Connect with us

ವಿಟ್ಲ

ಉಡುಪಿ – ಕಾಸರಗೋಡು 400 ಕೆ. ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯನ್ನು ತಡೆಯುವ ಕಾರ್ಯ ಮಾಡಲಾಗಿದೆ – ವಿಟ್ಲದಲ್ಲಿ ಶಾಸಕ ಸಂಜೀವ ಮಠಂದೂರು

Ad Widget

Ad Widget

Ad Widget

Ad Widget Ad Widget

ವಿಟ್ಲ: ಜಾತಿ ಮತ ನೋಡದೆ ಎಲ್ಲರಿಗೆ ಎಲ್ಲವನ್ನೂ ನೀಡುವ ಕಾರ್ಯವನ್ನು ಮಾಡಲಾಗಿದೆ. ಸರ್ಕಾರದ ಸೌವಲತ್ತಿನಿಂದ ವಂಚಿತನಾಗಬಾರದೆಂದು ಸರ್ಕಾರ ವಿವಿಧ ನಿಯಮಗಳನ್ನು ಜಾರಿಗೆ ತಂದಿದೆ. ಉಡುಪಿ – ಕಾಸರಗೋಡು 400 ಕೆ. ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯನ್ನು ನಿಲ್ಲಿಸುವ ಕಾರ್ಯ ಮಾಡಲಾಗಿದೆ. ರೈತರಿಗೆ ಅನ್ಯಾಯವಾಗುವ ಕೆಲಸವನ್ನು ತಡೆ ಹಿಡಿಯುವ ಕೆಲಸವನ್ನು ಮಾಡುತ್ತೇವೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Ad Widget

Ad Widget

Ad Widget

Ad Widget

Ad Widget

ಅವರು ಭಾನುವಾರ ಚಂದಳಿಕೆ ಭಾರತ್ ಅಡಿಟೋರಿಯಂನಲ್ಲಿ ವಿಟ್ಲ ಹೋಬಳಿ ನಾಡಕಛೇರಿ ನೂತನ ಕಟ್ಟಡ ಉದ್ಘಾಟನೆ, ಕೃಷಿ ಇಲಾಖೆಯ ವಿಟ್ಲ ಹೋಬಳಿ ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 94ಸಿ. ಸಿ. ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

Ad Widget

Ad Widget

ರೈತರಿಗೆ ಸಹಾಯಧನದಲ್ಲಿ ಕೃಷಿ ಉಪಕರಣಗಳ ವಿತರಣೆ ಮಾಡಲಾಯಿತು. ವಿಟ್ಲ ಪಟ್ಟಣ ಪಂಚಾಯಿತಿಯ ಎಸ್. ಎಫ್. ಸಿ. ನಿಧಿಯ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಲಾಯಿತು.

Ad Widget

Ad Widget

ಕಾರ್ಯಕ್ರಮವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ತಹಸೀಲ್ದಾರ ವಿ. ಎಸ್. ಸತೀಶ್, ಗ್ರೇಡ್ 2 ತಹಸೀಲ್ದಾರ ದಯಾನಂದ, ಕೃಷಿ ಇಲಾಖೆಯ ವೀಣಾ, ಗೃಹ ಮಂಡಳಿಯ ಸಿ. ಕೆ. ಮಂಜುಳಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಯಪ್ರಕಾಶ್, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಪದ್ಮನಾಭ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಬಲ್ನಾಡು, ಪಟ್ಟಣ ಪಂಚಾಯಿತಿಯ ಸದಸ್ಯರು ಹಾಜರಿದ್ದರು.

