Illigal Cattle transportation : ವಿಟ್ಲ : ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಜಾನುವಾರು ಸಾಗಿಸುತ್ತಿದ್ದ ನಾಲ್ವರ ಬಂಧನ

Arrest_1
Ad Widget

Ad Widget

Ad Widget

ವಿಟ್ಲ : ಜು 16 : ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ವಿಟ್ಲ ಪೋಲಿಸರು ಬಂಧಿಸಿದ ಘಟನೆ ಜು 16ರಂದು ಮುಂಜಾನೆ ನಡೆದಿದೆ. ಬಂಧಿತರಿಂದ 5 ಜಾನುವಾರು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದಿದ್ದಾರೆ

Ad Widget

ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ ಯಾನೆ ಮೋನು, ಮಂಜೇಶ್ವರ ಬಾಕ್ರಬೈಲು ನಿವಾಸಿ ಮೂಸಾ , ಬಂಟ್ವಾಳ ಕನ್ಯಾನ ಗ್ರಾಮದ ನಿವಾಸಿ ಹಮೀದ್ ಯಾನೆ ಜಲಾಲ್ ಹಾಗೂ ಸಾಲೆತ್ತೂರಿನ ಹಮೀದ್ ಬಂಧಿತ ಆರೋಪಿಗಳು.

Ad Widget

Ad Widget

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೆಎ-19-ಎಬಿ-1793 ಎಂಬ ಗೂಡ್ಸ್‌ ವಾಹನದಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೇರಳ ಕಡೆಗೆ ಮಾಂಸಕ್ಕಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

Ad Widget

ಆರೋಪಿಗಳ ವಿರುದ್ದ ಕಲಂ: 5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ-2020 ಹಾಗೂ 11(1)(ಎ),11(1)(ಡಿ) ಪ್ರಾಣಿ ಹಿಂಸೆ ನಿ಼ಷೇಧ ಕಾಯ್ದೆ 1960 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

Ad Widget

Ad Widget

Leave a Reply

Recent Posts

error: Content is protected !!
%d bloggers like this: