Popular Celebrations: ಜಿ ಎಲ್ ವನ್ ಮಾಲ್ ನಲ್ಲಿ ಆರಂಭವಾಗಿದೆ ಚಪ್ಪರಿಸಿದಷ್ಟೂ ಮತ್ತೆ ಬೇಕೆನಿಸುವ ಅಂತರಾಷ್ಟ್ರೀಯ ಗುಣಮಟ್ಟದ ಸ್ಪೆಷಲ್ ಖಾದ್ಯಗಳ ಕೆಫೆ

4
Ad Widget

Ad Widget

Ad Widget

ಪುತ್ತೂರು : ಆ 11: ಅಂತರಾಷ್ಟ್ರೀಯ ಗುಣಮಟ್ಟದ ಅಧುನಿಕ ಶೈಲಿಯ ರುಚಿ ಶುಚಿಯಾದ ಮಾಡರ್ನ್‌ ಫುಡ್ ಗಳನ್ನು ಸರ್ವ್‌ ಮಾಡುವ ಮೂಲಕ ಈಗಾಗಲೇ ಪುತ್ತೂರು ಅಸುಪಾಸಿನಲ್ಲಿ ಮನೆ ಮಾತಾಗಿರುವ ” ಸೆಲೆಬ್ರೇಷನ್ಸ್‌ ಕೆಫೆ “ (Celebrations Cafe) ಇದೀಗ ಪುತ್ತೂರಿನ ಪ್ರತಿಷ್ಟಿತ ಜಿಎಲ್‌ ಮಾಲ್‌ ನ ಪುಢ್‌ ಕೋರ್ಟ್‌ ನಲ್ಲೂ ಆರಂಭಗೊಂಡಿದೆ. ಹತ್ತೂರಿನ ಜನರ ಅಚ್ಚು ಮೆಚ್ಚಿನ ಈ  ಕೆಫೆ  ಆ 8 ರಂದು  ಜಿ ಎಲ್‌ ಮಾಲ್‌ ನ ಎರಡನೇ ಮಹಡಿಯಲ್ಲಿ ವಿದ್ಯುಕ್ತವಾಗಿ ಸೇವೆ ಶುರು ಮಾಡಿತ್ತು.

Ad Widget

ಪುತ್ತೂರು ಹಾಗೂ ಅದರ ಸುತ್ತಮುತ್ತಲಿನ ಪರಿಸರದ  ಸಿಹಿ – ಖಾರ ತಿನಿಸು ಪ್ರಿಯರ ಮೊದಲ ಆಯ್ಕೆ ಆಗಿರುವ ಪಾಪ್ಯೂಲರ್‌ ಸ್ವೀಟ್ಸ್‌ ಸಂಭ್ರಮಾಚರಣೆಯನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಕೇಕ್ ಪ್ರಿಯರಿಗೆಂದೇ ಪ್ರತ್ಯೇಕ ಮಳಿಗೆ ಅಂತರಾಷ್ಟ್ರೀಯ  ಕೆಫೆ ‘ಸೆಲೆಬ್ರೇಷನ್ಸ್’ ಅನ್ನು 2019ರಲ್ಲಿ ಪ್ರಾರಂಭಿಸಿತು. ಅದರ ಮೂಲಕ  ವೆರೈಟಿ  ಕೇಕ್ ಜತೆಗೆ ಕೋಲ್ಡ್ ಕಾಫಿ, ಫಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಮುಂತಾದುವುಗಳನ್ನು ಪುತ್ತೂರಿಗೆ ಪರಿಚಯಿಸಿತು. ಪುತ್ತೂರಿನ ಮುಖ್ಯ ರಸ್ತೆ  ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಮೀಪವಿರುವ  ʼಸೆಲೆಬ್ರೇಷನ್ಸ್‌ ಕೆಫೆʼ ಫ್ಯಾಮಿಲಿ  ಹಾಗೂ ಯುವ ಸಮುದಾಯದ ನೆಚ್ಚಿನ ತಾಣವಾಗಿದೆ.

Ad Widget

Ad Widget

ಸೆಲೆಬ್ರೇಷನ್ಸ್‌ ಕೆಫೆ ಕನಸ್ಸು ಹುಟ್ಟಿಕೊಂಡದ್ದು ಹೇಗೆ ಗೊತ್ತೇ ?

Ad Widget

ಪಾಪ್ಯುಲರ್‌ ಸ್ವೀಟ್ಸ್‌ ನ ಮಾಲಕ ನರಸಿಂಹ ಕಾಮತ್‌ ಅವರ ಹಿರಿಯ ಸೊಸೆ ಶುಭ ಕಾಮತ್‌ ಅವರ ಕನಸಿನ ಕೂಸು ಈ  “ಸೆಲೆಬ್ರೇಷನ್ಸ್‌ ಕೆಫೆ ” ವಿದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಅಲ್ಲಿನ ಕೆಫೆ ಹಾಗೂ ಅಲ್ಲಿ ಸರ್ವ್‌ ಮಾಡುತ್ತಿದ್ದ ಉತ್ಕೃಷ್ಟ ಹಾಗೂ ಸ್ವಾದಿಷ್ಟ ಆಹಾರವನ್ನು ಅಸ್ವಾಧಿಸಿದ ಅವರು ಇದೆ ರೀತಿಯ ಗುಣಮಟ್ಟದ ತಿನಸನ್ನು ಕೈಗೆಟಕುವ ದರದಲ್ಲಿ ನಮ್ಮೂರಲ್ಲೂ ನೀಡಬೇಕೆಂಬ ಕನಸ್ಸೊಂದು ಅವರ ಮನಸ್ಸಿನಲ್ಲಿ ಮೂಡಿತ್ತು.  ಇದರ ಫಲಸ್ವರೂಪವೇ  ಈ ಸೆಲೆಬ್ರೇಷನ್ಸ್‌.

Ad Widget

Ad Widget

ವಿಶೇಷ ಪರಿಣಿತಿ

ಆಹಾರದಲ್ಲಿ  ಮಸಾಲ ಪದಾರ್ಥಗಳನ್ನು (ingredients) ಬಳಸುವ  ವಿಷಯದಲ್ಲಿ ಶುಭ ಕಾಮತ್‌ ರವರು ವಿಶೇಷ ಪರಿಣಿತಿ ಹೊಂದಿದ್ದು,  ಈ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್‌ ಕೂಡ ಮಾಡಿದ್ದಾರೆ.  ಸಿಲೆಬ್ರೆಷನ್‌ ನ ಸ್ವಾದಿಷ್ಟ ಆಹಾರದ ಹಿಂದೆ ಅವರ ಕೈ ಚಳಕ, ಅವಿರತ ಪ್ರಯತ್ನ ಎದ್ದು ಕಾಣುತ್ತದೆ.

ಇಂಟರ್‌ ನ್ಯಾಷನಲ್‌ ಸ್ಟ್ಯಾಂಡರ್ಡ್‌ ನ ಕೆಫೆ :

ಈ ಕೆಫೆಯಲ್ಲಿ ಮಾರಾಟ ಮಾಡಲಾಗುವ ಬಹುತೇಕ ಎಲ್ಲವು ವಿದೇಶದಲ್ಲೆ ಜನ್ಮ ತಾಳಿರುವ ಖಾಧ್ಯಗಳಾಗಿದ್ದು  ಅದೇ ರುಚಿ ಮತ್ತು ಗುಣಮಟ್ಟವನ್ನು ಉಳಿಸುಕೊಳ್ಳುವ ಉದ್ದೇಶದಿಂದ  ಅಲ್ಲಿ  ಬಳಸುವ ಅದೇ ಅತ್ಯಾಧುನಿಕ Equipment ಗಳನ್ನು ಆಮದು ಮಾಡಿಕೊಂಡು ಇಲ್ಲಿ ಖಾಧ್ಯ  ತಯಾರಿಸಲಾಗುತ್ತಿದೆ.  ಹೀಗಾಗಿ ಮಲ್ಟಿ ನ್ಯಾಷನಲ್‌ ಕಂಪೆನಿಗಳು ಕೊಡ ಮಾಡುವ ಅದೇ ಗುಣಮಟ್ಟ ಮತ್ತು ರುಚಿಯನ್ನು ಸೆಲೆಬ್ರೇಷನ್ಸ್‌ ನಲ್ಲೂ ಕಾಣಬಹುದಾಗಿದೆ.  ಖಾದ್ಯ  ತಯಾರಾಗುವ ಕಿಚನ್‌ ಕೂಡ ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ನಿರ್ಮಿಸಲಾಗಿದ್ದು,  ಗುಣ ಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ಆಹಾರ ಸುರಕ್ಷತೆಯ ವಿಚಾರವಾಗಿ ಗರಿಷ್ಟ ಪ್ರಾದಾನ್ಯತೆಯನ್ನು ಇಲ್ಲಿ ಅನುಸರಿಸಲಾಗುತ್ತದೆ.

