ದಕ್ಷಿಣ ಕನ್ನಡ
ಪುತ್ತೂರು ಮೆಡಿಕಲ್ ಕಾಲೇಜು : ಮುಂದಿನ 50 ವರ್ಷದ ದೂರಗಾಮಿ ಚಿಂತನೆಯಡಿ ಬೇಕಾದ ಪೂರ್ವ ತಯಾರಿಗಳನ್ನು ಬಿಜೆಪಿ ಶಾಸಕರು ಹಾಗೂ ಜನಪ್ರತಿನಿಧಿಗಳು ಮಾಡಿದ್ದಾರೆ : ಆರ್ ಸಿ ನಾರಾಯಣ್
ಪುತ್ತೂರು: Puttur ಮಾ 30 : ಪುತ್ತೂರು ಮೆಡಿಕಲ್ ಕಾಲೇಜು ವಿಚಾರದಲ್ಲಿ ಬೇಕಾದ ಪೂರ್ವ ತಯಾರಿಗಳನ್ನು ಬಿಜೆಪಿ ಶಾಸಕರು ಹಾಗೂ ಜನಪ್ರತಿನಿಧಿಗಳು ಮಾಡಿದ್ದಾರೆ. ಪುತ್ತೂರಿನ 100 ಹಾಸಿಗೆಯ ಸರ್ಕಾರಿ ಅಸ್ಪತ್ರೆ 5.4 ಎಕ್ರೆ ವಿಸ್ತೀರ್ಣವನ್ನು ಹೊಂದಿದೆ. ಮುಂದಿನ 50 ವರ್ಷಗಳಲ್ಲಿ ಪುತ್ತೂರಿನ ಅಭಿವೃದ್ಧಿಯ ಕಲ್ಪನೆಯನ್ನು ಇಟ್ಟುಕೊಂಡು ಕೆಲಸ ಕಾರ್ಯ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಆರ್. ಸಿ. ನಾರಾಯಣ ಹೇಳಿದರು.
ಜಾಗದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೋಂದಣಿ ಕಛೇರಿ, ಸಬ್ ಜೈಲು, ಲೋಕೋಪಯೋಗಿ ಇಲಾಖೆಯ ಜಾಗಗಳನ್ನು ಸರ್ಕಾರಿ ಆಸ್ಪತ್ರೆಗೆ ಮೀಸಲಿಡುವ ಕೆಲಸವನ್ನು ಶಾಸಕರು ಕಂದಾಯ ಇಲಾಖೆಯ ಮೂಲಕ ಮಾಡಿಸಿದ್ದಾರೆ. ಸೇಡಿಯಾಪಿನ 40 ಎಕ್ರೆ ಜಾಗದಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂಬುದು ಪುತ್ತೂರಿನ ಎಲ್ಲರ ಆಸೆಯಾಗಿದ್ದು, ಅದರ ದೂರಗಾಮಿ ಆಲೋಚನೆಯನ್ನು ಬಿಜೆಪಿ ಇಟ್ಟುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಐಐಟಿ ನೀಡುವುದಾದರೆ ಪುತ್ತೂರಿಗೆ ನೀಡಬೇಕೆಂದು ಬುಧವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಸುಳ್ಯ, ಬೆಳ್ತಂಗಡಿ ಸೇರಿ ಕೇರಳದ ಭಾಗದಿಂದಲೂ ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದು, ದಿನಕ್ಕೆ 400ರಿಂದ 450 ಹೊರರೋಗಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ. 140 ರಷ್ಟು ಹೆರಿಗೆ, 120ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳು ತಿಂಗಳಿಗೆ ನಡೆಯುತ್ತಿದೆ. ಆರೋಗ್ಯ ಸಂಧಿಸಿದ ಚಿಕಿತ್ಸೆ ಹಾಗೂ ವ್ಯವಸ್ಥೆಯಲ್ಲಿ ಎಲ್ಲವೂ ಪರಿಪೂರ್ಣ ರೀತಿಯಿಂದ ಪುತ್ತೂರಿನಲ್ಲಿ ನಡೆಯುತ್ತಿದೆ. ಜಿಲ್ಲಾ ಕೇಂದ್ರದ ಹೊರತಾಗಿಯೂ ಉತ್ತಮ ಚಿಕಿತ್ಸೆ ಪುತ್ತೂರಿನಲ್ಲಿ ಲಭಿಸುತ್ತಿದೆ. ವಿಟ್ಲ, ಉಪ್ಪಿನಂಗಡಿ, ಪಾಣಾಜೆ ಆಸ್ಪತ್ರೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಜೋಡಿಸುವ ಕೆಲಸ ಸರ್ಕಾರ ಮಾಡಿದೆ ಎಂದರು.
ಪುತ್ತೂರಿನ ಪಾಣಾಜೆ, ಬೆಳ್ತಂಗಡಿಯ ವೇಣೂರು, ಬಂಟ್ವಾಳದ ಪುಂಜಾಲುಕಟ್ಟೆ ಭಾಗಕ್ಕೆ 3 ಸಮುದಾಯ ಆರೋಗ್ಯ ಕೇಂದ್ರಗಳನ್ನು ನೀಡಲಾಗಿದೆ. ಕೋವಿಡ್ ಸಮಯ ಆಮ್ಲಜನಕದ ಸಮಸ್ಯೆಯಾಗಬಾರದೆಂದು ವಿಟ್ಲ, ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಯನ್ನು ಮಾಡಲಾಗಿದೆ. ವಿವಿಧ ಆರೋಗ್ಯ ಕೇಂದ್ರಗಳ ಸುರಸ್ಥಿ ಹಾಗೂ ನೂತನ ಕಟ್ಟಡಗಳಿಗೆ ಅನುದಾನವನ್ನು ನೀಡುವ ಕಾರ್ಯ ನಡೆದಿದೆ. ಪುತ್ತೂರಿನ ಆಸ್ಪತ್ರೆಯಲ್ಲಿ 60 ಲಕ್ಷ ವೆಚ್ಚದಲ್ಲಿ ವಿವಿಧ ಹೊಸ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. 12 ಡಯಾಲಿಸಿಸ್ ವ್ಯವಸ್ಥೆಯನ್ನು ಪುತ್ತೂರು ಆಸ್ಪತ್ರೆಯಲ್ಲಿ ಜನರ ಸೇವೆಗೆ ನೀಡಲಾಗಿದೆ ಎಂದರು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ನಗರ ಮಂಡಲ ಪಿ.ಜಿ. ಜಗನ್ನಿವಾಸ್ ರಾವ್, ಪ್ರಮುಖರಾದ ರಾಜೇಶ್ ಬನ್ನೂರು, ಚಂದ್ರಶೇಖರ ಬಪ್ಪಳಿಗೆ ಉಪಸ್ಥಿತರಿದ್ದರು.
ಪುತ್ತೂರು
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಎ.17ರಂದು ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಜೀಪು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದೆ.
ಬೈಕ್ ಸವಾರ ಮುಂಡೂರು ಗ್ರಾಮದ ಕಡ್ಯ ನಿವಾಸಿ, ದಿ.ಬಾಳಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಗೌಡ(46.ವ) ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೋಕೇಶ್ ಅವರ ಜೊತೆ ಬೈಕ್ನಲ್ಲಿದ್ದ ಅವರ ಮಕ್ಕಳಾದ ದೀಪ್ತಿ(8.ವ) ಹಾಗೂ ಗಗನ್ (4.ವ) ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಔಷಧಿಗೆ ಬಂದಿದ್ದರು: ಲೋಕೇಶ್ ಅವರು ತಮ್ಮ ಮಕ್ಕಳಿಗೆ ಔಷಧಿಗೆಂದು ಪುರುಷರಕಟ್ಟೆಗೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಗೌಡ ಅವರು ಪತ್ನಿ ಮಾಲತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಅಪಘಾತ ನಡೆದ ವೇಳೆ ಘಟನಾ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದುದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
ಜೀಪು ತೆಗೆಯಲು ವಿರೋಧ: ಲಾಠಿ ಪ್ರಹಾರ: ಅಪಘಾತದ ಬಳಿಕ ರಸ್ತೆ ಬದಿಯ ಕಣಿಯಲ್ಲಿದ್ದ ಜೀಪನ್ನು ಅಲ್ಪ ಸಮಯದ ಬಳಿಕ ಚಾಲಕನ ಕಡೆಯವರು ಸ್ಥಳದಿಂದ ತೆರವು ಮಾಡಲು ಪ್ರಯತ್ನಿಸಿದಾಗ ಸ್ಥಳದಲ್ಲಿದ್ದ ಯುವಕರು ಜೀಪು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಸ್ಥಳದಿಂದ ಚದುರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಜೀಪು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಬವಿಸಿ ಸಾವನ್ನಪ್ಪಿದ್ದು ಜೀಪು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.
ರಾಂಗ್ ಸೈಡಲ್ಲಿ ಜೀಪು ಬಂದದ್ದೇ ಘಟನೆಗೆ ಕಾರಣ..? ಜೀಪು ಸವಾರ ಜೀಪನ್ನು ರಾಂಗ್ ಸೈಡಲ್ಲಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬಂದಿದೆ. ಜೀಪಿನಲ್ಲಿ ಐದು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಬೈಕ್ನ್ನು ಎಳೆದೊಯ್ದ ಜೀಪ್..!
