ಆದಾಯ ತೆರಿಗೆಯಿಂದ ನೀಡಲಾಗುವ ಪಾನ್ ನಂಬರ್ (PAN- Permanent Account Number) ಅನ್ನು ಆಧಾರ್ ನಂಬರ್ಗೆ ಜೋಡಿಸಬೇಕೆಂದು (Aadhaar and PAN link) ಕಾಲವಧಿ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31ರವರೆಗೆ ಮಾತ್ರ ಕಾಲಾವಕಾಶ ಇದೆ.
ಏಪ್ರಿಲ್ 1ರಿಂದ ಆಧಾರ್ ಜೊತೆ ಜೋಡಣೆಯಾಗದ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಆ ಬಳಿಕ ಆಧಾರ್ ನಂಬರ್ಗೆ ಪಾನ್ ಲಿಂಕ್ ಮಾಡಲು ಅವಕಾಶ ಇರುತ್ತದೆಯಾದರೂ ದುಬಾರಿ ಶುಲ್ಕ ತೆರಬೇಕಾಗುತ್ತದೆ. ಮಾ.31 ರೊಳಗೆ ಆಧಾರ್ ಪಾನ್ ಲಿಂಕ್ ಮಾಡಬೇಕೆಂದರೆ 1000ರೂ. ದಂಡ ಕಟ್ಟಬೇಕಾಗುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ.

ಅಲ್ಲದೇ, ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು ನೀವು ಗೊತ್ತಿದ್ದೋ ಗೊತ್ತಿಲ್ಲದೆಯೇ ಹಣಕಾಸು ವಹಿವಾಟುಗಳಲ್ಲಿ ಬಳಕೆ ಮಾಡಿದ್ದೇ ಆದಲ್ಲಿ ಭಾರೀ ದಂಡ ಕಟ್ಟಬೇಕಾಗುತ್ತದೆ. ಹಣಕಾಸು ಅಪರಾಧ ಆರೋಪದ ಮೇಲೆ ಜೈಲಿಗೂ ಹೋಗಬೇಕಾಗಬಹುದು.
2017ರ ಹಣಕಾಸು ಕಾಯ್ದೆಯು 1961ರ ಆದಾಯ ತೆರಿಗೆ ಕಾಯ್ದೆಗೆ 139ಎಎ ಎಂಬ ಹೊಸ ಸೆಕ್ಷನ್ ಸೇರಿಸಿತ್ತು. ಅದರಂತೆ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರೂ ಕೂಡ ಆಧಾರ್ ನಂಬರ್ ನೀಡುವುದು ಕಡ್ಡಾಯ ಮಾಡಲಾಯಿತು. ಇದು 2017 ಜುಲೈ 1ರಿಂದ ಅನ್ವಯಕ್ಕೆ ಬಂದಿದೆ. ಹೊಸದಾಗಿ ಪಾನ್ ಕಾರ್ಡ್ ಪಡೆಯುವವರಷ್ಟೇ ಅಲ್ಲ, ಈ ಹಿಂದೆಯೂ ಪಾನ್ ಕಾರ್ಡ್ ಪಡೆದಿರುವವರೂ ಕೂಡ ಆಧಾರ್ ನಂಬರ್ ಜೊತೆ ಜೋಡಿಸಬೇಕು.
ಪಾನ್ ಎಂಬುದು ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳ ನಂಬರ್ ಇರುವ ಕಾರ್ಡ್. ಇದು ತೆರಿಗೆ ಟ್ರ್ಯಾಕಿಂಗ್ಗೋಸ್ಕರ ಮಾಡಿರುವ ವಿಶೇಷ ವ್ಯವಸ್ಥೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆ ಪ್ರತ್ಯೇಕವಾಗಿ ಪ್ಯಾನ್ ಕಾರ್ಡ್ ಮಾಡಿಸಬೇಕು. ಯಾರೇ ಆದರೂ ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಹೊಂದುವಂತಿಲ್ಲ. ಹಾಗೆ ಮಾಡಿದರೆ ಅದು ಆರ್ಥಿಕ ಅಪರಾಧವಾಗುತ್ತದೆ. ಹಾಗೆಯೇ, ಬ್ಯಾಂಕ್ ಖಾತೆ ತೆರೆಯಲು ಪಾನ್ ಕಾರ್ಡ್ ಈಗ ಅಗತ್ಯ ದಾಖಲೆಯಾಗಿದೆ. 50 ಸಾವಿರ ರುಪಾಯಿಗಿಂತ ಹೆಚ್ಚು ಮೊತ್ತದ ನಗದು ಹಣವನ್ನು ಬ್ಯಾಂಕಿಗೆ ಜಮೆ ಮಾಡಬೇಕೆಂದಿದ್ದರೂ ಪ್ಯಾನ್ ದಾಖಲೆ ಬೇಕು.
ಪಾನ್ ಆಧಾರ್ ಜೋಡಿಸದಿದ್ದರೆ ಸಮಸ್ಯೆ ಏನೂ ?
ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ
ಡೆಬಿಟ್/ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ
50000 ಕ್ಕಿಂತ ಹೆಚ್ಚಿನ ನಗದು ವ್ಯವಹಾರ ಸಾಧ್ಯವಿಲ್ಲ
ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ https://www.incometax.gov.in/iec/foportal/ ಪ್ರವೇಶಿಸಿ
ಎಡಬದಿಯಲ್ಲಿ Quick Liks ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.
ಈ ಪ್ರಕ್ರಿಯೆಯನ್ನು ನೀವು ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ಗೆ ಲಾಗಿನ್ ಅಗದೆಯೇ ಪಡೆಯಬಹುದಾದ ಸೇವೆ.
ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ನೀವು ಆಧಾರ್ ಮತ್ತು ಪಾನ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.