ಸೆಲೆಬ್ರೇಷನ್ಸ್‌ ಕೆಫೆ ಯಲ್ಲಿ ತಯಾರಾಗುವ ಆಹಾರಕ್ಕೆ ಬೇಕಾಗುವ ಮಸಾಲ ಪದಾರ್ಥಗಳನ್ನು ಯಾವುದನ್ನು  ಹೊರಗಡೆಯಿಂದ  ಖರೀದಿಸುವ ಪರಿಪಾಟವಿಲ್ಲ.  ಸಾಸ್‌ ನಿಂದ ಹಿಡಿದು ಪ್ರತಿಯೊಂದನ್ನು ಸ್ವತ: ಸಿಲೆಬ್ರಷನ್‌ ನ ಪ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ. ಈ ಮಸಾಲ ಪದಾರ್ಥಗಳನ್ನು ಉಪಯೋಗಿಸಿ ಗ್ರಾಹಕರ್‌ ಅರ್ಡರ್‌ ನಂತೆ  ಸೆಲೆಬ್ರೇಷನ್ಸ್‌ ಕೆಫೆಯಲ್ಲಿ ತಿಂಡಿಗಳನ್ನು ಆಗಿಂದಾಗೆ ತಯಾರು ಮಾಡಿ ಕೊಡಲಾಗುತ್ತದೆ.

ಸದ್ಯದಲ್ಲೆ ಉತ್ಕೃಷ್ಟ ಗುಣಮಟ್ಟದ ಐಸ್‌ ಕ್ರಿಂ ಮಾರುಕಟ್ಟೆಗೆ

ಈ ಕೆಫೆಯಲ್ಲಿ ಪಿಜ್ಜಾ‌,  ಕೇಕ್, ಬರ್ಗರ್‌ ಅಂಡ್‌ ಪ್ರೆಂಚ್‌ ಫ್ರೈಸ್, ಸ್ಯಾಂಡ್‌ ವಿಚ್‌ & ವ್ರ್ಯಾಪ್‌ (Wrap) ಇಲ್ಲಿ ದೊರೆಯುತ್ತದೆ.  ಇದರ ಜತೆಗೆ ಮುಂದಿನ ಒಂದೆರಡು ತಿಂಗಳಿನಲ್ಲಿ ಶುದ್ದ  ಹಾಲಿನಿಂದ ತಯಾರಿಸಿದ ಉತ್ಕೃಷ್ಟ ಗುಣಮಟ್ಟದ ಐಸ್‌ ಕ್ರಿಂ ಗಳನ್ನು  ಕೂಡ  ಸೆಲೆಬ್ರೇಷನ್ಸ್‌  ಮಾರುಕಟ್ಟೆಗೆ ಪರಿಚಯಿಸಲಿದೆ.  ಈ ಎಲ್ಲ ಪ್ರಯತ್ನಕ್ಕೂ  ಗ್ರಾಹಕರ ಬೆಂಬಲವಿರಲಿ ಎಂದು ಸಿಲೆಬ್ರೆಷನ್‌ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಕೋರಿದ್ದಾರೆ.

Leave a Reply

Recent Posts

error: Content is protected !!
%d bloggers like this: