ಎದೆ ಹಾಲು ಶ್ವಾಸನಾಳಕ್ಕೆ ಹೋಗಿ 3 ತಿಂಗಳ ಮಗು ಸಾವು

20230816_164153
Ad Widget

Ad Widget

Ad Widget

ತಾಯಿ ಹಾಲು ಕುಡಿದು ಮಲಗಿದ್ದ ಮೂರು ತಿಂಗಳ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಪಳ್ಳಿಚಲ್‌ ಮೂಲದ ಜಯಕೃಷ್ಣನ್‌ ಮತ್ತು ಜಾನಿಮೋಲ್‌ ದಂಪತಿಯ ಏಕೈಕ ಪುತ್ರ ಜಿತೇಶ್ ಮೃತ ದುರ್ದೈವಿ ಮಗುವಾಗಿದೆ.

Ad Widget

ಭಾನುವಾರ ರಾತ್ರಿ ಮಗುವಿಗೆ ಹಾಲುಣಿಸಿ ಮಲಗಿಸಿದ್ದರು. ಆದರೆ ಬೆಳಗ್ಗೆ ಮಗು ಸ್ಪಂದಿಸದಿರುವುದನ್ನು ಕಂಡು ಪೋಷಕರು ಸೋಮವಾರ ಬೆಳಗ್ಗೆ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಬಳಿಕ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಹೃದಯಬಡಿತದಲ್ಲಿ ವ್ಯತ್ಯಾಸವಾಗುತ್ತಿದೆ.

Ad Widget

Ad Widget

ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಅಂತೆಯೇ ಪೋಷಕರು ಎಸ್‍ಐಟಿ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದಾರೆ.

Ad Widget

ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.ಎದೆ ಹಾಲು ಮಗುವಿನ ಶ್ವಾಸನಾಳಕ್ಕೆ ಸೇರಿ ಸಾವಿಗೆ ಕಾರಣವಾಯಿತು ಎಂದು ವೈದ್ಯರು ವಿವರಿಸಿದ್ದಾರೆ.

Ad Widget

Ad Widget

Leave a Reply

Recent Posts

error: Content is protected !!
%d bloggers like this: