ದಕ್ಷಿಣ ಕನ್ನಡ
ಜೂ 20ರೊಳಗೆ ಕೋಡಿಬಾಂಡಿ ಬೇರಿಕೆ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ದಾರರಿಗೆ ತಾಕೀತು ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು : ಮೇ 25 : ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಕಾಮಗಾರಿ ನಡೆಸಿ ನೂತನಾವಗಿ ನಿರ್ಮಿಸಿದ ರಸ್ತೆಯೂ ಮಳೆಗೆ ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮದ್ಯದಲ್ಲಿ ಕಲ್ಲುಗಳನ್ನು ಇರಿಸಲಾಗಿದ್ದು , ಇದು ಚಾಲಕನ ಗಮನಕ್ಕೆ ಬಾರದೇ ರಾತ್ರಿ ವೇಳೆ ಅಪಘಾತಗಳು ಸಂಭವಿಸಿದಲ್ಲಿ ಅದರ ಹೊಣೆಯನ್ನು ಯಾರು ವಹಿಸಿಕೊಳ್ಳುತ್ತಾರೆಂದು ಪುತ್ತೂರಿನ ನೂತನ ಶಾಸಕ ಅಶೋಕ್ ಕುಮಾರ್ ರೈಯವರು ಸಂಬಂಧಪಟ್ಟ ಗುತ್ತಿಗೆದಾರರನ್ನು ಹಾಗೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರಾಗಿ ವಿಧಾನಸಭೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಚಟುವಟಿಕೆಯಲ್ಲಿ ಮೊದಲ ಬಾರಿ ಕಾಣಿಸಕೊಂಡ ಅಶೋಕ್ ಕುಮಾರ್ ರೈವರು ಗುರುವಾರ ಪುತ್ತೂರು – ಉಪ್ಪಿನಂಗಡಿ ಸಂಪರ್ಕ ರಸ್ತೆಯ ಕೋಡಿಂಬಾಡಿ ಶಾಂತಿನಗರ ವರೆಗೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪ್ರತಿನಿಧಿ ಅವರಿಗೆ ಸಾಥ್ ನೀಡಿದರು.
ಚತುಷ್ಪಥ ರಸ್ತೆ ಕಾಮಗಾರಿ ನಡೆದ ರೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು ಈ ಹಂತದಲ್ಲಿ ಆದ ಸಮಸ್ಯೆಗಳು ಮುಂದಿನ ಹಂತದಲ್ಲಿ ಬಾರದ ರೀತಿಯಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ರಸ್ತೆ ವಿಭಜಕ ಸೇರಿ ಚರಂಡಿ ಕಾಮಗಾರಿಗಳು ಯಾವಾಗ ಮುಗಿಯಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಮತ್ತೆ ಅದರಲ್ಲಿ ವಿಳಂಬವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಕುಮಾರ್ ರೈ ಗುತ್ತಿಗೆದಾರರರಿಗೆ ಎಚ್ಚರಿಕೆ ನೀಡಿದರು.
ಕಾಮಗಾರಿ ಈಗಾಗಲೇ ಬಹಳಷ್ಟು ವಿಳಂಬವಾಗಿದ್ದು, ಇದನ್ನು ಇನ್ನಷ್ಟು ಲಂಭಿಸಿದಲ್ಲಿ ಕಠಿಣ ಕ್ರಮಕ್ಕೆ ಸರಕಾರಕ್ಕೆ ಬರೆಯಬೇಕಾಗುತ್ತದೆ. ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸುವ ಕಾರ್ಯವನ್ನು ಮಾಡಬೇಕು ಎಂದು ಶಾಸಕರು ಸೂಚಿಸಿದರು. ಈ ವೇಳೆ ಜೂನ್ 20ರ ಮೊದಲು ಕಾಮಗಾರಿಯನ್ನು ಪೂರ್ಣಗೊಳಿಸಿವುದಾಗಿ ಗುತ್ತಿಗೆದಾರರ ಪ್ರತಿನಿಧಿ ತಿಳಿಸಿದ್ದು. ಆ ದಿನಾಂಕದೊಳಗೆ ರಸ್ತೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು “ ಶಾಂತಿನಗರದಿಂದ – ನೆಕ್ಕಿಲಾಡಿಯವರೆಗೆ ಎರಡನೇ ಹಂತದ ಕಾಮಗಾರಿ ನಡೆಯಲಿದ್ದು, ಉಪ್ಪಿನಂಗಡಿಯವರೆಗೆ ಮುಂದಿನ ದಿನದಲ್ಲಿ ಚತುಷ್ಪತವಾಗಿ ಅಗಲೀಕರಣ ಕಾಮಗಾರಿ ಮುಂದುವರಿಯಲಿದೆ. ಈಗಾಗಲೇ ನಡೆದ ಕಾಮಗಾರಿಯ ಪ್ರದೇಶದಲ್ಲಿ ತಡೆಗೋಡೆಗಳಿಲ್ಲದೆ, ಹಲವು ಮನೆಗಳಿಗೆ ಸಮಸ್ಯೆ ಎದುರಾಗಿದೆ. ಯೋಜನೆ ಅನುಷ್ಠಾನಕ್ಕೆ ತರುವ ಸಮಯದಲ್ಲೇ ತಡೆಗೋಡೆಗಳಿಗೆ ಅನುದಾನ ಮೀಸಲಿಡದೆ ಈ ಸಮಸ್ಯೆಯಾಗಿದೆ. ಮುಂದೆ ಇಂತಹ ಯಾವುದೇ ಸಮಸ್ಯೆಗಳೂ ಬರದ ರೀತಿಯಲ್ಲಿ ಕಾಮಗಾರಿಯನ್ನು ಮುಂದುವರಿಸಲು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ., ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಪೂಡಾ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಶಖೂರ್ ಹಾಜಿ, ಪಂಜಿಗುಡ್ಡೆ ಈಶ್ವರ ಭಟ್, ಅಝೀಜ್ ಬಸ್ತಿಕಾರ್, ಅನಿಮಿನೇಜಸ್, ಮೋನಪ್ಪ ಗೌಡ, ಎ.ಇ.ಇ. ರಾಜಾರಾಮ್, ಪ್ರಮೋದ್, ಗುತ್ತಿಗೆದಾರ ಜೆಡಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಭೆ:
ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಅಭಿವೃದ್ದಿ ವಿಚಾರಕ್ಕೆ ಸಂಭಧಿಸಿದಂತೆ ಶಾಸಕ ಅಶೋಕ್ ಕುಮಾರ್ ರೈ ಸಭೆ ನಡೆಸಿದರು. ಪ್ರಾಂಶುಪಾಲ ಸುಧೀರ್ ಕುಮಾರ್ ಕಾಲೇಜಿನ ಬಗ್ಗೆ ಪೂರ್ಣ ಮಾಹಿತಿಯನ್ನು ಶಾಸಕರ ಮುಂದಿಟ್ಟರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಆಧ್ಯಕ್ಷ ಡಾ. ರಾಜಾರಾಂ ಕೆ. ಬಿ., ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಶೆಟ್ಟಿ, ನಝೀರ್ ಮಠ, ಗ್ರಾಪಂ ಸದಸ್ಯ ಯು. ಟಿ. ತಸೀಫ್, ಅಬ್ದುಲ್ ರಹಿಮಾನ್ ಯುನಿಕ್, ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರ್ ಉಪಸ್ಥಿತರಿದ್ದರು.

ದೇವಾಲಯಕ್ಕೆ ಬೇಟಿ:
ಒಳಮೊಗ್ರು ಗ್ರಾಮದ ಉರ್ವ ಮಹಾಕಾಳಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು. ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಕುಂಬ್ರ ದುರ್ಗಾಪ್ರಸಾದ್ ರೈ, ದೈವಸ್ಥಾನದ ಮೊಕ್ತೇಸರರಾದ ವಿಜುಕುಮಾರ್ ರೈ ಮುಗೇರು, ಪುರಂದರ ಶೆಟ್ಟಿ ಮುಡಾಲ, ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ತಸಾದ್ ಆಳ್ವ, ಗ್ರಾಪಂ ಸದಸ್ಯ ನವೀನ್ ರೈ ಚೆಲ್ಯಡ್ಕ, ಸದಾಶಿವ ರೈ ಅಜ್ಜಿಕಲ್ಲು ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.
ಪುತ್ತೂರು
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಡಿಸೆಂಬರ್ 8ರಿಂದ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ. ಗ್ರಾಹಕರು ಪ್ರಾಚಿ ಆ್ಯಂಟಿಕ್ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಅಚ್ಚರಿಯ ಕೊಡುಗೆಗಳನ್ನು ಪಡೆಯುವ ಅವಕಾಶವಿದೆ.
1957 ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ – ಪಾದಯಾತ್ರಿಗಳಿಂದ ಭೀಷ್ಮ ಪ್ರತಿಜ್ಞೆ : ಹೆಗ್ಗಡೆಯವರ ಸಂಸದರ ನಿಧಿಯಿಂದ ಬೀದರ್ ನಲ್ಲಿ ಕ್ಷೀರಕ್ರಾಂತಿ

ಉಜಿರೆ: ಹೃದಯ ಪರಿವರ್ತನೆಯಿಂದ ಅದ್ಭುತ ಪ್ರಗತಿ ಸಾಧ್ಯವಾಗುತ್ತದೆ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಅಭಿನಂದಿಸಿ ಮಾತನಾಡಿದರು.

ನಾವು ಎಲ್ಲರಲ್ಲಿಯೂ ಒಳ್ಳೆಯತನವನ್ನು ಕಾಣಬೇಕು. ದೋಷವನ್ನು ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೆ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕಕಲ್ಯಾಣವಾಗುತ್ತದೆ.
ಎಲ್ಲರಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲಾ ಅವಕಾಶಗಳನ್ನು ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿAತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.

ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಸಂಸದರ ನಿಧಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.
ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ: ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.
ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್‌ವರ್ಮ, ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ.ಎಸ್. ಸತೀಶ್ಚಂದ್ರ, ಎಸ್.ಡಿ.ಎಮ್. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಎಮ್. ಜನಾರ್ದನ ಸಿ.ಒ.ಒ. ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡ
ಈಶ್ವರಮಂಗಲ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಬಸ್ಸು ಹರಿದು ಸಾವು – ಅದೇ ಬಸ್ಸಿನಿಂದ ಇಳಿದಿದ್ದರು..!

ಪುತ್ತೂರು : ಈಶ್ವರಮಂಗಲದ ಗಾಳಿಮುಖದಲ್ಲಿ ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 8ರಂದು ಸಂಭವಿಸಿದೆ. ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞಿರಾಮ ಮಣಿಯಾಣಿ ಮೃತಪಟ್ಟವರು.ʼ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಗಾಳಿಮುಖಕ್ಕೆ ಬಂದಿದ್ದ ಅವರು ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಹರಿದಿದೆ. ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಚಾಲಕನ ಮೇಲೆ FIR
ಕೇರಳ ನೋಂದಣಿಯ ಖಾಸಗಿ ಬಸ್ಸಿನ ಚಾಲಕ ಸುಜೀತ್ ವಿ ಎಂಬವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ ರಸ್ತೆ ದಾಟುತ್ತಿದ್ದ ಕುಂಞಿರಾಮ ಮಣಿಯಾಣಿ ಯವರಿಗೆ ಡಿಕ್ಕಿ ಹೊಡೆದಿದ್ದು , ಆಗ ಅವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಅವರ ಮೇಲೆ ಬಸ್ ಚಲಿಸಿರುತ್ತದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಕುಂಞಿರಾಮ ಮಣಿಯಾಣಿರವರು ಮೃತಪಟ್ಟಿರುತ್ತಾರೆ ಎಂದು ಮೃತರ ಚಿಕ್ಕಪ್ಪನ ಮಗ ಕೃಷ್ಣ ಎ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಕಲಂ : 279,304(A) ರಂತೆ ಪ್ರಕರಣ ದಾಖಲಾಗಿದೆ.
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸುಳ್ಯ1 day ago
Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ : ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ, ವ್ಯತ್ಯಯ – ಇಲ್ಲಿದೆ ಮಾಹಿತಿ
-
ಸುಳ್ಯ1 day ago
Kukke Shri Subrahmanya Temple ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ ಪ್ರಸಾದ ವಿತರಣೆ – ಇಲ್ಲಿದೆ ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ ಪ್ರಸಾದದ ಮಹತ್ವ
-
ರಾಜ್ಯ2 days ago
ಭೂತ ಕೋಲ ಹೆಸರಿನಲ್ಲಿ ಟ್ರಾವೆಲ್ ಏಜನ್ಸಿಯಿಂದ ಟೂರ್ ಪ್ಯಾಕೇಜ್ : ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ : ಹಲವರ ವಿರೋಧ – ಕೆಲವರ ಸಮರ್ಥನೆ | ದೈವಾರಾಧನೆ ಟೂರ್ ಪ್ಯಾಕೇಜ್ ಭಾಗವಾಗುವುದು ತಪ್ಪೇ? ಸರಿಯೇ?
-
ವೈರಲ್ ನ್ಯೂಸ್1 day ago
Arjuna Elephant | ಅರ್ಜುನನಿಗೆ ತಪ್ಪಾಗಿ ಗುಂಡೇಟು ಬಿದ್ದದ್ದಲ್ಲ ಕಾದಾಡುವಾಗ ಚೂಪಾದ ಮರದ ತುಂಡು ಚುಚ್ಚಿ ಗಾಯವಾಗಿದ್ದು : ಅರಣ್ಯ ಇಲಾಖೆ ಸ್ಪಷ್ಟನೆ
-
Uncategorized1 day ago
Leelavathi | ಪ್ರಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ – ದಕ್ಷಿಣಕನ್ನಡದ ಕುಗ್ರಾಮದಿಂದ ಹೋಗಿ ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮೆರೆದ ನಟಿ