಾಸಿನ್ ಮಲಿಕ್ ಅವರ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಶಾಲ್‌ನಿಂದ ಅಂತರ ಕಾಪಾಡಿದ್ದು, ಮುಶಾಲ್ ಜೆಕೆಎಲ್‌ಎಫ್‌ನ ಸದಸ್ಯರಲ್ಲ ಎಂದು ಹೇಳಿದೆ. ಅವರು ನಮಗೆ ಗೌರವಾನ್ವಿತರು ಆದರೆ ಅವರು JKLF ಸದಸ್ಯೆ ಅಲ್ಲ. ಅವರು JKLF ಅಥವಾ ಯಾಸಿನ್ ಮಲಿಕ್ ಅವರ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದ್ದರಿಂದ ಅವರು ಯಾವುದೇ ವೇದಿಕೆಯಲ್ಲಿ ರಾಜಕೀಯವಾಗಿ ಯಾಸಿನ್ ಮಲಿಕ್ ಅವರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು JKLF ಟ್ವೀಟ್ ಮಾಡಿದೆ.

ಯಾಸಿನ್ ಮಲಿಕ್ ಕಾಶ್ಮೀರಿ ಪ್ರತ್ಯೇಕತಾವಾದಿಯಾಗಿದ್ದು, ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಯಾಸಿನ್ ಮಲಿಕ್ ವಿರುದ್ಧದ ಪ್ರಮುಖ ಪ್ರಕರಣವೆಂದರೆ ಮೆಹಬೂಬಾ ಮುಫ್ತಿ ಅವರ ಸಹೋದರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ. 1989 ರಲ್ಲಿ, ರುಬಯ್ಯನನ್ನು ಯಾಸಿನ್ ಮಲಿಕ್ ಮತ್ತು ಇತರ ಮೂವರು ಅಪಹರಿಸಿದ್ದರು. ಐದು ದಿನಗಳ ನಂತರ ಸರ್ಕಾರವು ವಿನಿಮಯವಾಗಿ ಐದು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಯಾಸಿನ್ ಮಲಿಕ್ ಪತ್ನಿಯನ್ನು ಪಾಕಿಸ್ತಾನದ ಉಸ್ತುವಾರಿ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವುದರ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯಿಸಿದ, ಮೆಹಬೂಬಾ ಮುಫ್ತಿ, ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡಿ, ಪಾಕಿಸ್ತಾನದಲ್ಲ. ಭಾರತದಲ್ಲಿ, ಭಾರತದ ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಎಂದಿದ್ದಾರೆ.

Leave a Reply

Recent Posts

error: Content is protected !!
%d bloggers like this: