ಮಂಗಳೂರು: ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 21 ರಂದು ರಜೆ ಘೋಷಿಸುವಂತೆ ಕಾರ್ಕಳ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ನಾಗರ ಪಂಚಮಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳ ಜನತೆ ಶ್ರದ್ದಾ ಭಕ್ತಿಯಿಂದ ಆಚರಿಸುವ ಹಬ್ಬ. ತುಳುನಾಡಿನಲ್ಲಿ ಹಿಂದೂಗಳು ಮತ್ತು ಜೈನರು ಆಚರಿಸುವ ನಾಗ ಪಂಚಮಿ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದ್ದು, ದೈವ ದೇವರುಗಳ ಆರಧಾನೆಯಲ್ಲಿ ನಾಗರಾಧನೆಯು ಪ್ರಮುಖವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ರಜೆ ಘೋಷಿಸುವಂತೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ.