Connect with us

ರಾಜಕೀಯ

ಬಳ್ಳಾರಿ ಪಾಲಿಕೆ ಕಾಂಗ್ರೇಸ್ ವಶಕ್ಕೆ : ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ ಪಾತ್ರರಾದ 23 ವರ್ಷದ ತ್ರಿವೇಣಿ

Ad Widget

Ad Widget

Ad Widget

Ad Widget Ad Widget

ಬಳ್ಳಾರಿ, ಮಾ.29: ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್​ ಆಗಿ ಕಾಂಗ್ರೆಸ್​ನ ಡಿ. ತ್ರಿವೇಣಿ ಆಯ್ಕೆಯಾದರು. ರಾಜ್ಯದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆಗೆ 23 ವರ್ಷದ ತ್ರಿವೇಣಿ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಉಪ ಮೇಯರ್ ಆಗಿ ಕಾಂಗ್ರೆಸ್​ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದರು. 

Ad Widget

Ad Widget

ಮೇಯರ್​ ಆಯ್ಕೆಗಾಗಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ತ್ರಿವೇಣಿಗೆ 28 ಮತಗಳು ಬಿದ್ದರೆ,‌ ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಚಲಾವಣೆಯಾಗಿವೆ. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಬಿ.ಜಾನಕಿ ಅವರ ಆಯ್ಕೆ‌ ಅವಿರೋಧವಾಯಿತು.

Ad Widget

Ad Widget

ನಾಲ್ಕನೇ ವಾರ್ಡ್ ನಿಂದ ಪಾಲಿಕೆ ಸದಸ್ಯೆಯಾಗಿ ತ್ರಿವೇಣಿ ಆಯ್ಕೆಯಾಗಿದ್ದರೆ, 33 ನೇ ವಾರ್ಡಿನಿಂದ ಬಿ.ಜಾನಕಿ ಆಯ್ಕೆಯಾಗಿದ್ದಾರೆ. 

Ad Widget

Ad Widget

ಪಾಲಿಕೆಯ ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ. ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ‌ ಹಕ್ಕಿದೆ.

ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ನಿಗದಿಯಾಗಿತ್ತು.

ಬಳ್ಳಾರಿ ಮಹಾನಗರ ನಗರದ ಮೇಯರ್ ಉಪಮೇಯರ್ ಚುನಾವಣೆಗೆ ಕೆಪಿಸಿಸಿ ವಿಪಕ್ಷ ಉಪನಾಯಕ ಯು.ಟಿ ಖಾದರ್, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್ ಅವರನ್ನು ವೀಕ್ಷಕರಾಗಿ ನೇಮಕಗೊಳಿಸಿದ್ದರು.

Click to comment

Leave a Reply

ಅಂತರ ರಾಜ್ಯ

Ajit Pawar’s wife-25 ಸಾವಿರ ಕೋಟಿ ಅವ್ಯವಹಾರ : ಅಜಿತ್ ಪವಾರ್ ಪತ್ನಿಗೆ ಕ್ಲೀನ್ ಚಿಟ್

Ad Widget

Ad Widget

Ad Widget

Ad Widget Ad Widget

ಮುಂಬಯಿ: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ (ಎಂಎಸಿಬಿ) ನಡೆದಿರುವ 25 ಸಾವಿರ ಕೋಟಿ ರೂ. ಮೊತ್ತದ ಅವ್ಯವಹಾರ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರನ್ನು ಮುಂಬಯಿ ಪೊಲೀಸರು ದೋಷಮುಕ್ತಗೊಳಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಬಾರಾಮತಿ ಲೋಕಸಭೆ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಸುನೇತ್ರಾ ಅವರಿಗೆ ಪೊಲೀಸರಿಂದ ಕ್ಲೀನ್‌ ಚಿಟ್ ಸಿಕ್ಕಿರುವುದು ಚುನಾವಣೆ ಹೊತ್ತಲ್ಲಿ ರಿಲೀಫ್ ತಂದಿದೆ.

Ad Widget

Ad Widget

25 ಸಾವಿರ ಕೋಟಿ ರೂ. ಅವ್ಯವಹಾರದ ಪ್ರಕರಣದ ತನಿಖೆ ಕೈಗೊಂಡಿದ್ದ ಮುಂಬಯಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು ಪ್ರಕರಣವನ್ನು ಮುಕ್ತಾಯಗೊಳಿಸಿ ಕಳೆದ ಜನವರಿಯಲ್ಲಿ ವರದಿ ಸಲ್ಲಿಸಿತ್ತು.

Ad Widget

Ad Widget

‘ಅಜಿತ್ ಪವಾರ್ ಅವರ ನಂಟು ಹೊಂದಿರುವ ಜರಂಡೇಶ್ವರ ಸಕ್ಕರೆ ಕಾರ್ಖಾನೆಗೆ ಸಾಲ ಅಥವಾ ಮಾರಾಟಕ್ಕೆ ಅನುಮತಿ ನೀಡಿದ ಪ್ರಕ್ರಿಯೆಯಲ್ಲಿ ಎಂಎಸ್‌ಬಿ ಬ್ಯಾಂಕಿಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಹಣಕಾಸು ವ್ಯವಹಾರದಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ನಡೆದಿಲ್ಲ, ” ಎಂದು ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು ತನ್ನ ವರದಿಯಲ್ಲಿ ತಿಳಿಸಿದೆ.

Ad Widget

Ad Widget
Continue Reading

ಅಂತರ ರಾಜ್ಯ

BJP leader-ನರೇಂದ್ರ ಮೋದಿ ಮುಸ್ಲಿಂಮರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ಮುಖಂಡ ಪಕ್ಷದಿಂದ ವಜಾ

Ad Widget

Ad Widget

Ad Widget

Ad Widget Ad Widget

ಜೈಪುರ: ಇತ್ತೀಚೆಗೆ ರಾಜಸ್ಥಾನದ ಚುನಾವಣಾ Rallyಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಮುಸ್ಲಿಮರನ್ನು ನುಸುಳುಕೋರರಿಗೆ ಹೋಲಿಸಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಉಸ್ಮಾನ್ ಘನಿ ಅವರನ್ನು ಬುಧವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.

Ad Widget

Ad Widget

Ad Widget

Ad Widget

Ad Widget

ಇತ್ತೀಚೆಗೆ ಘನಿ ಅವರು ದಿಲ್ಲಿಯಲ್ಲಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಆಗ ಅವರು, “ರಾಜಸ್ಥಾನದಲ್ಲಿ ಬಿಜೆಪಿಯು ಮೂರಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಲಿದೆ,” ಎಂದಿದ್ದರು. ಅಲ್ಲದೇ ಮುಸ್ಲಿಮರ ಕುರಿತು ಪ್ರಧಾನಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದರು.

Ad Widget

Ad Widget
Continue Reading

ರಾಜಕೀಯ

Priyanka Gandhi-ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನೆ ತ್ಯಾಗ ಮಾಡಿದ್ದಾರೆ, ಅಜ್ಜಿ ಯುದ್ದ ಕಾಲದಲ್ಲಿ ತನ್ನ ಚಿನ್ನವನ್ನೆ ದೇಶಕ್ಕೆ ನೀಡಿದ್ದಾರೆ : 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಯಾವತ್ತೂ ಮಹಿಳೆಯರ ಮಂಗಳಸೂತ್ರ ಕೀಳುವ ಕೆಲಸ ಮಾಡಿಲ್ಲ : ಪ್ರಿಯಾಂಕಾ ಗಾಂಧಿ

Ad Widget

Ad Widget

Ad Widget

Ad Widget Ad Widget

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಕ್ರಿಕೆಟ್ ಮೈದಾನದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಮತಯಾಚನೆ ಮಾಡಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ʻಮಂಗಳಸೂತ್ರದ ಮಹತ್ವದ ಬಗ್ಗೆ ಅರಿವಿಲ್ಲದವರು ಅಸಂಬದ್ಧವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಾರೆ. 60ಕ್ಕೂ ಹೆಚ್ಚಿನ ವರ್ಷ ದೇಶವನ್ನಾಳಿದ ಕಾಂಗ್ರೆಸ್ ಯಾವತ್ತೂ ಮಹಿಳೆಯರ ಮಂಗಳಸೂತ್ರ ಕೀಳುವ ಕೆಲಸ ಮಾಡಿಲ್ಲ’ ಎಂದರು.
ಈ ದೇಶಕ್ಕಾಗಿ ನನ್ನ ತಾಯಿ ತಮ್ಮ ಮಂಗಳಸೂತ್ರವನ್ನೇ ತ್ಯಾಗ ಮಾಡಿದವರು. ನನ್ನ ಅಜ್ಜಿ ಇಂದಿರಾಗಾಂಧಿ ಅವರು ಯುದ್ಧದ ಸಂದರ್ಭದಲ್ಲಿ ತಮ್ಮ ಚಿನ್ನವನ್ನೆಲ್ಲ ದೇಶಕ್ಕೆ ನೀಡಿದವರು. ಮಹಿಳೆಯರ ಸೇವೆ, ಸಂಘರ್ಷಗಳ ಬಗ್ಗೆ ಅರಿವಿಲ್ಲದ ನರೇಂದ್ರ ಮೋದಿ ಅವರು ಮಂಗಳಸೂತ್ರದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಅವರು ಮಹಿಳೆಯರ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದರು.

Ad Widget

Ad Widget

Ad Widget

Ad Widget

Ad Widget

ಚುನಾವಣೆಗಾಗಿ ಮೋದಿಗೆ ಮಂಗಳಸೂತ್ರ ನೆನಪಾಗಿದೆ
ನಮ್ಮ ದೇಶದ ಪರಂಪರೆಯು ಮಹಿಳೆಯರ ಸೇವೆ, ಸಂಘರ್ಷದ ಮೇಲೆ ನಿಂತಿದೆ. ನೋಟ್ ಬ್ಯಾನ್ ಮಾಡಿದಾಗ ಮಹಿಳೆಯರು ಕೂಡಿಟ್ಟಿದ್ದ ಹಣವನ್ನೆಲ್ಲ ಕಿತ್ತುಕೊಳ್ಳುವಾಗ ನರೇಂದ್ರ ಮೋದಿ ಅವರಿಗೆ ಮಂಗಳಸೂತ್ರದ ನೆನಪಾಗಲಿಲ್ಲ. ಲಾಕ್ ಡೌನ್ ಮಾಡಿ ಕಾರ್ಮಿಕರು ಮತ್ತು ಕುಟುಂಬ ಬರಿಗಾಲಲ್ಲಿ ತಮ್ಮ ಊರಿಗೆ ಸಾಗುವಾಗ ಮಂಗಳಸೂತ್ರದ ನೆನಪಾಗಲಿಲ್ಲ. ಕೃಷಿಕರು ಆಂದೋಲನ ಮಾಡಿದಾಗ 600ಕ್ಕೂ ಹೆಚ್ಚಿನ ಕೃಷಿಕರು ಸಾವನ್ನಪ್ಪಿದರು. ಅವರ ಪತ್ನಿಯರ ಮಂಗಳಸೂತ್ರದ ಬಗ್ಗೆ ಯೋಚಿಸಲಿಲ್ಲ. ಮಣಿಪುರದಲ್ಲಿ ಯೋಧನ ಪತ್ನಿಯನ್ನು ವಿವಸ್ತ್ರಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡುವಾಗ ನರೇಂದ್ರ ಮೋದಿ ಅವರಿಗೆ ಆಕೆಯ ಮಂಗಳಸೂತ್ರದ ಬಗ್ಗೆ ಯೋಚನೆ ಬರಲಿಲ್ಲ. ಆದರೀಗ, ಚುನಾವಣೆಗಾಗಿ ಮಂಗಳಸೂತ್ರದ ನೆನಪಾಗಿದೆ.- ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಾಯಕಿ

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading