ಪುತ್ತೂರು: ಸುಮಾರು 79 ವರ್ಷಗಳ ವಸ್ತ್ರ ಮಾರಾಟದ ಪರಂಪರೆಯನ್ನು ಹೊಂದಿರುವ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆದ್ದ, ಮದುವೆ ಜವಳಿಗೆಂದೇ ಪ್ರಸಿದ್ಧಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ MSS ALL EXCLUSIVE ಮಾ.24ರಂದು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಎಂ. ಸಂಜೀವ ಶೆಟ್ಟಿ ಹಳೆಯ ಜವಳಿ ಮಳಿಗೆಯಲ್ಲಿ ಶುಭಾರಂಭಗೊಳ್ಳಲಿದೆ.
1944ರಲ್ಲಿ ಪುತ್ತೂರಿನಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಎಂ.ಸಂಜೀವ ಶೆಟ್ಟಿ 2017ರಲ್ಲಿ ಜಿಲ್ಲೆಯಲ್ಲೇ ಬಹುದೊಡ್ಡ 3 ಅಂತಸ್ತಿನ ವಸ್ತ್ರ ವ್ಯಾಪಾರ ಮಳಿಗೆ ಪ್ರಾರಂಭಿಸಿದೆ.
ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎಂ.ಸಂಜೀವ ಶೆಟ್ಟಿ ಶಾಖಾ ಶೋ ರೂಮ್ ಹೊಂದಿದೆ. ಗ್ರಾಹಕರ ಇನ್ನೂ ಹೆಚ್ಚಿನ ವೈವಿಧ್ಯಮಯ ಆಯ್ಕೆಗಾಗಿ ಇದೀಗ ವಿನೂತನ ವ್ಯವಹಾರಕ್ಕೆ ಕೈ ಹಾಕಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯವರು, ತಮ್ಮ ಮೊದಲಿನ ಶೋರೂಂ ನಲ್ಲಿ MSS ALL EXCLUSIVE ನ್ನು ಪ್ರಾರಂಭಿಸಿದ್ದಾರೆ.
ಗ್ರಾಹಕರಿಗೆ ಎಲ್ಲಾ ಬ್ರಾಂಡೆಡ್ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ನಿಲುವಿನಿಂದ ಹಳೆಯ ಶೋರೂಂನ್ನೇ ಈ ಶೋರೂಂ ಆಗಿ ಬದಲಿಸಲಾಗಿದೆ.
ಬಹುದೊಡ್ಡ ವಾಹನ ಉಚಿತ ಪಾರ್ಕಿಂಗ್ ವ್ಯವಸ್ಥೆಯೂ ಸಂಜೀವ ಶೆಟ್ಟಿ ಯವಲ್ಲಿರುವುದು ಮತ್ತೊಂದು ವಿಶೇಷ
ವೈಶಿಷ್ಟ್ಯತೆಗಳು:
ಸಂಸ್ಥೆಯ ನೆಲ ಅಂತಸ್ತಿನಲ್ಲಿ ಕಾಸ್ಮೆಟಿಕ್ಸ್, ಹ್ಯಾಂಡ್ ಬ್ಯಾಗ್, ನ್ಯೂ ಬಾರ್ನ್ ಬೇಬಿ ಡ್ರೆಸಸ್ ಹಾಗೂ ಟಾಯ್ಸ್ ಲಭ್ಯವಿದೆ.
ಪ್ರಥಮ ಮಹಡಿಯಲ್ಲಿ ಲೇಡಿಸ್ ಎತ್ನಿಕ್ ವೇರ್, ಮೆನ್ಸ್ ಫಾರ್ಮಲ್, ಕ್ಯಾಸುವಲ್ ವೇರ್.
ಎರಡನೇ ಮಹಡಿಯಲ್ಲಿ ಮೆನ್ಸ್ ಎತ್ನಿಕ್ ವೇರ್, ಟ್ರಾವೆಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.