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್ಗೆ ಜೀಪು ಗುದ್ದಿ 150 ಮೀ. ದೂರ ಬೈಕ್ನ್ನು ಜೀಪ್ ಎಳೆದುಕೊಂಡು ಹೋಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬೈಕ್ ಜೀಪಿನ ಅಡಿಯಲ್ಲಿ ಅಪ್ಪಚ್ಚಿಯಾಗಿತ್ತು.
ಗೃಹ ಪ್ರವೇಶದ ಸಂತಸದಲ್ಲಿದ್ದ ಮೃತ ಲೋಕೇಶ್ :
ಮೃತ ಲೋಕೇಶ್ ಅವರ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ಸಮಯದಲ್ಲಿ ಗೃಹ ಪ್ರವೇಶ ಮಾಡುವ ಸಂತಸದಲ್ಲಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪುತ್ತೂರು
Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ (Puttur Jathre) ಎ.10ರಿಂದ ಪ್ರಾರಂಭವಾಗಿದ್ದು, ಎ.17ರಂದು ಮಧ್ಯಾಹ್ನ ದರ್ಶನ ಬಲಿ ರಾತ್ರಿ ಬ್ರಹ್ಮಕಲಶೋತ್ಸವ ಹಾಗೂ ಪುತ್ತೂರು ಬೆಡಿ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.
ಇದೀಗ ಶ್ರೀದೇವರ ವಿಶೇಷ ದರ್ಶನ ಬಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಭಕ್ತ ಸಾಗರ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ ನಡೆಯಲಿದೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಂದೋಬಸ್ತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಪ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ.ಡಿವೈಎಸ್ಪಿ ಅರುಣ್ ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.
ಎ.17ರಂದು ಬೆಳಿಗ್ಗೆ, ಶ್ರೀ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ವರ್ಷ ಸುಮಾರು ರೂ.8.5 ಲಕ್ಷ ವೆಚ್ಚದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ. ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸಿಡಿಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದಾರೆ.
ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್: ಜಾತ್ರಾ ಗದ್ದೆಯಲ್ಲಿ ಹಲವು ಕಡೆ ಸಿಸಿ ಕ್ಯಾಮರ ಆಳವಡಿಸಲಾಗಿದೆ.ದೇವಳದ ರಥ ಮಂದಿರದ ಬಳಿ ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ.ಶೇಟ್ ಇಲೆಕ್ಟೋನಿಕ್ಸ್ ಸಂಸ್ಥೆ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಲಿದ್ದಾರೆ. ಪೊಲೀಸರ ಜೊತೆ ಸಿಸಿ ಕ್ಯಾಮರಾ ಕಣ್ಣಾವಲು ಕಾರ್ಯ ಮಾಡುತ್ತಿದೆ.
ದಕ್ಷಿಣ ಕನ್ನಡ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸಿದ ಬಲ್ನಾಡು ಉಳ್ಳಾಳ್ತಿ ದೈವಗಳ ಕಿರುವಾಳು – ಶ್ರೀ ದೇವರ ತೆಪ್ಪೋತ್ಸವ
Photo : ಕೃಷ್ಣಾ ಸ್ಟುಡಿಯೋ
ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು.
ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು.
ಭಂಡಾರದ ಸ್ಥಾನದಲ್ಲಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ಬೆಳಗ್ಗಿನಿಂದಲೇ ಭಕ್ತರಿಗೆ ದೈವಗಳ ಭಂಡಾರದ ಸ್ಥಾನದಲ್ಲಿ ಮಲ್ಲಿಗೆ ಸಮರ್ಪಣೆಗೆ ಅವಕಾಶ ನೀಡಲಾಯಿತು.
ಸಂಜೆ ಗಂಟೆ 6ಕ್ಕೆ ಬಲ್ನಾಡು ದೈವಸ್ಥಾನದಿಂದ ಹೊರಟ ದೈವಗಳ ಕಿರುವಾಳು ಭಂಡಾರ ರಾತ್ರಿ ಸುಮಾರು 9.28ಕ್ಕೆ ಬಪ್ಪಳಿಗೆ ತಲುಪಿತ್ತು 10.15ಕ್ಕೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 10.46ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು ಬಳಿಕ ಪೂರ್ವ ಶಿಷ್ಟ ಪರೆಂಪರೆಯಂತೆ ಶ್ರೀ ದೇವರ ತೆಪ್ಪೋತ್ಸವ ದೇವಳದ ಕೆರೆಯಲ್ಲಿ ನಡೆಯಿತು.