Philomina PU College ಪುತ್ತೂರು: ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಳಚ್ಚಿಲ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ರಾಷ್ಟçಮಟ್ಟದ ಟೆಕ್ನೋ ಕಲ್ಚರಲ್ ಗೇಮ್ ಫೆಸ್ಟ್ ೨೦೨೩ನಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಪ್ರಥಮ ವಿಜ್ಞಾನ ವಿಭಾಗದ ಅಂಗೀಕ ಶೆಟ್ಟಿ ಭರತನಾಟ್ಯದಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ವಿಂದ್ಯಾಶ್ರೀ ರೈ ಭರತನಾಟ್ಯದಲ್ಲಿ ದ್ವಿತೀಯ ಸ್ಥಾನ ಪ್ರಥಮ ವಿಜ್ಞಾನ ವಿಭಾಗದ ಖುಷಿ ಜಾನಪದ ಗೀತೆಯ ಪ್ರಥಮ ಸ್ಥಾನ, ಚಲನಚಿತ್ರ ಗೀತೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಮೆಲ್‌ಸ್ಟನ್ ವೇಗಸ್ ದ್ವಿತೀಯ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ನಾಗಶ್ರೀ ಚೆಸ್ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನಿಖಿಲ್ ಎಂ ಮತ್ತು ಮಹಮ್ಮದ್ ಜಹರಾನ್ ತೃತೀಯ ಸ್ಥಾನ, ದ್ವಿತೀಯ ವಾಣಿಜ್ಯ ವಿಭಾಗದ ಲಾರೆನ್ಸ್ ಕ್ಯಾರಂನಲ್ಲಿ ತೃತೀಯ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ವಿನಂಬ್ರತ ಎಸ್ ಪಿ ರೂಬಿಕ್ಸ್ ಕ್ಯೂಬ್‌ನಲ್ಲಿ ದ್ವಿತೀಯ ಸ್ಥಾನ, ಟ್ರೆಶರ್ ಹಂಟ್‌ನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ದರ್ಶನ್ ಎ ಮತ್ತು ನಿರೋಶ್ ರೈ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ವಿಭಾಗ ವಿಭಾಗದ ಸುಮನಾ ಕೆ, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ ಪೈ ಉಪಸ್ಥಿತರಿದ್ದರು.