Mani gang war ವಿಟ್ಲ: ಮಾಣಿ ಜಂಕ್ಷನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಗಲಾಟೆ ನಡೆದ ಬಗ್ಗೆ ವಿಟ್ಲ ಠಾಣೆಯಲ್ಲಿ ಬುಧವಾರ ದೂರು ಪ್ರತಿ ದೂರು ದಾಖಲಾಗಿದೆ.
ಗಲಾಟೆಯ ಬೆನ್ನಲೇ ಬಿಜೆಪಿ ಕಾರ್ಯಕರ್ತ ಮಾಣಿ ಕೊಡಾಜೆ ನಿವಾಸಿ ಮಹೇಂದ್ರ (26)ರವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ. ಅನಂತಾಡಿ ಕರಿಂಕ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ(28) ಅವರು ಪ್ರತಿ ದೂರು ನೀಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ
ಮಹೇಂದ್ರರವರು ನೀಡಿದ ದೂರು ಸ್ವೀಕರಿಸಿರುವ ಪೊಲೀಸರು ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯಾ ಯತ್ನ , ಕೊಲೆ ಬೆದರಿಕೆ ಪ್ರಕರಣಗಳು ಈ ಆರೋಪಿಗಳ ಮೇಲೆ ಹಾಕಲಾಗಿದೆ ಇನ್ನೂ ಪ್ರವೀಣ್ ನೀಡಿದ ದೂರಿನಂತೆ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ , ದೇವಿಪ್ರಸಾದ್, ಹರೀಶ್ ವಿರುದ್ದ ಪ್ರಕರಣ ದಾಖಲಾಗಿದೆ. ಇವರ ವಿರುದ್ದ ಹತ್ಯಾ ಯತ್ನ , ಕೊಲೆ ಬೆದರಿಕೆ ಜತೆಗೆ ಎಸ್ಸಿ/ ಎಸ್ಟಿ ದೌರ್ಜನ್ಯ ಪ್ರಕರಣವನ್ನು ಹಾಕಲಾಗಿದೆ.
ದೂರಿನಲ್ಲಿ ಏನಿದೆ?
ಮಾಣಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಿಂದ ಆಡವಿಟ್ಟ ಚಿನ್ನದ ಸರ ಬಿಡಿಸಿ ಮಹೇಂದ್ರರವರು ಅಕ್ಕನ ಆಕ್ಟೀವಾ ಹೊಂಡಾದಲ್ಲಿ ಪುತ್ತೂರು-ಬಂಟ್ವಾಳ ರಸ್ತೆಯ ಮೂಲಕ ತೆರಳು ಮಾಣಿ ಜಂಕ್ಷನ್ ನಲ್ಲಿರುವ ನಾಗರಾಜ್ ಫೈನಾನ್ಸ್ ಕಛೇರಿಯ ತಲುಪಿದ್ದಾರೆ. ಈ ವೇಳೆ ರಸ್ತೆಯ ಬದಿ ಮಾಣಿ ನಾಗುವಿನ ಸಹಚಾರರೊಬ್ಬರು ತಲವಾರು ಬೀಸಿದ್ದು, ಮಹೇಂದ್ರರವರು ತಪ್ಪಿಸಿಕೊಂಡು ಬುಡೋಳಿ ಕಡೆಗೆ ಹೋಗಿದ್ದಾರೆ. ಈ ವೇಳೆ ಆಕ್ಟೀವಾ ಸ್ಕೂಟರ್ ಗೆ ಹಿಂದಿನಿಂದ ಓಮ್ನಿ ಡಿಕ್ಕಿಹೊಡೆದಿದ್ದು, ಅದರಿಲ್ಲಿದ್ದ ರಾಕೇಶ್, ಮಂಜುನಾಥ್ ವಿಕೇಟ್, ಕ್ರಿಕೇಟ್ ಬ್ಯಾಟ್ ಹಿಡಿದುಕೊಂಡು ಮುಖಕ್ಕೆ,ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಅವರೊಂದಿಗಿದ್ದ ಅನಂತಾಡಿ ಪ್ರವೀಣ್ ಕಬ್ಬಿಣದ ರಾಡ್ ತೆಗೆದು ಹಣೆಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಸಿದು ಬೆದರಿಕೆ ಹಾಕಿ ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಸಂಜೆ ವೇಳೆ ಗಾಯಾಳು ಮಹೇಂದ್ರರವರನ್ನು ಮಂಗಳೂರು ಖಾಸಗೀ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸೇರಿ ವಿವಿಧ ಗಣ್ಯರು ಬೇಟಿ ಮಾಡಿದ್ದಾರೆ.
