ಪುತ್ತೂರು : ಮಾ 24 : ಪುತ್ತೂರಿನ ಜವುಳಿ ಉದ್ಯಮದ ಲ್ಲಿ ದೊಡ್ಡ ಹೆಸರಾದ ಎಂ. ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯೂ ವಿನೂತನ ಸಾಹಸಕ್ಕೆ ಮುಂದಾಗಿದ್ದು, ಅವರ ನೂತನ ಶಾಖೆ ಎಂ. ಎಸ್. ಎಸ್. ಆಲ್ ಎಕ್ಸ್‌ಕ್ಲೂಸಿವ್ ಮಾ 24. ರಂದು ಲೋಕಾರ್ಪಣೆಗೊಂಡಿತ್ತು. ಸಂಜೀವ ಶೆಟ್ಟಿ ಅವರ ಹಿರಿಯ ಪುತ್ರ ಎಂ. ಮುರಳಿಧರ ಶೆಟ್ಟಿ ರಿಬ್ವನ್ ಕತ್ತರಿಸುವ ಮೂಲಕ ಹೊಸ ಸಂಸ್ಥೆಯನ್ನು ಶುಭಾರಂಭ ಮಾಡಿದರು.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜಶೇಖರ್ ಮಾತನಾಡಿ ಪುತ್ತೂರಿನಲ್ಲಿ ಸಂಜೀವ ಶೆಟ್ಟಿ ಮಳಿಗೆಗೆ ಇತಿಹಾಸವಿದ್ದು, ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಯಶಸ್ವಿಯನ್ನು ಕಾಣುವಂತಾಗಲಿ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಮಹಾನಗರಗಳಲ್ಲಿರುವ ಮಾರಾಟ ಮಳಿಗೆಗಳ ರೀತಿಯಲ್ಲಿ ಪುತ್ತೂರಿನಲ್ಲಿ ಸಂಜೀವ ಶೆಟ್ಟಿ ಅವರು ಮಳಿಗೆಯನ್ನು ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಪುತ್ತೂರಿಗೆ ಮೆರುಗು ನೀಡುವ ಕಾರ್ಯವನ್ನು ಸಂಜೀವ ಶೆಟ್ಟಿ ಕುಟುಂಬಸ್ಥರ ಮಳಿಗೆಗಳು ಮಾಡುತ್ತಿದೆ ಎಂದರು.

ಸುಳ್ಯ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ವ್ಯಾಪಾರ ಎಂಬುದು ಸುಲಭದ ಮಾತಲ್ಲ. ಸಂಜೀವ ಶೆಟ್ಟಿ ಅವರ ಸರಳತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಗ್ರಾಹಕರ ವಿಶ್ವಾಸವನ್ನು ನಿರಂತರವಾಗಿ ಉಳಿಸಿಕೊಂಡು ಬರುತ್ತಿರುವುದು ಘ್ಲಾಘನೀಯ ವಿಚಾರವಾಗಿದೆ ಎಂದರು.
ಕುಟುಂಬ ಸದಸ್ಯರಾದ ಸತೀಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಬೈ ಉದ್ಯಮಿ ನರೇಂದ್ರ ಛೋಪ್ರಾ ಶುಭ ಹಾರೈಸಿದರು. ೩೦ ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ ಮೀನಾ ಕುಮಾರಿ, ಬಾಬು ಗೌಡ, ಮೊನ್ನಪ್ಪ, ಸುಂದರ, ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಜೀವ ಶೆಟ್ಟಿ ಅವರ ಪುತ್ರರಾದ ಶಿವಶಂಕರ್ ಶೆಟ್ಟಿ, ಗಿರಿಧರ ಶೆಟ್ಟಿ, ಮನೋಹರ್ ಶೆಟ್ಟಿ, ಪಾಪುö್ಯಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್, ಸಂಜೀವ ಶೆಟ್ಟಿ ಕುಟುಂಬದ ಸದಸ್ಯರು ಹಾಜರಿದ್ದರು. ಸಹನಾ ಪ್ರಾರ್ಥಿಸಿದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.

ವಿಶೇಷತೆಗಳು
ಸಂಸ್ಥೆಯ ನೆಲ ಅಂತಸ್ತಿನಲ್ಲಿ ಕಾಸ್ಟೆಟಿಕ್ಸ್, ಹ್ಯಾ೦ಡ್ ಬ್ಯಾಗ್, ನ್ಯೂ ಬಾರ್ನ್ ಡ್ರೆಸಸ್, ಹಾಗೂ ಟಾಯ್ಸ್, ಪ್ರಥಮ ಮಹಡಿಯಲ್ಲಿ ಲೇಡಿಸ್ ಎತ್ನಿಕ್ ವೇರ್, ಮೆನ್ಸ್ ಫಾರ್ಮಲ್, ಕ್ಯಾಸುವಲ್ ವೇರ್, ಎರಡನೇ ಮಹಡಿಯಲ್ಲಿ ಮೆನ್ಸ್ ಎತ್ನಿಕ್ ವೇರ್, ಟ್ರಾವೆಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಎಲ್ಲರನ್ನು ಆಕರ್ಷಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಸಂಜೀವ ಶೆಟ್ಟಿ ಬಟ್ಟೆ ಮಳಿಗೆ’ ಮದುವೆ ಬಟ್ಟೆಗಳಿಗೆ ಹೆಸರುವಾಸಿ. ಅವಿಭಜಿತ ದಕ ಜಿಲ್ಲೆಯ ವಿವಿಧ ಮೂಲೆಗಳಿಂದ ಗ್ರಾಹಕರು ಹುಡುಕಿಕೊಂಡು ಬರುವಂತೆ ಈ ಮಳಿಗೆಯನ್ನು ರೂಪಿಸಿದ ಹೆಗ್ಗಳಿಕೆ ಸಂಜೀವ ಶೆಟ್ಟಿ ಅವರದ್ದು.