Connect with us

ರಾಜ್ಯ

Madalu Veerupakshappa | ಲಂಚ ಪ್ರಕರಣ 7 ಕೋಟಿ ಹಣ ಪತ್ತೆ – ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಂಧನ – ಜಾಮೀನು ನಿರಾಕರಣೆ ಆಗುತಿದ್ದಂತೆ ಟೋಲ್ ನಲ್ಲಿ ಬಂಧಿಸಿದ ಲೋಕಾಯುಕ್ತ

Ad Widget

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದ ಆರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madalu Veerupakshappa) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸೋಮವಾರ ವಜಾಗೊಳಿಸಿದ್ದು, ಇದೀಗ ಶಾಸಕರನ್ನು ಲೋಕಾಯುಕ್ತ ಪೊಲೀಸರು ಕ್ಯಾತ ಸಂದ್ರ ಟೋಲ್ ಪ್ಲಾಟಾದ್ಲಲಿ ಶಾಸಕರನ್ನು ತಡೆದು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕೈಗಾರಿಕೆಗಳ ನಿಗಮ ( ಕೆಎಸ್‌ಡಿಎಲ್‌) ಗುತ್ತಿಗೆ ಕಾರ್ಯದ ಅನುಮತಿ ನೀಡುವ ಸಂದರ್ಭದಲ್ಲಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯಾಗಿ ಮಾಡಲಾಗಿತ್ತು. ಬಂಧನ ಭೀತಿಯಿಂದ ಶಾಸಕರು ಜಾಮೀನಿಗೆ ಅರ್ಜಿ ಸಲ್ಲಿಸಿ ಅಲ್ಲಿಯವರೆಗೂ ತಲೆ ಮರೆಸಿಕೊಂಡಿದ್ದರು. ಆನಂತರ ಮಾರ್ಚ್ 7 ರಂದು ಹೈಕೋರ್ಟ್ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.

Ad Widget

Ad Widget

ಸದ್ಯ ಹೈಕೋರ್ಟ್ ವಿಚಾರಣೆಯ ವೇಳೆ ಲೋಕಾಯುಕ್ತ ಪರ ವಕೀಲರು ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಏಕ ಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹಾಗಾಗಿ ಮಾಡಾಳ್ ವಿರೂಪಾಕ್ಷಪ್ಪ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

ಮಾರ್ಚ್‌ 2 ರಂದು ಲೋಕಾಯುಕ್ತ ಅಧಿಕಾರಿಗಳು ಮಾಡಾಳ್‌ ಮಗನ ಕಚೇರಿ, ಮನೆ ಮೇಲೆ ದಾಳಿ ನಡೆಸಿದ್ದರು. ಆನಂತರ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ಮಾಡಾಳ್‌ ಗ್ರಾಮದಲ್ಲಿನ ಶಾಸಕರ ಮನೆಯನ್ನು ಪರಿಶೀಲನೆ ನಡೆಸಿದ್ದರು. ಲೋಕಾಯುಕ್ತ ದಾಳಿ ಮಾಹಿತಿ ಸಿಕ್ಕ ಕೂಡಲೇ ಶಾಸಕ ಮಾಡಾಳ್‌ ತಲೆ ಮರೆಸಿಕೊಂಡಿದ್ದರು. ಆರು ದಿನಗಳ ಬಳಿಕ ಮಾ.7 ರಂದು ಅವರಿಗೆ ಜಾಮೀನು ಸಿಕ್ಕ ನಂತರ ಕಾಣಿಸಿಕೊಂಡಿದ್ದರು. ಸದ್ಯ ಜಾಮೀನು ಅರ್ಜಿ ವಜಾ ಆಗಿರುವುದರಿಂದ ಮಾಡಾಳ್‌ ವಿರೂಪಾಕ್ಷ ಅವರು ಮತ್ತೆ ತಲೆಮರೆಸಿಕೊಳ್ಳುವ ಸಾಧ್ಯತೆಯೂ ಇತ್ತು.

Ad Widget

Ad Widget

ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ರವರು ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರ ತಂದೆಯ ಬಂಧನವಾದರೆ ಅವರಿಗೆ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

ಎಂಟು ಕೋಟಿಗೂ ಅಧಿಕ ಹಣ ಪತ್ತೆಯಾಗಿತ್ತು..!
ಮಾಡಾಳ್ ಪುತ್ರ ಪ್ರಶಾಂತ್ ಬೆಂಗಳೂರು ಜಲಪೂರೈಕೆ ಮತ್ತು ಒಳಚರಂಡಿ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎಂಬ ಆರೋಪ ಇದೆ.

ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆಗಟ್ಟಲೆ 7 ಕೋಟಿ ರೂಪಾಯಿಗೂ ಹೆಚ್ಚು ಹಣ ಪತ್ತೆ ಆಗಿದ್ದವು. ಅಂತೆಯೇ ಬೆಂಗಳೂರಿನ ಸಂಜಯ್‌ ನಗರ ಮನೆಯಲ್ಲಿಯೂ ಕೋಟ್ಯಾಂತರ ರೂಪಾಯಿ ಸಿಕ್ಕಿತ್ತು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Click to comment

Leave a Reply

ರಾಜ್ಯ

Big Breaking : ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ NIA

Ad Widget

ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ (Rameshwaram Cafe Blast Case) ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ ಅವರನ್ನು ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷಿಯನ್ನಾಗಿ ಪರಿಗಣಿಸಿದೆ.

Ad Widget

Ad Widget

Ad Widget

Ad Widget

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್‌ಗೆ ಸಾಯಿ ಪ್ರಸಾದ್‌ ಮೊಬೈಲ್‌ ಮಾರಾಟ ಮಾಡಿದ್ದರು. ಮುಜಾಮಿಲ್ ಷರೀಫ್ ಪ್ರಕರಣದ ಮತ್ತೊಬ್ಬ ಆರೋಪಿ ಮುಸಾವೀರ್‌ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಮುಸಾವೀರ್ ಬಳಸಿದ್ದು ಇದೇ ಮೊಬೈಲ್ ಎಂಬ ಅನುಮಾನದ ಮೇಲೆ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಮಾರಾಟ ಮಾಡುತ್ತಿದ್ದ ಸಾಯಿ ಪ್ರಸಾದ್‌ ಅವರನ್ನು ವಿಚಾರಣೆ ನಡೆಸಿದೆ.

Ad Widget

Ad Widget

ಮುಜಾಮಿಲ್‌ ಮೊಬೈಲ್‌ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಎನ್‌ಐಎ ಸಾಯಿ ಪ್ರಸಾದ್‌ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿದೆ ಎಂಬ ವಿಚಾರ ಈಗ ತಿಳಿದುಬಂದಿದೆ.

Ad Widget

Ad Widget
Continue Reading

ರಾಜ್ಯ

Dry Grapes-ಪಾತಾಳಕ್ಕಿಳಿದ ಒಣ ದ್ರಾಕ್ಷಿ ದರ, ಕೆಜಿಗೆ ಬರೀ 115 ರಿಂದ 135 ರೂ.; ಬೆಳಗಾವಿಯ ದ್ರಾಕ್ಷಿ ಬೆಳೆಗಾರರು ಕಂಗಾಲು

Ad Widget

ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದು ರೈತರು ತತ್ತರಿಸಿದ್ದಾರೆ. ಇದರ ನಡುವೆ ಒಣ ದ್ರಾಕ್ಷಿ ದರ ಪಾತಾಳಕ್ಕಿಳಿದಿದೆ. ಬರದಿಂದ ಇಳುವರಿ ಕುಸಿತ ಹಾಗೂ ಬೆಲೆ ಕುಸಿತದಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಎರಡು ವರ್ಷಗಳ ಹಿಂದಿನವರೆಗೂ ಹಂಗಾಮಿನಲ್ಲಿ ಒಣ ದ್ರಾಕ್ಷಿ ಪ್ರತಿ ಕೆಜಿಗೆ ಸರಾಸರಿ 210-250 ರೂ. ದರ ಇತ್ತು. ಆದರೆ, ಕಳೆದ ವರ್ಷದಿಂದ ದ್ರಾಕ್ಷಿ ಹಂಗಾಮಿನಲ್ಲೇ ದರ ಕುಸಿಯತೊಡಗಿದೆ. ಈ ಸಲ ಪ್ರತಿ ಕೆಜಿ ಒಣ ದ್ರಾಕ್ಷಿ ದರ ಸರಾಸರಿ 115-135 ರೂ. ಮಾತ್ರ ಇದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Ad Widget

Ad Widget

Ad Widget

Ad Widget

ಬರಗಾಲದ ಕಾರಣಕ್ಕೆ ದ್ರಾಕ್ಷಿ ಇಳುವರಿ ಕುಂಠಿತವಾಗಿದ್ದರ ಜತೆಗೆ ಒಣ ದ್ರಾಕ್ಷಿ (ಮಣೂಕ) ಬೆಲೆಯೂ ಪಾತಾಳಕ್ಕಿಳಿದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. -ಗುರುದತ್ತ ಭಟ್‌ ಬೆಳಗಾವಿ

Ad Widget

Ad Widget

ರಾಜ್ಯದಲ್ಲಿ ವಿಜಯಪುರ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತದೆ. ಅಥಣಿ ತಾಲೂಕು ಒಂದರಲ್ಲೇ 5,500 ಹೆಕ್ಟೇರ್‌ ದ್ರಾಕ್ಷಿ ಬೆಳೆಯಲಾಗುತ್ತದೆ. ಉಳಿದಂತೆ ಕಾಗವಾಡ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿ ಮೊದಲಾದ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 13 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಿವೆ. ಒಟ್ಟು ಸುಮಾರು 80 ಸಾವಿರ ಟನ್‌ ಹಸಿ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಆದರೆ, ಈ ವರ್ಷ ಮಳೆ ಕೊರತೆಯಿಂದಾಗಿ ದ್ರಾಕ್ಷಿ ಹೂವು ನೆಲಕಚ್ಚುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಸರಾಸರಿ ಶೇ.20 ರಷ್ಟು ಬೆಳೆ ಕಡಿಮೆಯಾಗಿದೆ.

Ad Widget

Ad Widget

ಬೆಲೆ ಕುಸಿತ!
ಜಿಲ್ಲೆಯಲ್ಲಿ ಬೆಳೆಯುವ ಶೇ.80ರಷ್ಟು ದ್ರಾಕ್ಷಿಯನ್ನು ಸಂಸ್ಕರಣೆ ಮಾಡಿ ಒಣ ದ್ರಾಕ್ಷಿ ತಯಾರಿಸಲಾಗುತ್ತದೆ. ಎರಡು ವರ್ಷಗಳ ಹಿಂದಿನವರೆಗೆ ಹಂಗಾಮಿನಲ್ಲಿ ಒಣ ದ್ರಾಕ್ಷಿ ಪ್ರತಿ ಕಿಲೋಗೆ ಸರಾಸರಿ 210-250 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಕಳೆದ ವರ್ಷದಿಂದ ದ್ರಾಕ್ಷಿ ಹಂಗಾಮಿನಲ್ಲೇ ದರ ಕುಸಿಯತೊಡಗಿದೆ. ಈ ಬಾರಿ ಪ್ರತಿ ಕಿಲೋ ಒಣ ದ್ರಾಕ್ಷಿ ದರ ಸರಾಸರಿ 115-135 ರೂ. ಗೆ ಇಳಿದಿದೆ.

Ad Widget

Ad Widget

ಹೆಚ್ಚಿದ ಖರ್ಚು:
ದ್ರಾಕ್ಷಿ ಬೆಳೆಯಲು ಆರಂಭದಲ್ಲಿ ನಾಟಿ ಮಾಡುವುದರಿಂದ ಹಿಡಿದು ಬಳ್ಳಿ ಬೆಳೆಯಲು ತಂತಿ ಜಾಳಿಗೆಯ ಚಪ್ಪರ ಅಳವಡಿಕೆ, ಗೊಬ್ಬರ, ಕೀಟನಾಶಕಗಳ ಬಳಕೆ ಸೇರಿದಂತೆ ಪ್ರತಿ ಎಕರೆಗೆ ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಒಮ್ಮೆ ದ್ರಾಕ್ಷಿ ಕೊಯ್ಲಿಗೆ ಬಂದಮೇಲೆ ಅದನ್ನು ಸಂಸ್ಕರಣೆ ಮಾಡಿ ಒಣ ದ್ರಾಕ್ಷಿ ತಯಾರಿಕೆಗೆ ಶೆಡ್‌ ನೆಟ್‌, ಶೆಡ್‌ ಮೊದಲಾದ ಖರ್ಚು ಸೇರುತ್ತದೆ. ಇದಲ್ಲದೇ ಕೂಲಿ ದರ, ಸಾಗಣೆ ವೆಚ್ಚ, ಕೋಲ್ಡ್‌ ಸ್ಟೋರೇಜ್‌ನ ಬಾಡಿಗೆ ಮೊದಲಾದ ವೆಚ್ಚ ಪ್ರತ್ಯೇಕ. ಆದರೆ, ಈ ಬಾರಿ ಇದೆಲ್ಲದರ ಜತೆ ಹೆಚ್ಚುವರಿಯಾಗಿ ದ್ರಾಕ್ಷಿ ತೋಟಗಳಿಗೆ ನೀರುಣಿಸುವ ವೆಚ್ಚವೂ ಸೇರಿದೆ. ರೈತರು ದೂರದ ನದಿ, ಹಳ್ಳಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ಬೆಳೆ ಬೆಳೆದಿದ್ದು, ಪ್ರತಿ ವರ್ಷಕ್ಕಿಂತ ಖರ್ಚು ದುಪ್ಪಟ್ಟಾಗಿದೆ.

ಇಳಿಯುತ್ತಲೇ ಇದೆ ದರ
ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಂತ್ಯದಿಂದ ಏಪ್ರಿಲ್‌ ಮೊದಲ ವಾರದೊಳಗೆ ಬಹುತೇಕ ದ್ರಾಕ್ಷಿ ಕೊಯ್ಲು ಮುಗಿದು ಒಣ ದ್ರಾಕ್ಷಿ ಸಂಸ್ಕರಣೆ ಪ್ರಾರಂಭವಾಗುತ್ತದೆ. ಏಪ್ರಿಲ್‌ ಮೊದಲ ವಾರದ ಬಳಿಕ ಮಾರುಕಟ್ಟೆಯಲ್ಲಿ ಒಣ ದ್ರಾಕ್ಷಿಯ ಆವಕ ಹೆಚ್ಚುತ್ತಾ ಸಾಗುತ್ತದೆ. ಜಿಲ್ಲೆಯಲ್ಲಿ ಒಣ ದ್ರಾಕ್ಷಿ ಸಂಗ್ರಹಕ್ಕೆ ಕೋಲ್ಡ್‌ ಸ್ಟೋರೇಜ್‌ಗಳ ಕೊರತೆ ಇರುವ ಕಾರಣ ಬಹುತೇಕ ರೈತರು ಮಹಾರಾಷ್ಟ್ರದ ಸಾಂಗ್ಲಿ ಮೊದಲಾದೆಡೆ ಒಣ ದ್ರಾಕ್ಷಿ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಈ ಬಾರಿ ಹಂಗಾಮಿನ ಆರಂಭದಲ್ಲೇ ದ್ರಾಕ್ಷಿ ದರ ಕುಸಿದಿತ್ತು. ಮಾರ್ಚ್ ತಿಂಗಳ ಪ್ರಾರಂಭದಲ್ಲೇ ಪ್ರತಿ ಕಿಲೋ ಒಣ ದ್ರಾಕ್ಷಿಗೆ ಸರಾಸರಿ 170-180 ರೂ. ದರವಿತ್ತು. ಈಗ ಮಾರುಕಟ್ಟೆಯಲ್ಲಿಆವಕ ಹೆಚ್ಚುತ್ತಿದ್ದಂತೆ ದ್ರಾಕ್ಷಿ ದರ ಅಕ್ಷರಶಃ ಪಾತಾಳಕ್ಕಿಳಿದಿದೆ.

ಬೆಳೆಗಾರರ ಬೇಡಿಕೆ ಏನು?
*ಒಣ ದ್ರಾಕ್ಷಿಗೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಣೆಯಾಗಬೇಕು.
*ಬಹುತೇಕ ದ್ರಾಕ್ಷಿ ಸಂಸ್ಕರಣೆಯ ಹಂತದಲ್ಲಿಅಕಾಲಿಕ ಮಳೆಯಿಂದ ಹಾಳಾಗುತ್ತದೆ. ಆದರೆ, ದ್ರಾಕ್ಷಿ ತೋಟದಲ್ಲಿಹಾಳಾದರೆ ಮಾತ್ರ ಸರಕಾರ ಪರಿಹಾರ ನೀಡುತ್ತದೆ. ಸಂಸ್ಕರಣೆಯ ಹಂತದಲ್ಲೂಪ್ರಾಕೃತಿಕ ವಿಕೋಪದಿಂದ ದ್ರಾಕ್ಷಿ ನಷ್ಟವಾದರೆ ಪರಿಹಾರ ವಿತರಿಸಲು ಕ್ರಮವಾಗಬೇಕು.
*ದ್ರಾಕ್ಷಿ ಸಂಗ್ರಹಣೆಗೆ ಜಿಲ್ಲೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣವಾಗಬೇಕು.
*ದ್ರಾಕ್ಷಿ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿಮೊಟ್ಟೆ, ಬಾಳೆಹಣ್ಣಿನ ಜತೆಗೆ ಒಣ ದ್ರಾಕ್ಷಿಯನ್ನೂ ನೀಡುವಂತಾಗಬೇಕು.
*ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು.

ಒಣ ದ್ರಾಕ್ಷಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ದ್ರಾಕ್ಷಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಮತ್ತು ಸರಕಾರಕ್ಕೆ ಆದಾಯ ತಂದುಕೊಡುವ ಬೆಳೆ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಥಣಿ ರೇಸಿನ್‌ ಪ್ರೊಸೆಸಿಂಗ್‌ ಕ್ಲಸ್ಟರ್‌ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ್ ಹೇಳಿದ್ದಾರೆ.

Continue Reading

ಅಪರಾಧ

Deadly Murder at Tumkur: ತುಮಕೂರಿನಲ್ಲಿ ಕಾರಿನೊಳಗಡೆ  ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿಯ ಮೂವರ ಶವ – ಅಪಹರಿಸಿ ಕೊಲೆ ನಡೆಸಿ ಸುಟ್ಟು ಕಾರನ್ನು ಕೆರೆಗೆಸೆದ ಹಂತಕರು – ಶವವಾದವರ ಜತೆ ಇನ್ನಿಬ್ಬರು ಹೋಗಿದ್ದರೇ ?

Ad Widget

ತುಮಕೂರು: ತುಮಕೂರು ತಾಲೂಕಿನ (Tumkur News) ಕುಚ್ಚಂಗಿ ಕೆರೆಯಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ  ಬಿಳಿ ಬಣ್ಣದ ಮಾರುತಿ ಎಸ್‌ ಪ್ರೆಸೊ  ಕಾರೊಂದು ಪತ್ತೆಯಾಗಿದೆ.   (Burnt Car found).  ಕಾರಿನೊಳಗಡೆ  ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳಿವೆ (Three dead bodies found in the Car).  ಇದೊಂದು ಭಯಾನಕ ಕೊಲೆ ಪ್ರಕರಣ (Murder Case)  ಎಂಬ ಶಂಕೆ ವ್ಯಕ್ತವಾಗಿದ್ದು, ಮೃತಪಟ್ಟ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನವರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.

Ad Widget

Ad Widget

Ad Widget

Ad Widget

ಆಟೋ ಚಾಲಕರಾಗಿರುವ ಬೆಳ್ತಂಗಡಿ  ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್‌ ಕುಂಟಿನಿ ನಿವಾಸಿ ಸಾಹುಲ್‌ ಹಮೀದ್‌ (45), ವಿದೇಶದಿಂದ ಬಂದು ಮನೆಯಲ್ಲೇ ಇದ್ದ ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್‌ ಕುಂಟಿನಿ ನಿವಾಸಿ ಇಸಾಕ್‌ (50), ಬೆಳ್ತಂಗಡಿಯಲ್ಲಿ ಫ‌ುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕಾರ್ಕಳ ತಾಲೂಕು  ಶಿರ್ಲಾಲು ಗ್ರಾಮದ ನಿವಾಸಿ ಸಿದ್ದಿಕ್‌ (35)ರವರ ಮೃತದೇಹ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Ad Widget

Ad Widget

  ಕಾರಿನಲ್ಲಿ ವ್ಯವಹಾರಕ್ಕೆಂದು ತುಮಕೂರಿಗೆ ಹೋದವರನ್ನು ಅಪಹರಿಸಿ ಕೊಲೆ ಮಾಡಿ ಬಳಿಕ ಅವರನ್ನು ಕಾರಿನಲ್ಲಿ ತುಂಬಿಸಿ , ಕಾರು ಸಮೇತ ಕೆರೆಗೆ ತಳ್ಳಿರಬಹುದು, ಅದಕ್ಕೂ ಮೊದಲು ಕಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರಬಹುದು ಎನ್ನುವ ಅನುಮಾನವನ್ನು ತುಮಕೂರಿನ ಪೊಲೀಸರು ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಘಟನೆ ಬೆಳಕಿಗೆ ಬಂದಿದ್ದು ಹೀಗೆ ..

Ad Widget

Ad Widget

ಗುರುತು ಪತ್ತೆ ಹಚ್ಚಲಾಗದಷ್ಟು ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಮೃತ ದೇಹಗಳು ಪತ್ತೆಯಾಗಿದ್ದವು, ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹ ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಇತ್ತು.   ದುಷ್ಕರ್ಮಿಗಳು ಗುರುವಾರ ರಾತ್ರಿ Ka 43N 1571  ರಿಜಿಸ್ಟ್ರಿ ಹೊಂದಿದ ಕಾರನ್ನು ಕೆರೆಯ ಮಧ್ಯಭಾಗಕ್ಕೆ ಕೊಂಡೊಯ್ದು ಪೊದೆಗಳ ಮಧ್ಯೆದಲ್ಲಿ ನಿಲ್ಲಿಸಿ ಕಾರಿಗೂ ಸಹ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಮಧ್ಯಾಹ್ನ ಗ್ರಾಮಸ್ಥರು ಕೆರೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರು ನಿಂತಿರುವುದನ್ನು ಕಂಡು ಕೋರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವಗಳು ಇರುವುದು ಕಂಡು ಬಂದಿದೆ.

ಸುಮಾರು 12 ದಿನಗಳ ಹಿಂದೆ ಇಸಾಕ್‌ ಅವರು ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ರಫೀಕ್‌  ಅವರ Ka 43N 1571   ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದರು.  ಮಾ 20 ರಂದು  ಇಸಾಕ್‌ ಅವರು ಕಾರು ಮಾಲಕ ರಫೀಕ್‌ ಅವರಿಗೆ ಕರೆ ಮಾಡಿ ಇನ್ನೆರಡು ದಿನಗಳಲ್ಲಿ ಬರುತ್ತೇವೆ ಎಂದು ತಿಳಿಸಿದ್ದರೆಂದು ಮಾಹಿತಿ ತಿಳಿದು ಬಂದಿದೆ. ಅನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಮೂವರು ಬೆಳ್ತಂಗಡಿಯಿಂದ ತುಮಕೂರಿಗೆ ಯಾವುದೋ ವ್ಯವಹಾರದ ಮಾತುಕತೆಗಾಗಿ ಹೋಗಿರುವ ಸಂಶಯ ಹೊಂದಲಾಗಿದೆ. ಅಲ್ಲಿ ಅವರನ್ನು ಅಪಹರಿಸಿ ಕೊಲೆ ಮಾಡಿ ಬಳಿಕ ಕಾರಿನಲ್ಲಿ ಶವವನ್ನಿರಿಸಿ ಸುಟ್ಟುಹಾಕಿರುವ ಶಂಕೆ ಕಂಡುಬಂದಿದೆ.

ಇನ್ನೊಂದು ಮೂಲದ ಪ್ರಕಾರ ಬೆಳ್ತಂಗಡಿಯಿಂದ ಕಾರಿನಲ್ಲಿ ಹೋದವರು ಮೂವರಲ್ಲ . ಒಟ್ಟು ಐದು ಮಂದಿಇದ್ರು … ಇನ್ನಿಬ್ಬರು ಎಲ್ಲಿ ಇದ್ದಾರೆ ಎನ್ನುವ ಬಗ್ಗೆಯೂ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading