ತುಳುನಾಡಿನ ಆಚರಣೆಯಾದ ನಾಗಮಂಡಲ (Nagamandala) ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟಿದೆ. ಚಿಕ್ಕಬಳ್ಳಾಪುರದ ಸದ್ಗುರು ಸನ್ನಿದಾನದಲ್ಲಿ ನಾಗಮಂಡಲ ಆಶ್ಲೇಷ ಬಲಿ ನಡೆಯಲಿದೆ. ವಿಶೇಷ ದರಗಳ ಸೀಟಿಂಗ್ ವ್ಯವಸ್ಥೆ ಹೊಂದಿರುವ ನಾಗರಪಂಚಮಿಯ ದಿನ ಆಗಸ್ಟ್ 21 ರಂದು ಸಂಜೆ 6 ರಿಂದ ರಾತ್ರಿ 8:30 ರವರೆಗೆ ನಾಗಮಂಡಲ ನಡೆಯಲಿದೆ.
ಆಶ್ಲೇಷಬಲಿ ಪೂಜೆಯು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ನಾಗ ಮಂಟಪ, ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ಜರುಗಲಿದೆ.ಮುಖ್ಯ ಆಚರಣೆಯಾದ ನಾಗ ಮಂಡಲ ಪೂಜೆ ಮತ್ತು ಸರ್ಪ ದೋಷದ ಪರಿಣಾಮಗಳನ್ನು ಪರಿಹರಿಸುವ ಬೆಳಗಿನ ಆಶ್ಲೇಷಬಲಿ ಪೂಜೆಗೆ ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಸದ್ಗುರು ಪ್ರಕಟನೆ ತಿಳಿಸಿದೆ.
ಆನ್‌ಲೈನ್ ಮತ್ತು ಖುದ್ದು ಅರ್ಪಣೆಗಳು: ಸಿಂಗಾರ ಹೂವು, ಬೆಣ್ಣೆ ಸೇವೆ, ಮಣ್ಣು ಸೇವೆ. ಅಲ್ಲದೆ, ಸಂತಸಭರಿತ ಚಟುವಟಿಕೆಗಳು, ಮಳಿಗೆಗಳು ಮತ್ತು ಮೇಳಗಳಿರುವ ರೋಮಾಂಚಕ ಜಾತ್ರೆಯನ್ನು ಅನುಭವಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಾಗ ಮಂಡಲ ಪೂಜೆಗಾಗಿ ಆನ್ ಲೈನ್ ನಲ್ಲಿ ನೊಂದಾಯಿಸಬೇಕು ಆಶ್ಲೇಷಬಲಿ ಪೂಜೆಗೆ ನೋಂದಣಿ ಇಲ್ಲ.ನಾಗ ಮಂಟಪದಲ್ಲಿ, ಉಡುಪಿಯ ನಾಗ ಪಾತ್ರಿಗಳು ‘ನಾಗ ಮಂಡಲ’ವನ್ನು ನಡೆಸಿಕೊಡಲಿದ್ದಾರೆ.
ಸದ್ಗುರುಗಳು ನಾಗನಿಗೆ ಆರತಿಯನ್ನು ಅರ್ಪಿಸುವುದರೊಂದಿಗೆ ಈ ಪ್ರಕ್ರಿಯೆಯು ಆರಂಭವಾಗುತ್ತದೆ. ಇಬ್ಬರು ಕಲಾವಿದರು ಸೇರಿ ನಡೆಸಿಕೊಡುವ ‘ನಾಗಮಂಡಲ ನೃತ್ಯ’ ಎಂಬ ಆಚರಣೆಯು, ಸಾಂಪ್ರದಾಯಿಕ ವಾದ್ಯಗಳೊಂದಿಗೆ ನಡೆಯುತ್ತದೆ. ಇದು ನಾಗನ ದೈವಿಕ ಉಪಸ್ಥಿತಿಯನ್ನು ಆವಾಹಿಸುತ್ತದೆ ಎಂಬ ನಂಬಿಕೆಯಿದೆ.
ಸೀಟಿಂಗ್: ಸಿಟಿಂಗ್ ವ್ಯವಸ್ಥೆಯನ್ನು ವಿವಿಧ ನಾಗರೂಪದ ಹೆಸರಲ್ಲಿ ವರ್ಗ ಮಾಡಲಾಗಿದೆ. ಹಿಂದಿನ ಸೀಟಿಗೆ ಶೇಷ ಎಂಬ ಹೆಸರಿದ್ದು ಪ್ರೇಪರ್ಡ್ ಸಿಟಿಂಗ್ 1000ರೂ. ಅನಂತ ಪ್ರಯಾರಿಟಿ ಸಿಟಿಂಗ್ 2500 ರೂ, ವಾಸುಕಿ ಪ್ರೀಮಿಯಂ ಸೀಟಿಂಗ್ 5000 ರೂ , ಕಾರ್ಕೋಟಕ ಜನರಲ್ ಸಿಟಿಂಗ್ ಉಚಿತ.