ವದೆಹಲಿ, ಮಾ29 : ಕರ್ನಾಟಕ ರಾಜ್ಯ ವಿಧಾನ ಸಭೆಯ ಚುನಾವಣೆ 2023 ಇದರ ದಿನಾಂಕ ಘೋಷಣೆ ಯಾಗಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರತಿಕಾಘೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ದಿನಾಂಕ ಘೋಷಣೆ ಮಾಡಿದರು.
ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಮಾ 9 ರಂದು ಎಲ್ಲಾ ಪಕ್ಷಗಳೊಡನೆ ಚುನಾವಣಾ ಆಯೋಗವು ಸಭೆ ನಡೆಸಿತ್ತು. ಚುನಾವಣೆಯ ಬಗ್ಗೆ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಆಲಿಸಿತ್ತು. ಬಳಿಕ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಭೆ ನಡೆಸಿದ್ದರು. ವಿಧಾನಸಭೆ 18 ರ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಅದಕ್ಕೂ ಮೊದಲು ಚುನಾವಣೆ ನಡೆದು ಸರ್ಕಾರ ರಚನೆ ನಡೆಯಬೇಕಿದೆ.
ಕರ್ನಾಟಕದಲ್ಲಿ 5 ಕೋಟಿ 31 ಲಕ್ಷ ಮತದಾರರಿದ್ದು, ಇದರಲ್ಲಿ 2 ಕೋಟಿ 59 ಲಕ್ಷ ಮಹಿಳಾ ಮತದಾರರು. 12.14 ಲಕ್ಷ ಮತದಾರರು 80ಕ್ಕಿಂತ ಹೆಚ್ಚು ವರ್ಷದವರಿದ್ದಾರೆ. 15 ಸಾವಿರಕ್ಕೂ ಅಧಿಕ ಮಂದಿ 100 ವರ್ಷ ದಾಟಿದವರಿದ್ದಾರೆ. ಹಿರಿಯ ನಾಗರಿಕರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪರಿಚಯಿಸಲಾಗುತ್ತಿದೆ

ರಾಜ್ಯ ಚುನಾವಣೆಯ ವೇಳಾಪಟ್ಟಿ
*ಮಾರ್ಚ್ 29 ರಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ
*ಏಪ್ರಿಲ್ 13 – ಚುನಾವಣಾ ಅಧಿಸೂಚನೆ ಪ್ರಕಟ
*ಏಪ್ರಿಲ್ 20 – ನಾಮಪತ್ರ ಸಲ್ಲಿಸಲು ಕೊನೆಯ ದಿನ
*ಏಪ್ರಿಲ್ 21 – ನಾಮಪತ್ರಗಳ ಪರಿಶೀಲನೆ
*ಏಪ್ರಿಲ್ 24 – ನಾಮಪತ್ರ ಹಿಂಪಡೆಯಲು ಕೊನೆಯ ದಿನ
*ಮೇ – 10 ಮತದಾನ
*ಮೇ -13 ಮತ ಎಣಿಕೆ
ನೀತಿ ಸಂಹಿತೆ ನಿಯಮಗಳು
*ಹೊಸ ಯೋಜನೆಗಳು ಜಾರಿ ಮಾಡುವಂತಿಲ್ಲ.
*ಯಾವುದೇ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ.
*ಸರ್ಕಾರಿ ಸವಲತ್ತುಗಳನ್ನು ಉಪಯೋಗಿಸುವಂತಿಲ್ಲ.
*ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುಂತಿಲ್ಲ.(ಅನಿವಾರ್ಯ, ತುರ್ತು ಸಂದರ್ಭ ಹೊರತು ಪಡಿಸಿ)
- ಸಭೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ (ಸಮಯಾವಕಾಶ ಬೆ 6 ರಿಂದ ರಾತ್ರಿ 10 ವರೆಗೆ)
*ಟೆಂಡರ್ ಪ್ರಕ್ರಿಯೆ ನಡೆಸುವಂತಿಲ್ಲ.