ಕಳೆದ 3 ದಿನಗಳಿಂದ ಪುತ್ತೂರಿನ ಬೊಳ್ವಾರಿನಲ್ಲಿರುವ ಪ್ರಭು ಚರುಂಬುರಿಯಲ್ಲಿ “ ಚರುಂಬುರಿ ಹಬ್ಬ” ನಡೆಯುತ್ತಿದ್ದು, ಗ್ರಾಹಕರು ಮುಗಿ ಬಿದ್ದು ತಮ್ಮ ಇಷ್ಟದ ಚರುಂಬುರಿಗಳನ್ನು ಖರೀದಿಸುತ್ತಿದ್ದಾರೆ. ಗ್ರಾಹಕರ ಆಪೇಕ್ಷೆಯಂತೆ ಇದೀಗ ಅದನ್ನು ಇನ್ನೊಂದು ದಿನ ವಿಸ್ತರಣೆ ಮಾಡಲಾಗಿದೆ ಆ 16 ರವರೆಗೆ ಹಬ್ಬ ಮುಂದುವರಿಯಲಿದೆ. ಆ 15 ರಂದು ಈ ಹಬ್ಬ ಮುಕ್ತಾಯಗೊಳ್ಳಲಿದೆ ಎಂದು ಈ ಹಿಂದೆ ತಿಳಿಸಲಾಗಿದ್ದು, ಅದೀಗ ಒಂದು ದಿನ ವಿಸ್ತರಣೆಗೊಳ್ಳಲಿದೆ
ಅಲ್ಲದೇ ಇಂದು ಆ 15 ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಚರುಂಬುರಿ ಹಬ್ಬ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಇಂದಿನ ಚರುಂಬುರಿ ಹಬ್ಬಕ್ಕೆ ಆಗಮಿಸುವ ದೇಶ ರಕ್ಷಣೆಗೆ ತಮ್ಮನ್ನು ತಾವು ಮುಡಿಪಾಗಿಟ್ಟ ಭಾರತೀಯ ಸೇನೆಯ ಹೆಮ್ಮೆಯ ಸೈನಿಕರಿಗೆ ಉಚಿತವಾಗಿ ಚರುಂಬುರಿ ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಹಿರಿಯ ನಾಗರೀಕರಿಗೆ ಶೇ 10 ವಿಶೇಷ ರಿಯಾಯಿತಿಯನ್ನು ಕೊಡಮಾಡಲಾಗುತ್ತದೆ. ಆಗಸ್ಟ್ 12ರಂದು ಈ ಚರುಂಬುರಿ ಜಾತ್ರೆ ಗೆ ಚಾಲನೆ ನೀಡಲಾಗಿದ್ದು, ಪ್ರತಿ ದಿನ ಸಂಜೆ 4ರಿಂದ 10ರವರೆಗೆ ನಡೆಯಲಿದೆ.
ಪುತ್ತೂರಿಗೆ ಈ ಚರುಂಬುರಿ ಹಬ್ಬದ ಕಲ್ಪನೆಯನ್ನು ಪರಿಚಯಿಸಿದವರು ಸುಮಾರು ಇಪ್ಪತ್ತೆöÊದು ವರ್ಷಗಳಿಂದ ಚರುಂಬುರಿ ವ್ಯವಹಾರದಲ್ಲಿ ತೊಡಗಿರುವ ಬಟ್ವಾಳದ ರಾಜೇಶ್ ಪ್ರಭು. ಆರಂಭದಲ್ಲಿ ಬಂಟ್ವಾಳದ ಸುತ್ತಮುತ್ತ ಚರುಂಬುರಿ ವ್ಯವಹಾರ ಮಾಡಿಕೊಂಡಿದ್ದ ರಾಜೇಶ್ ಪ್ರಭು ಅವರು ನಂತರ ಪುತ್ತೂರಿನ ಶ್ರೀಧರ ಭಟ್ ಅಂಗಡಿ ಎದುರು ಒಂದು ದಶಕಕ್ಕೂ ಮೀರಿ ಚರುಂಬುರಿ ವ್ಯವಹಾರ ನಡೆಸಿದವರು.

ಕಳೆದ ಮೂರು ವರ್ಷಗಳಿಂದ ಕೊಂಬೆಟ್ಟಿನ ಬಂಟರ ಭವನದ ಎದುಗಡೆಯ ಜಿ.ಎಲ್. ಸೆಂಟರ್‌ನಲ್ಲಿ ಇವರ ‘ಪ್ರಭು ಚರುಂಬುರಿ’ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಕೊರೋನ ಪೂರ್ವದಲ್ಲಿ ಒಮ್ಮೆ ಚರುಂಬುರಿ ಹಬ್ಬವನ್ನು ಆಯೋಜಿಸಿ ಅಪಾರ ಯಶಸ್ಸನ್ನು ಗಳಿಸಿದ್ದಾರೆ. ಇದೀಗ ಚರುಂಬುರಿ ಹಬ್ಬದ ಎರಡನೇ ಅವರತರಣಿಕೆ ಆರಂಭಗೊಳ್ಳುತ್ತಿದೆ. ರಾಜೇಶ್ ಪ್ರಭು ಅವರ ಜತೆಗೆ ಅವರ ಸಹವರ್ತಿಗಳಾದ ಆದರ್ಶ ವಿ, ಮಹೇಶ್, ದೇವಿಪ್ರಸಾದ್, ವನಿತಾ ಹಾಗೂ ಸುಮತಿ ಕೈ ಜೋಡಿಸಲಿದ್ದಾರೆ.
ಪಾರ್ಕಿಂಗ್ ಹಾಗೂ ಆಸನ ವ್ಯವಸ್ಥೆ: ಈ ಬಾರಿಯ ಚರುಂಬುರಿ ಹಬ್ಬಕ್ಕೆ ಆಗಮಿಸುವವರಿಗಾಗಿ ಕೊಂಬೆಟ್ಟಿನ ಪ್ರಭು ಚರುಂಬುರಿ ಅಂಗಡಿಯ ಎದುರಿನ ಬಂಟರ ಭವನದ ಪ್ರಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಅಂತೆಯೇ ಸುಮಾರು ಇನ್ನೂರು ಜನ ಕುಳಿತು ಚರುಂಬುರಿ ಸೇವಿಸುವ ವ್ಯವಸ್ಥೆಯನ್ನು ಜಿ.ಎಲ್.ಸೆಂಟರ್ ಮಾಳಿಗೆಯಲ್ಲಿ ಒದಗಿಸಿಕೊಡಲಾಗುತ್ತಿದೆ.