ಬೆಂಗಳೂರು, ಮೇ27 : ತೀವ್ರ ಕುತೂಹಲಕಾರಿ ಸಚಿವ ಸಂಪುಟ ವಿಸ್ತರಣೆ ಇಂದು ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಸಮಾರಂಭವು ನಡೆಯಿತು. 24 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಸಂಪುಟ ಸೇರುವ ನೂತನ ಸಚಿವರು:
ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಬೈರತಿ ಸುರೇಶ್, ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ರಹೀಮ್ ಖಾನ್, ಡಿ. ಸುಧಾಕರ್, ಎಂ.ಸಿ. ಸುಧಾಕರ್, ಹೆಚ್.ಕೆ. ಪಾಟೀಲ್, ಚೆಲುವರಾಯಸ್ವಾಮಿ, ಕೆ.ಎನ್. ರಾಜಣ್ಣ, ಸಂತೋಷ್ ಲಾಡ್, ಮಧು ಬಂಗಾರಪ್ಪ, ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಆರ್.ಬಿ. ತಿಮ್ಮಾಪುರ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ್ ಪಾಟೀಲ್, ಬೋಸರಾಜು, ಬಿ. ನಾಗೇಂದ್ರ ಸೇರ್ಪಡೆಯಾಗಲಿದ್ದಾರೆ.
ಇವರಲ್ಲಿ ಬೈರತಿ ಸುರೇಶ್, ಮಧು ಬಂಗಾರಪ್ಪ, ಕೆ.ಎನ್. ರಾಜಣ್ಣ, ಬಿ. ನಾಗೇಂದ್ರ, ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ ವೈದ್ಯ, ಎನ್.ಎಸ್. ಬೋಸರಾಜು, ಡಾ.ಎಂ.ಸಿ. ಸುಧಾಕರ್ ಹೊಸದಾಗಿ ಸಂಪುಟಕ್ಕೆ ಸೇರಿದ ಸಚಿವರು.
6 ಜನ ಲಿಂಗಾಯಿತರು, 4 ಜನ ಒಕ್ಕಲಿಗರು ಹಾಗೂ ಪರಿಶಿಷ್ಟ ಜಾತಿಯ 6, ಪರಿಶಿಷ್ಟ ಪಂಗಡಕ್ಕೆ 3, ಮುಸ್ಲಿಂ ಮತ್ತು ಕುರುಬ 2, ಕ್ರೈಸ್ತ, ಜೈನ, ಬ್ರಾಹ್ಮಣ, ಮೊಗವೀರ, ಮರಾಠ, ಈಡಿಗ, ತೆಲುಗು ರಾಜು ಸಮುದಾಯಕ್ಕೆ ತಲಾ ಒಂದು ಸ್ಥಾನ ಸಿದ್ದರಾಮಯ್ಯ ಸಂಪುಟದಲ್ಲಿ ದೊರೆತಿದೆ.
ಸಂಪುಟ ವಿಸ್ತರಣೆಯಲ್ಲಿ ಅಚ್ಚರಿಯ ಹೆಸರು ಸೇರ್ಪಡೆಯಾಗಿದ್ದು, ಪ್ರಭಾವಿಗಳಿಗೆ ಸಚಿವ ಸ್ಥಾನ ಕೈತಪ್ಪಿದೆ. ಸಂಪುಟ ಸೇರಲು ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿರನ್ನು ಇದೀಗ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಎಂ. ಕೃಷ್ಣಪ್ಪ, ಹೆಚ್.ವೈ. ಮೇಟಿ, ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಲಕ್ಷ್ಮಣ ಸವದಿ, ಶಿವಲಿಂಗೇಗೌಡರಿಗೂ ಸಚಿವ ಸ್ಥಾನ ಕೈ ತಪ್ಪಿದೆ.
ಖಾತೆಗಳ ಹಂಚಿಕೆ ಕಾರ್ಯವು ಇಂದು ಸಂಜೆ ಅಥವಾ ಒಂದು ವಾರದೊಳಗೆ ನಡೆಯುವ ಸಾಧ್ಯತೆಯಿದೆ.