Ad Widget

Ad Widget

ಪಟ್ಟಣ ಪಂಚಾಯಿತಿಯ ಸದಸ್ಯರಾದ ಅರುಣ್ ವಿಟ್ಲ ಸ್ವಾಗತಿಸಿದರು. ರವಿಪ್ರಕಾಶ್ ವಿಟ್ಲ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

ಬಿಗ್ ನ್ಯೂಸ್

Big Breaking : ವಿಟ್ಲ : ನಿರ್ಮಾಣ ಹಂತದ ಸೇತುವೆ ಕುಸಿದು 7ಮಂದಿಗೆ ಗಾಯ

Ad Widget

Ad Widget

Ad Widget

Ad Widget Ad Widget

ವಿಟ್ಲ: ಪುಣಚ ಗ್ರಾಮದ ಬರೆಂಜ – ಕುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 7ಮಂದಿಗೆ ಗಾಯವಾಗಿದೆ.

Ad Widget

Ad Widget

Ad Widget

Ad Widget

Ad Widget

ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ರಾಡ್ ಜಾರಿದ ಹಿನ್ನಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಕುಸಿದು ಬಿದ್ದಿದೆ.

Ad Widget

Ad Widget

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿಯನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. . ಸ್ಥಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Ad Widget

Ad Widget
Continue Reading

ವಿಟ್ಲ

Farmer-ಕೋವಿ ಡೆಪಾಸಿಟ್ ಇಟ್ಟ ರೈತ ಮಂಗ ಓಡಿಸಲು 112 ಪೊಲೀಸ್ ಹೆಲ್ಪ್ ಲೈನಿಗೆ ಕರೆ ಮಾಡಿ ಬಿಸಿ ಮುಟ್ಟಿಸಿದ – ಆಡಿಯೋ ವೈರಲ್

Ad Widget

Ad Widget

Ad Widget

Ad Widget Ad Widget

ವಿಟ್ಲ : ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವಿನ ಕೃಷಿಕರೊಬ್ಬರು ವಿಟ್ಲ ಪೋಲಿಸರಿಗೆ ಬಿಸಿಮುಟ್ಟಸಿದ ಘಟನೆ ನಡೆದಿದೆ. ನ್ಯಾಯಾಲಯ ಸೂಚನೆ ನೀಡಿದ್ದರೂ ಠಾಣೆಯಲ್ಲಿ ಠೇವಣಿ ಇರಿಸಿದ್ದ ಕೋವಿಯನ್ನು ಪೊಲೀಸರು ವಾಪಸ್ ನೀಡದ ಕಾರಣ ಈ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

Ad Widget

ಕೃಷಿಕ ನಿಶಾಂತ ನಾರಾಯಣರವರು ಅಳಿಕೆ ಗ್ರಾಮ ನಿವಾಸಿಯಾಗಿದ್ದು, ತಮ್ಮ ಕಾರ್ಯದ ಮೂಲಕ ಪೊಲೀಸರ ಕಣ್ತೆರೆಸಿದ್ದು, ಪೊಲೀಸರೇ ಮನೆಗೆ ಬಂದು ಕೋವಿಯನ್ನು ಮರಳಿಸಿದ್ದಾರೆ.

Ad Widget

Ad Widget

ಘಟನೆಯ ವಿವರ :
ಗ್ರಾಮೀಣ ಪ್ರದೇಶಗಳ ಕೃಷಿಕರು ಕಾಡು ಹಂದಿ ಹಾಗೂ ಕೋತಿಗಳ ಉಪಟಳವನ್ನು ಹತೋಟಿಗೆ ತರಲು ಪರವಾನಗಿ ಕೋವಿ ಇರಿಸಿಕೊಂಡಿರುತ್ತಾರೆ. ಆದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಚುನಾವಣೆಯ ಸಮಯದಲ್ಲಿ ಕೃಷಿಕರು ಕೋವಿಯನ್ನು ಠಾಣೆಯಲ್ಲಿ ಠೇವಣಿ ಇಡುವ ನಿಯಮವನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆ ಪ್ರತೀ ವರ್ಷ ನಡೆಸುತ್ತಿತ್ತು.

