Bird Hits Flight At Mangaluru International Airport ಮಂಗಳೂರು: ಟೇಕಾಫ್ ಆಗಲು ಸಜ್ಜಾಗಿದ್ದ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಟೇಕಾಫ್ ಕ್ಯಾನ್ಸಲ್ ಆದ ಘಟನೆ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಇಂಡಿಗೊ ವಿಮಾನದ ರೆಕ್ಕೆಗೆ ಟೇಕಾಫ್ ವೇಳೆ ಹಕ್ಕಿ ಡಿಕ್ಕಿ ಹೊಡೆದಿದ್ದು, ಸುದೈವವಶಾತ್ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದೆ.ಬೆಳಿಗ್ಗೆ 8.30ಕ್ಕೆ ವಿಮಾನವು ಟ್ಯಾಕ್ಸಿ ವೇ ದಾಟಿ ರನ್ವೇನಲ್ಲಿ ಸಾಗುತ್ತಿತ್ತು.ಈ ಸಂದರ್ಭದಲ್ಲಿ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆಯಿತು.
ವಿಮಾನದ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದರು. ರನ್ವೇಯಿಂದ ವಿಮಾನ ಹಾರದೆ, ವಾಪಸ್ ಬಂತು. ಪ್ರಯಾಣಿಕರನ್ನು ಇಳಿಸಿ, ತಪಾಸಣೆ ಮಾಡಲಾಯಿತು. ಬೆಳಿಗ್ಗೆ 11.05ಕ್ಕೆ ಸಂಸ್ಥೆಯೂ ಇನ್ನೊಂದು ವಿಮಾನದ ವ್ಯವಸ್ಥೆ ಮಾಡಿ ಬೆಂಗಳೂರಿನಿಂದ ಆಗಮಿಸಿದ ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕಳುಹಿಸಿಕೊಟ್ಟಿತು.