ಪ್ರತಿ ದೂರು:
ಅನಂತಾಡಿ ಕರಿಂಕ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ(28) ಅವರು ಪ್ರತಿ ದೂರು ನೀಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ , ದೇವಿಪ್ರಸಾದ್, ಹರೀಶ್ ಎಂಬವರು ಅವಾಚ್ಯವಾಗಿ ನಿಂಧಿಸಿ ಜಾತಿ ನಿಂದನೆ ನಡೆಸಿರುವುದಾಗಿ ಪ್ರವೀಣ್ ಆರೋಪಿಸಿದ್ದಾರೆ. ಅದರಂತೆ ಹತ್ಯಾಯತ್ನ ಹಾಗೂ ಜಾತಿ ನಿಂದನೆ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಬ್ಯಾಂಕ್ ರಿಕವರಿ ಕರ್ತವ್ಯ ನಿರ್ವಾಹಿಸಿಕೊಂಡು ಸಂಗ್ರಾಹವಾದ ಹಣದೊಂದಿಗೆ ಮೋಟಾರ್ ಸೈಕಲ್ ನಲ್ಲಿ ಮಾಣಿ ಕಡೆಗೆ ಹೊರಟಿದ್ದೆ. ಪಟ್ಲಕೋಡಿ ಎಂಬಲ್ಲಿ ಆರೋಪಿಗಳು ಸ್ವೀಫ್ಟ್ ಕಾರು, ಪಿಕ್ ಆಪ್ ಹಾಗೂ ಬ್ರಿಜಾ ಕಾರಿನಲ್ಲಿ ನಿಂತುಕೊಂಡಿದ್ದು, ವಾಹನ ಅಡ್ಡವಿಟ್ಟು, ತಡೆದು ಬೈಕ್ ಕೀ ಯನ್ನು ಕಸಿದುಕೊಂಡು ನಿಂದಿಸಿದ್ದಾರೆ. ಅಲ್ಲದೇ ಕಾಲರ್ ಪಟ್ಟಿಯನ್ನು ಹಿಡಿದು ಎಲೆಕ್ಷನ್ ಕೌಂಟಿಂಗ್ ದಿನ ಬಾರಿ ದುರಂಹಕಾರ ತೋರಿಸಿದ್ದಿ ಎಂದು ಬೈದು, ಬೈಕ್ ನಲ್ಲಿದ್ದ 13,000 ರೂಪಾಯಿಗಳಿದ್ದ ಹಣದ ಚೀಲವನ್ನು ತೆಗೆದು, ಕೈ ಹಾಗೂ ರಾಡ್ ನಿಂದ ಹೊಡೆದು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜಕೀಯ ಪಕ್ಷವೊಂದರ ಸಂಚು ವಿಫಲ :
ರಾಜಕೀಯ ಕೆಸರೆರಚಾಟಕ್ಕೂ ಈ ಪ್ರಕರಣ ಸಾಕ್ಷಿಯಾಗಿದ್ದೂ ನಿರ್ದಿಷ್ಟ ರಾಜಕೀಯ ಪಕ್ಷವೊಂದು ಈ ಕೃತ್ಯವನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುವ ಹವಣಿಕೆಗೂ ಮುಂದಾಗಿತ್ತು. ಆರಂಭದಲ್ಲಿ ಹಿಂದೂ ಸಂಘಟನೆಯ ಮುಂದಾಳುಗಳ ಮೇಲೆ ತಲ್ವಾರು ನಡೆದಿದೆ ಎಂದು ಬಿಂಬಿಸುವ ಯತ್ನ ನಡೆಯಿತಾದರೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅದು ತಲ್ವಾರು ದಾಳಿಯಲ್ಲ, ಕೋಲಿನಿಂದ ನಡೆದ ಹಲ್ಲೆ ಎಂದು ತಕ್ಷಣ ಸ್ಪಷ್ಟನೆ ನೀಡಿದರು. ಇದರಿಂದಾಗಿ ಪಕ್ಷವೊಂದು ಈ ಘಟನೆಯನ್ನು ಕೋಮು ದ್ರುವಿಕರಣಕ್ಕೆ ಬಳಸಲು ಮಾಡಿದ ಸಂಚು ವಿಫಲವಾಯಿತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.