ಪುತ್ತೂರು: ಮುಸ್ಲಿಮರ ಪವಿತ್ರ ರಂಝಾನ್ ವೃತ ನಾಳೆಯಿಂದ (ಮಾ.23) ರಿಂದ ಪ್ರಾರಂಭಗೊಳ್ಳಲಿದೆ.
30 ದಿವಸಗಳ ಕಾಲ ಮುಸ್ಲಿಮರು ಉಪವಾಸ ವೃತವನ್ನು ಕೈಗೊಳ್ಳಲಿದ್ದು ಅನ್ನ ಪಾನೀಯವನ್ನು ತೊರೆದು ವೃತಾಚರಣೆ ಮಾಡಲಿದ್ದಾರೆ. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಇಫ್ತಾರ್ ಕೂಟಗಳು ನಿತ್ಯ ನಡೆಯಲಿದೆ.
ದ.ಕ. ಉಡುಪಿ ಜಿಲ್ಲೆ ಸೇರಿದಂತೆ ಕೇರಳದಲ್ಲಿ ವೃತ ನಾಳೆಯಿಂದ ಆರಂಭವಾಗಲಿದೆ ಎಂದು ಖಾಝಿಗಳು ಆದೇಶಿಸಿದ್ದಾರೆ.
ಪವಿತ್ರ ರಂಜಾನ್ ನ ಪ್ರಥಮ ಚಂದ್ರದರ್ಶನವು ಬುಧವಾರ ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿದೆ. ಹೀಗಾಗಿ ಗುರುವಾರದಿಂದ ರಂಜಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙ್ಗಳ್ ಅಲ್ ಬುಖಾರಿ ಹಾಗೂ ಭಟ್ಕಳ ಚಂದ್ರದರ್ಶನ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.