ಕಡಬ : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆಯ ಮೇಲಿಂದ ಉದ್ಯಮಿಯೊಬ್ಬರು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಲಂಕಾರಿನ ಹಾರ್ಡ್ ವೇರ್ ಉದ್ಯಮಿ ಚಂದ್ರಶೇಖರ ಪೂಜಾರಿ (60) ವ್ಯಕ್ತಿಯೊಬ್ಬರು ಶಾಂತಿಮೊಗರು ಸೇತುವೆಯ ಮೇಲೆ ಕಾರು ನಿಲ್ಲಿಸಿ ಬಲೂನ್ ಕಟ್ಟಿ ನೀರಿಗೆ ಹಾರಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು,ಮೃತ ಶರೀರವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಚಂದ್ರಶೇಖರ್ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ರಾತ್ರಿ ಮೊಮ್ಮಕ್ಕಳ ಜೊತೆ ಆಟವಾಡುತ್ತಿದ್ದ ಬಲೂನನ್ನೇ ಕಟ್ಟಿಕೊಂಡು ನೀರಿಗೆ ಹಾಕಿದ್ದಾರೆ ಎನ್ನಲಾಗಿದೆ.
ಸುರತ್ಕಲ್ ನ ಗ್ಯಾಸ್ ಏಜೆನ್ಸಿ ಮಾರಾಟ ಮಾಡಿದ್ದು ಯಾರಿಗೆ..? ಅಶ್ರಫ್ ಹಿಂದೂವಾ ಮುಸ್ಲಿಂಮಾ..? ಗೋಮಾಳ ಜಾಗ ಮಸೀದಿಗೆ ಹಂಚಲು ನೋಡಿದವರು ಯಾರೂ? ಬೈಬಲ್ ಹಂಚಿದವರನ್ನು ಠಾಣೆಯಿಂದ ಬಿಡಿಸಿದ್ದು ಯಾರೂ..? ಬೆಳ್ತಂಗಡಿಯಲ್ಲಾದ ಹಿಂದೂತ್ವ ಹೋರಾಟ ಗೊತ್ತಿದೆಯೇ..? – ಶಾಸಕ ಹರೀಶ್ ಪೂಂಜಾಗೆ ಸಾಲು ಸಾಲು ಪ್ರಶ್ನೆ ಕೇಳಿದ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್