ಬಂಟ್ವಾಳ : ಮೇ 26 : ಅನ್ಯ ಧರ್ಮಕ್ಕೆ ಸೇರಿದ ಮುದಕನೊಬ್ಬ ಬಸ್ಸಿನಲ್ಲಿ ತನ್ನ ಎದುರು ಸೀಟಿನಲ್ಲಿ ಕುಳಿತ ಮಹಿಳೆಯ ಜಡೆಯನ್ನು ಸವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಧರ್ಮಸ್ಥಳ – ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಸರಕಾರಿ ಬಸ್ಸಿನಲ್ಲಿ ನಡೆದ ಘಟನೆಯ ವಿಡೀಯೊ ಇದು ಎಂದು ಹೇಳಲಾಗುತ್ತಿದೆ. ಬಂಟ್ವಾಳ ತಾಲೂಕಿನ ನಾವೂರಿನ ಸಮೀಪದ ಪಲ್ಲಿಗುಡ್ಡೆ ಮನೆ ನಿವಾಸಿ ಹಮೀದ್ ಪ್ರಕರಣದ ಆರೋಪಿ
ಮಂಗಳೂರಿನಿಂದ ಈ ಬಸ್ಸು ಹೊರಟ್ಟಿದ್ದು ಅದು ಬಂಟ್ವಾಳ ತಾಲೂಕಿನ ಮಣಿಹಳ್ಳ ಎಂಬಲ್ಲಿ ತಲುಪಿದಾಗ ಮಹಿಳೆಯ ಹಿಂಬದಿಯ ಸೀಟಿನಲ್ಲಿ ಕೂತಿದ್ದ ಚಪಲ ಚೆನ್ನಿಗರಾಯ ಆಕೆಯ ಜಡೆಯನ್ನು ಸವರುವ ಹಾಗೂ ಹಿಡಿದೆಳೆಯುವ ಕೃತ್ಯ ನಡೆಸಿದ್ದಾನೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದಾರೆ
ಘಟನೆ ಬೆಳಕಿಗೆ ಬರುತ್ತಲೇ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಯನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ.