ಪುತ್ತೂರು: ಈ ಭಾಗದಲ್ಲಿ ಮಳೆಗಾಳದಲ್ಲಿ ಗಾಳಿ, ಮಳೆ , ಸಿಡಿಲಿಗೆ ಕಂಬಗಳು (Electric Pole) ಉರುಳುವುದು, ವಿದ್ಯುತ್ ವ್ಯತ್ಯಯವಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಏನೇ ಸಮಸ್ಯೆಗಳಿದ್ದರೂ 24 ಗಂಟೆಯೊಳಗೆ ಅದನ್ನು ದುರಸ್ಥಿ ಮಾಡಿ ಕರೆಂಟ್ (electricity) ಬರುವಂತೆ ಮಾಡಬೇಕೇಂದು ಪುತ್ತೂರು ಶಾಸಕ (Puttur MLA) ಅಶೋಕ್ ರೈ (Ashok Rai) ಮೆಸ್ಕಾಂ (Mescom) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಗಾಲದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಪ್ರಾಣಕ್ಕೆ ಕುತ್ತು ಕೊಡುವ ರೀತಿಯಲ್ಲಿದ್ದಲ್ಲಿ ಅದನ್ನು ತೆರವು ಮಾಡಬೇಕು. ಶಾಲಾ, ಕಾಲೇಜು ಪರಿಸರದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದಲ್ಲಿ ಗಾಳಿ ಮಳೆಗೆ ಕಂಬಗಳು ಬೀಳುವಾಗ ವಿದ್ಯುತ್ ತಂತಿಗಳು ರಸ್ತೆಗೆ ಬೀಳದ ಹಾಗೆ ಗಾರ್ಡ್‍ಗಳನ್ನು ಅಳವಡಿಸಬೇಕು ಎಂದು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರ್ ರಾಮಚಂದ್ರರಿಗೆ ಶಾಸಕರು ಸೂಚನೆ ನೀಡಿದ್ದಾರೆ.
ಕರೆಂಟ್ ಸಮಸ್ಯೆ ಮಳೆಗಾಲದಲ್ಲಿ ಉಂಟಾಗಬಾರದು . ಸಮಸ್ಯೆಯಾದರೆ ಮೆಸ್ಕಾಂಗೆ ಕರೆ ಬರುವ ಹಾಗೇ ಶಾಸಕರಿಗೂ ಕರೆಗಳು ಬರುತ್ತದೆ, ಜನರು ನನ್ನಲ್ಲಿ ದೂರುಗಳನ್ನು ನೀಡುತ್ತಾರೆ. ಕ್ಷೇತ್ರದ ಜನತೆಗೆ ನಾನು ಉತ್ತರ ಕೊಡಬೇಕಾದರೆ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಇಲಾಖೆ ಇರಲಿ ಅವುಗಳಿಗೆ ಸರಕಾರದಿಂದ ಏನು ಸಹಾಯ ಬೇಕು ಅದನ್ನು ನಾನು ಮಾಡಿಸುತ್ತೇನೆ. ಉತ್ತಮ ಸೇವೆಯನ್ನು ನೀಡಲು ಎಲ್ಲರೂ ಬದ್ದರಾಗಿರಬೇಕು ಎಂದು ಸೂಚಿಸಿದರು.