ಪುತ್ತೂರು, ಮೇ 26, ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪಸಾದ್ ಇವು ನಿರ್ಮಾಣದಲ್ಲಿ ಹೆಚ್.ಡಿ ಆರ್ಯ ನಿರ್ದೇಶನದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಇಂದು (ಮೇ 26) ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ
ಪುತ್ತೂರಿನ ಭಾರತ್ ಸಿನೆಮಾದ ಸ್ಕ್ರೀನ್ ನಲ್ಲಿ ಪಿರ್ಕಿಲು ತುಳು ಚಿತ್ರವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಪತ್ರಕರ್ತರೊಂದಿಗೆ ನಿರ್ಮಾಪಕ ಶಿವಪ್ರಸಾದ್ ಇಜ್ಜಾವು ಮಾತನಾಡಿ, ಇಂದು ತುಳುನಾಡಿನಾದ್ಯಂತ ನಮ್ಮ ಚಿತ್ರ ಪಿರ್ಕಿಲು ತೆರೆ ಕಂಡಿದೆ. ಉತ್ತಮವಾಗಿ ಪ್ರೇಕ್ಷಕರು ಸ್ಪಂದಿಸುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ, ಸುಧನ್ವ ಆಚಾರ್ಯರಿಂದ ಉದ್ಘಾಟಿಸಲಾಯಿತು. ಹೆಸರೇ ಹೇಳುವಂತೆ ಪಿರ್ಕಿಲು ಅದು ಬೇಜವಾಬ್ದಾರಿ ವರ್ತನೆಯುಳ್ಳ ಯುವಕರ ಕತೆಯಾಗಿದ್ದು, ಸಮಾಜಕ್ಕೆ ಹೇಗೆ ಪರಿಣಾಮ ಬೀರುತ್ತದೆ, ತಮ್ಮ ಜೀವನವನ್ನು ಹೇಗೆ ಸರಿ ಪಡಿಸುವುದು ಎನ್ನುವುದು ಚಿತ್ರದ ಸಾರಾಂಶ. ನಮ್ಮಿಂದಾದ ಪ್ರಯತ್ನ ವನ್ನು ನಾವು ಮಾಡಿದ್ದೇವೆ. ತುಳುನಾಡಿನ ಜನತೆ ಸಿನೆಮಾ ಥಿಯೇಟರ್ ಗೆ ಬಂತು ವೀಕ್ಷಿಸಿ ಬೆಂಬಲಿಸಬೇಕೆಂದು ವಿನಂತಿಸಿದರು.
ಚಿತ್ರದ ನಾಯಕ ಸುದೇಶ್ ರೈ ಮಾತನಾಡಿ, ಪಿರ್ಕಿಲು ಸಮಾಜದಲ್ಲಿ ಹೇಗೆ ಇರ್ತಾರೆ ಅವರಿಂದ ಸಮಾಜಕ್ಕೆ ಹೇಗೆ ತೊಂದರೆಯಾಗುತ್ತದೆ ಎನ್ನುವುದು ಕಾಣಬಹುದು. ಚಿತ್ರದ ಆರಂಭದಿಂದ ಕೊನೆಯವರೆಗೆ ಚಿತ್ರವು ಬಹಳ ಚೆನ್ನಾಗಿ ಮೂಡಿಬಂದಿದೆ.
ಚಿತ್ರಮಂದಿರಕ್ಕೆ ಚಿತ್ರವನ್ನು ನೋಡಿ ತುಳು ಭಾಷೆ, ತುಳು ಚಿತ್ರರಂಗವನ್ನು ಉಳಿಸಲು ಸಾರ್ವಜನಿಕರು ಮನವಿ ಮಾಡಿದರು.
ಇಂದು (ಮೇ 26)ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ ಮಣಿಪಾಲದಲ್ಲಿ ಭಾರತ್ ಸಿನಿಮಾ, ಐನಾಕ್ಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ ಸುರತ್ಕಲ್`ನಲ್ಲಿ ನಟರಾಜ್ ಸಿನಿ ಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ ಸಿನಿಮಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನಟ್, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ
ಮೊದಲಾದ ಕಡೆಗಳಲ್ಲಿ ಸಿನಿಮಾ ತೆರೆ ಕಂಡಿದೆ.
ಈ ಚಲನಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೋಜರಾಜ ವಾಮಂಜೂರು, ಕಾಮಿಡಿ ಹಿಟ್ಲರ್ ದೀಪಕ್ ರ ಪಾಣಜೆ ರವಿ ರಾಮಕುಂಜ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿ.ಸೋಜ, ಲತಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸುಮಿತ ರೈ, ಅಮಿತ, ನವೀನ್ ಬೊಂದೇಲ್, ಅರ್ಪಣ್, ಅನಿಲ್ ರ ರಂಜಿತ್ , ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೊನಿ ಮೊದಲಾದವರು ಅಭಿನಯಿಸಿದ್ದಾರೆ. ಸಿನಿಪ್ರಿಯರಿಂದ ಉತ್ತಮಸ್ಪಂದನೆ ದೊರಕಿದ್ದು, ಹೌಸ್ ಫುಲ್ ಪ್ರದರ್ಶನಗೊಂಡಿದೆ.
ಸಿನೆಮಾ ತಂತ್ರಜ್ಞರು
ವಸ್ತ್ರಾಲಂಕಾರ – ಲತಾ
ನಿರ್ದೇಶನ ತಂಡ – ದೀಪು ಆರಾಧ್ಯ – ಕೀರ್ತಿ
ಛಾಯಾಗ್ರಹಣ ಸಹಾಯ ಮೇಕಪ್, ದಿಶಾ, ದಿಲೀಪ್
ಸಂಕಲನ – ವಿ. ಆರ್ ಕೃಷ್ಣ, ಅಭಿಷೇಕ್ ರಾವ್
ಸಂಗೀತ – ವಿ ಮನೋಹರ
ಸಾಹಿತ್ಯ – ವಿ ಮನೋಹರ, ಶ್ರೀಧರ್ ಕರ್ಕೇರ
ಛಾಯಾಗ್ರಹಣ – ಎ. ಆರ್ ಕೃಷ
ನಿರ್ಮಾಪಕರು – ಸತೀಶ್ ಪರ್ನೆ, ಶಿವಪ್ರಸಾದ್ ಇಜ್ಜಾವು
ತುಳು ಸಂಭಾಷಣೆ ಸಹಾಯ ಮತ್ತು ತರ್ಜುಮೆ – ಬಬಿತ
ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ – ಹೆಚ್.ಡಿ ಆರ್ಯ
ಅಂದ ಚೆಂದದ ಹಾಸ ಮತ್ತು ಕೌಟುಂಬಿಕ ಕಥಾಹಂತರವಿರುವ ಚಿತ್ರ ಪಿರ್ಕಿಲು . ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ.
ಕಾರ್ಯಕ್ರಮದಲ್ಲಿ ಜಿಲ್ ಎಲ್ ವನ್ ಮಾಲ್ ನ ಸುಧನ್ವ ಆಚಾರ್ಯ, ನಾಯಕ ನಟ ಸುದೇಶ್ ರೈ, ಅನಿಲ್ ರೈ, ನಿರ್ಮಾಪಕ ಶಿವಪ್ರಸಾದ್ ಆಚಾರ್ಯ ಇಜ್ಜಾವು ರಾಧಾಕೃಷ್ಣ ರೈ ಬೂಡಿಯಾರು, ಎಂ ಕೆ ಮಠ ಉಪಸ್ಥಿತರಿದ್ದರು.