gruha lakshmi scheme : ಗೃಹ ಲಕ್ಷ್ಮೀ ಯೋಜನೆಗೆ ನೀವು ಸಲ್ಲಿಸಿದ ಅರ್ಜಿ ಸಲ್ಲಿಕೆ ಆಗಿದೆಯೇ ಎಂದು ತಿಳಿಯಲು ಹೀಗೆ ಮಾಡಿ

FmpzxI9aAAErGeU
Ad Widget

Ad Widget

Ad Widget

gruha lakshmi scheme ಕರ್ನಾಟಕ ಕಾಂಗ್ರೆಸ್‌ ಸರ್ಕಾರ ತನ್ನ 3ನೇ ಗ್ಯಾರಂಟಿಯಾಗಿ (Guarantee scheme) ಗೃಹಲಕ್ಷ್ಮಿ (ಮನೆ ಒಡತಿಗೆ ಮಾಸಿಕ 2000 ರೂ. ಹಣ) ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದ್ದು, ನೋಂದಾಣಿ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಆ 20 ರಂದು ಯೋಜನೆಯ ಮೊದಲ ಕಂತು ಬಿಡುಗಡೆಯಾಗಲಿದೆ.

Ad Widget

ಮಾಜಿ ಪ್ರಧಾನಿ ರಾಜೀವ್‌ ಗಾಂದಿ ಹಾಗೂ ಕರ್ನಾಟಕ ಕಂಡ ಅತ್ಯದ್ಭುತ ಮುಖ್ಯ ಮಂತ್ರಿಗಳಲ್ಲಿ ಒಂದಾದ, ದೇವರಾಜ್‌ ಅರಸ್‌ ಅವರ ಜನ್ಮದಿನದಂದು ಸಿ ಎಂ ಸಿದ್ದರಾಮಯ್ಯನವರು ಮೊದಲ ಕಂತು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಶೇ 80 ಮಂದಿ ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಅವರು ಸಲ್ಲಿಸಿದ ಅರ್ಜಿ ಸ್ವೀಕೃತವಾಗಿದ್ದೇಯೆ ಎಂದು ತಿಳಿಯಲು ಕೆಳಗೆ ನೀಡಿದ ಮಾಹಿತಿಯನ್ನು ಅನುಸರಿಸಿ .
ಅದಕ್ಕೂ ಮೊದಲು ಗೃಹ ಲಕ್ಷ್ಮೀ ಯೋಜನೆ ಹಾಗೂ ಅದಕ್ಕೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಂಡು ಬರೋಣ.

Ad Widget

Ad Widget

Ad Widget

ಜುಲೈ 20 ರಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಸ್ವೀಕರಿಸುವುದನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು. ಗ್ರಾಮ ಓನ್ , ಬೆಂಗಳೂರು ಓನ್, ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪಡಿತರ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯಾಗಿರುವ ಮಹಿಳೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ರಾಜ್ಯದಲ್ಲಿ ಒಟ್ಟು 1,53,070,32 ಜನ ಪರಿತರ ಚೀಟಿ ಹೊಂದಿದವರಿದ್ದು, ಪೈಕಿ 1 ಕೋಟಿ 22 ಲಕ್ಷ ಕಾರ್ಡ್ ಗಳಲ್ಲಿ ಮಹಿಳೆಯರೇ ಮನೆಯ ಮುಖ್ಯಸ್ಥೆಯಾಗಿದ್ದಾರೆ. 6 . 31 ಲಕ್ಷ ಪಡಿತರ ಕಾರ್ಡ್ ನಲ್ಲಿ ಪುರುಷರೇ ಮನೆಯ ಮುಖ್ಯಸ್ಥರಾಗಿದ್ದಾರೆ. ಮಹಿಳೆ ಅಥವಾ ಆಕೆಯ ಗಂಡ GST ನಂಬರ್ ಹೊಂದಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಿಗುವುದಿಲ್ಲ.

Ad Widget

ಎಲ್ಲೆಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು:

Ad Widget

Ad Widget

ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ, ತಾಲೂಕು ಕಚೇರಿಗಳು ಹಾಗೂ ನಾಡ ಕಚೇರಿಯಲ್ಲೂ ಕೂಡ ಅರ್ಜಿ ಅಲ್ಲಿಸ ಬಹುದಾಗಿದೆ. ಆನ್ ಲೈನ್ ಮತ್ತು ಆಫ್ಲೈನ್ ಮೂಲಕವು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಕೆಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಕಡ್ಡಾಯವಾಗಿ ನೀಡಬೇಕು. ಅಲ್ಲದೇ ಬ್ಯಾಂಕ್ ಖಾತೆಗೆ ಲಿಂಕ್ ಆದ ಮೊಬೈಲ್ ನಂಬರನ್ನೇ ಅರ್ಜಿ ಹಾಕುವ ವೇಳೆ ನಮೋದಿಸಬೇಕು. ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ರೂ ಅಂತವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : Canara Bank Recruitment 2023 : 500 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ

ಅರ್ಜಿ ಸ್ವೀಕೃತವಾಗಿದೆಯೇ ಎಂದು ತಿಳಿಯಲು ಹೀಗೆ ಮಾಡಿ

ನಿಮ್ಮ ಮನೆ ಯಜಮಾನಿಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಯಶಸ್ವಿಯಾಗಿ ಕರ್ನಾಟಕ ಸರ್ಕಾರಕ್ಕೆ ತಲುಪಿದಿಯೆ ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆ (ಲಿಂಕ್ ಆಗಿರುವಂತ) ಇಂದ 8147500500 ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಾರ್ಮಲ್ ಮೆಸ್ಸೇಜ್ ಮಾಡಿ ತಕ್ಷಣ 10 ರಿಂದ 15 ಸೆಕೆಂಡ್ ಒಳಗೆ ನಿಮ್ಮ ಗೃಹ ಲಕ್ಷ್ಮಿ ಯೋಜನೆಯು ಯಶಸ್ವಿಯಾಗಿದೆಯೇ ಅಥವಾ ಆಗಿಲ್ಲವೆ ಎಂಬುದನ್ನು ತಿಳಿಸುತ್ತದೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: