ಮಂಗಳೂರು,ಮೇ 27 : ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಅರುಣ್ ಪುತ್ತಿಲ ಬಗ್ಗೆ ಅಪಾರ ಗೌರವ ಇದೆ. ಪುತ್ತೂರಿನ ಬಗ್ಗೆ ಅವಲೋಕನ ಸಭೆ ನಡೀತಿದ್ದು, ಅಲ್ಲಿ ಎಲ್ಲವನೂ ಚರ್ಚಿಸಲಾಗುವುದು. ಸಂಘದ ಮತ್ತು ಪಕ್ಷದ ಒಳಗಿನ ಎಲ್ಲವನ್ನೂ ಸರಿ ಮಾಡ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮದ ಜತೆಗೆ ಮಾತನಾಡಿ ಹೇಳಿದರು.
ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ನಾನು ಖಂಡಿಸಿದ್ದೆ, ಖಂಡಿಸ್ತೇನೆ. ಬ್ಯಾನರ್ ಹಾಕಿದವರ ವಿರುಧ್ಧ ನಾವು ದೂರು ಕೊಟ್ಟಿಲ್ಲ. ಕಾರ್ಯಕರ್ತರು ತಪ್ಪು ಕಲ್ಪನೆಯಿಂದ ಫೇಸ್ ಬುಕ್ ನಲ್ಲಿ ಹಾಕಿರಬಹುದು. ನಾವು ಪೊಲೀಸರಿಗೆ ಒತ್ತಡ ಹಾಕಿಲ್ಲ, ಕಾಂಗ್ರೆಸ್ ನವರೇ ಹಾಕಿರಬಹುದು.
ರಾಜಕಾರಣದಲ್ಲಿ ಟೀಕೆಗಳನ್ನ ಸ್ವೀಕರಿಸಬೇಕು, ಅದಕ್ಕೆ ಉತ್ತರ ಕೊಡುವ ಕಾರ್ಯಕ್ಕೆ ಹೋಗುವುದಿಲ್ಲ. ಟೀಕೆಗಳು ಒಳ್ಳೆಯ ರೀತಿಯಲ್ಲಿ ಇರಬೇಕು ಮತ್ತು ಒಳ್ಳೆಯ ಟೀಕೆಗಳನ್ನು ಸ್ವೀಕರಿಸ್ತೇನೆ. ನಾವು ಯಾವುದೇ ಟೀಕೆಗಳನ್ನು ಸ್ವಾಗತಿಸ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಜ್ಯಧ್ಯಕ್ಷರು ಈ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.