ಕೆಲವೊಂದು ಮನೆಯಲ್ಲಿ ಸಾಕು ನಾಯಿಗಳನ್ನು ಗೂಡಿನಲ್ಲಿ ಹಾಕದೇ , ಸಮಕೋಲೆಯಲ್ಲಿ ಬಂಧಿಸದೆ ಬೇಕಾಬಿಟ್ಟಿಯಾಗಿ ಬಿಟ್ಟಿರುತ್ತಾರೆ. ಬಹಳಷ್ಟು ಮಂದಿಯ ತಲೆಯಲ್ಲಿ ನಾಯಿ ಕಚ್ಚಿದ್ದರೇ ಕಚ್ಚಿಸಿಕೊಂಡವನಿಗಷ್ಟೆ ಸಮಸ್ಯೆ ಸಾಕಿದವನಿಗೆ ಏನೂ ತಂದರೆಯಿಲ್ಲ ಎಂಬ ಮನೋಭಾವ ಇದೆ. ಹೀಗಾಗಿ ಸಾಕು ನಾಯಿಗಳ ಕಡೆಗೆ ಅಗತ್ಯ ಲಕ್ಷ್ಯ ವಹಿಸದೆ ಬೇಕಾಬಿಟ್ಟಿ ಬಿಟ್ಟು ಬಿಡುತ್ತಾರೆ. ಮನೆಯವರ ಈ ಮನೋಭೂಮಿಕೆಯ ಪರಿಚಿಯವಿಲ್ಲದೆ ಮನೆಯ ಅವರಣದೊಳಗೆ ಬಂದು ನಾಯಿಯಿಂದ ಕಚ್ಚಿಸಿಕೊಂಡ ಹಲವು ಉದಾಹರಣೆಗಳು ನಮ್ಮ ಮುಂದೆ ಇದೆ. ಅದರ ಇದಕ್ಕೊಂದು ಫುಲ್ ಸ್ಟಾಪ್ ಹಾಕುವತ್ತ ರಾಜ್ಯದ ಜಿಲ್ಲೆಯೊಂದರ ಪೊಲೀಸರು ಮುಂದಾಗಿದ್ದಾರೆ.
ಕೊಡಗು ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸಾಕು ನಾಯಿಗಳ ಕುರಿತಾದ ಕಾನೂನಿನ ಮಾಹಿತಿಯನ್ನು ಸಾರ್ವಜನಿಕಗೊಳ್ಳುವಂತೆ ಮಾಡಿದೆ.ಹೆಲ್ತ್ ತಪಾಸಣೆಗೆಂದು ಬಂದು ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿಯ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿ ತೀವ್ರ ಸ್ವರೂಪದ ಗಾಯಗಳನ್ನು ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಕಾನೂನಿನ ಹೊತ್ತಗೆಯಿಂದ ಸೆಕ್ಷನ್ ಗಳನ್ನು ಹೊರ ತೆಗೆದು ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.
ಮನೆ ಮುಂದೆ ‘ನಾಯಿ ಇದೆ ಎಂದು ಎಚ್ಚರಿಕೆ’ ಎಂದು ಬೋರ್ಡ್ ತಗಲು ಹಾಕಿಕೊಂಡು ಸುಮ್ಮನಿದ್ದರೇ ಸಾಕಾಗುವುದಿಲ್ಲ. ಅನಾಹುತ ಸಂಭವಿಸಿದರೆ ಜೈಲು ಸೇರಬೇಕಾದಿತ್ತು ಎಂಬುವುದು ಪೊಲೀಸ್ ಪ್ರಕಟನೆಯ ಒಟ್ಟಾರೆ ಸಾರ. ಹಾಗಾದರೇ ಏನೀದು ಪ್ರಕರಣ ? ಪೊಲೀಸ್ ಇಲಾಖೆ ಹೊರಡಿಸಿದ ಪ್ರಕಟನೆಯಲ್ಲಿ ನಿಜವಾಗಿ ಏನಿದೆ ಅನ್ನುವುದನ್ನು ನೋಡಿಕೊಂಡು ಬರೋಣ.
ಇತ್ತೀಚೆಗೆ ಕೊಡಗು ಜಿಲ್ಲೆಯ ನಾಪೊಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಪಾರಾಣೆ ಗ್ರಾಮದ ನಿವಾಸಿ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗಾಗಿ ಸಮುದಾಯ ಆರೋಗ್ಯ ಅಧಿಕಾರಿ ಕೆ ಕೆ ಭವ್ಯ ಎಂಬವರು ಬಂದಿದ್ದರು . ಈ ವೇಳೆ ಮಾಚಯ್ಯ ಅವರ ಸಾಕುನಾಯಿ ಅಧಿಕಾರಿಗೆ ದಾಳಿ ಮಾಡಿ ಕಚ್ಚಿ ಗಂಭೀರ ಸ್ವರೂಪದ ಗಾಯಗಳನ್ನು ಮಾಡಿದೆ ಈ ಹಿನ್ನೆಲೆಯಲ್ಲಿ ಮಾಚಯ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೊಡಗು ಪೊಲೀಸರು ಪ್ರಕಟನೆಯನ್ನು ಹೊರಡಿಸಿದ್ದಾರೆ. ಅದರಲ್ಲಿ ಸಾಕುನಾಯಿಗಳು ಬೇರೆಯವರ ಮೇಲೆ ದಾಳಿ ಮಾಡಿದರೆ ಅಂಥ ನಾಯಿಗಳನ್ನು ಸಾಕಿದ ಮಾಲೀಕರ ವಿರುದ್ಧ ಸೆಕ್ಷನ್ 289 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರು ತಿಂಗಳು ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗಿದೆ.