ಕೇರಳ ಮೂಲದ ಯುವತಿಗೆ ಸುಳ್ಯದ ಲಾಡ್ಜ್ ನಲ್ಲಿ ರೂಮ್ ಕೊಡಿಸಲು ಸಹಕರಿಸಿದ ಯುವಕನ ಮೇಲೆ ನಡೆಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ದೊರೆತಿದೆ. ಸುಳ್ಯ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ನೇತೃತ್ವದ ತಂಡ ಆರೋಪಿಗೆ ಜಾಮೀನು ತೆಗೆಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪುನೀತ್ ಸೋಣಂಗೇರಿ ಹಲ್ಲೆ ಪ್ರಕರಣದಡಿ ಬಂಧಿತನಾಗಿದ್ದ ಯುವಕ. ಆ 12 ರಂದು ಸಂಜೆ ಹಲ್ಲೆ ಪ್ರಕರಣ ನಡೆದಿತ್ತು. ಕೇರಳ ಮಲಪುರಂ ನಿವಾಸಿ ಪ್ರಸ್ತುತ ಸುಳ್ಯದ ಅರಂತೋಡಿನಲ್ಲಿ ತೋಟ ಲೀಸಿಗೆ ಪಡೆದಿದ್ದ ಮೊಹಮ್ಮದ್ ಜಲೀಲ್(39) ಹಲ್ಲೆಗೊಳಗಾದ ಯುವಕ. ಇವರು ನೀಡಿದ ದೂರಿನಂತೆ ಸುಳ್ಯ ಠಾನೇಯಲ್ಲಿ ಪುನೀತ್ ಸಹಿತ ಐವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಅದೇ ದಿನ ತಡ ರಾತ್ರಿ ಪೊಲೀಸರು ಪುನೀತ್ ಅನ್ನು ಬಂಧಿಸಿದ್ದರು. ಬಳಿಕ ಪುನೀತ್ ರವರು ಹರೀಸ್ ಕಂಜಿಪಿಲಿ ಹಾಗೂ ಬಿಜೆಪಿಯ ಇತರ ಮುಖಂಡರ ನೆರವಿನೊಂದಿಗೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಬುಧವಾರ ಪುನೀತ್ ಅವರು ಜಿಲ್ಲಾ ಕಾರಗೃಹದಿಂದ ಬಿಡುಗಡೆ ಹೊಂದಿರುವುದಾಗಿ ವರದಿಯಾಗಿದೆ. ಅಲ್ಲದೇ ಈ ಕುರಿತ ವರದಿಯೊಂದನ್ನು ಸುಳ್ಯ ಬಿಜೆಪಿ ಪೇಸ್ ಬುಕ್ ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ.

ಬಿಡುಗಡೆ ವೇಳೆ ಬಿಜೆಪಿ ಮುಖಂಡರಾದ ಎ.ವಿ ತೀರ್ಥ ರಾಮ, ಸುಬೋದ್ ಶೆಟ್ಟಿ ಮೇನಾಲ, ವಿನಯ್ ಕುಮಾರ್ ಕಂದಡ್ಕ , ನಿಖೇಶ್ ಉಬರಡ್ಕ, ಸುನೀಲ್ ಕೇರ್ಪಳ, ಕೌಶಲ್, ರಕ್ಷಿತ್ , ಕೀರ್ತನ್, ದೀಕ್ಷಿತ್ ಹಾಜರಿದ್ದರು.