Atrocity Case ಪುತ್ತೂರು : ಆ 16: ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೊರ್ವರಿಗೆ ಇಬ್ಬರು ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕು ಕುರಿಯ ಗ್ರಾಮದ ದೇರ್ಖಜೆ ನಿವಾಸಿ ವೆಂಕಟ್ರಮಣ ಭಟ್, ಬಿನ್: ನರಸಿಂಹ ಭಟ್, ಮತ್ತು ನರೇಶ್ ಭಟ್, ಬಿನ್: ವೆಂಕಟ್ರಮಣ ಭಟ್ ಪ್ರಕರಣದ ಆರೋಪಿಗಳು.
ಮಡಿಕೇರಿ ಕರಿಕೆ ಗ್ರಾಮದ ನಿವಾಸಿ ಪ್ರಸ್ತುತ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಮಾಂತೂರು ಎಂಬಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಮಹಿಳೆ ಪ್ರಕರಣದ ಸಂತ್ರಸ್ತೆ. ಈಕೆ ಕಳೆದ ಮೂರು ವರ್ಷಗಳಿಂದ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಮಾಂತೂರು ಎಂಬಲ್ಲಿ ಶ್ರೀಮತಿ ನಾಗರತ್ನಮ್ಮ ಎಂಬವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಆ 16 ರಂದು ಸಂತ್ರಸ್ತೆ ನಾಗರತ್ನಮ್ಮನವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ವೆಂಕಟ್ರಮಣ ಭಟ್ ಹಾಗೂ ನರೇಶ್ ಭಟ್ ಬೈದು, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಆರೋಪಿಗಳಿಬ್ಬರೂ ಸಂತ್ರಸ್ತೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ.
ಮಹಿಳೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 323, 354, 354(B), 504, 506 ಜೊತೆಗೆ 34 ಮತ್ತು ಕಲಂ 3(1)(r), 3(1)((s), 3(1)(w)(I) Prevention of atrocities (Amendment) Act 2015 ರಂತೆ ಪ್ರಕರಣ ದಾಖಲಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.