Ad Widget

Ad Widget

ಆದರೆ ಈ ಬಾರಿ ಕೋವಿಯನ್ನು ಠಾಣೆಗಳಲ್ಲಿ ಠೇವಣಿ ಇರಿಸಿದರೆ, ಕೃಷಿಕರಿಗೆ ಕಾಡುಹಂದಿ ಹಾಗೂ ಮಂಗಗಳ ಉಪಟಳ ಎದುರಾದರೆ ಏನು ಗತಿ ಎಂದು ಮರುಪ್ರಶ್ನಿಸಿದ್ದು ಈ ಹಿನ್ನೆಲೆಯಲ್ಲಿ ಕೆಲ ಕೃಷಿಕರಿಗೆ ವಿನಾಯಿತಿಯೂ ದೊರೆತ್ತಿತ್ತು. ಜಿಲ್ಲಾಧಿಕಾರಿಗೆ ರಿಯಾಯಿತಿ ನೀಡುವಂತೆ ಪತ್ರ ಬರೆದು ಕೋವಿಯ ಅಗತ್ಯತೆ ಬಗ್ಗೆ ತಿಳಿಸಿದ್ದರು. ತಮ್ಮ ಕೋವಿಯನ್ನು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಠೇವಣಿ ಇರಿಸಿದ್ದರು. ಜಿಲ್ಲಾಧಿಕಾರಿಗಳು ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಈ ಕುರಿತಾಗಿ ಎ.1 ರಂದು ಉಚ್ಚ ನ್ಯಾಯಾಲಯಕ್ಕೆ ಮಾಣಿಮೂಲೆ ಗೋವಿಂದ ಭಟ್ ಜತೆಗೆ ವಕೀಲ ಸುಬ್ರಹ್ಮಣ್ಯ ಭಟ್ ಮೂಲಕ ಮನವಿ ಸಲ್ಲಿಸಿದ್ದರು.

Ad Widget

Ad Widget

ಇದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯ ಮರುಪರಿಶೀಲನೆಯನ್ನು ನಡೆಸಿ ಕೋವಿ ಠೇವಣಿಗೆ ವಿನಾಯಿತಿ ನೀಡುವ ಬಗ್ಗೆ ತಿಳಿಸಿದ್ದರು. ಹೀಗಿದ್ದರೂ ಕೋವಿಯನ್ನು ಹಿಂತಿರುಗಿಸದೆ, ನ್ಯಾಯಾಲಯದ ಆದೇಶವನ್ನು ಇಲಾಖೆ ಪಾಲಿಸಿರಲಿಲ್ಲ.

ಪೊಲೀಸರೇ ಕೋವಿ ಮನೆಗೆ ತಲುಪಿಸಿದರು :
ಎ.2ರಂದು, ತಮ್ಮ ತೋಟಕ್ಕೆ ಕೋತಿಗಳ ಹಿಂಡು ಬಂದು ಕೃಷಿಯನ್ನು ಹಾನಿ ಮಾಡುತ್ತಿವೆ ನನ್ನ ಬಳಿ ಈಗ ಕೋವಿ ಇಲ್ಲ. ತೋಟಕ್ಕೆ ಬಂದ ಕೋತಿಗಳನ್ನು ಓಡಿಸಿ ಎಂದು ನಿಶಾಂತ್ ಬಿಲ್ಲಂಪದವು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಅದರಂತೆ ವಿಟ್ಲ ಪರಿಸರದ 112 ವಾಹನ ಬಿಲ್ಲಂಪದವುಗೆ ಬಂದು ಸಮಸ್ಯೆಗೆ ಸ್ಪಂದಿಸಿದ್ದರು. ಕೋವಿ ನೀಡದೇ ಹೋದರೆ ಪದೇ ಪದೇ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತ ಪೊಲೀಸರು ಮರುದಿನವೇ ಕೋವಿಯನ್ನು ನಿಶಾಂತ್ ಬಿಲ್ಲಂಪದವು ಅವರ ಮನೆಗೆ ಹಿಂತಿರುಗಿಸಿದ್ದಾರೆ.

ವೈರಲ್‌ ಆದ ಆಡಿಯೋ :
ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಕಾರಣದಿಂದ ತೋಟಕ್ಕೆ ನುಗಿದ್ದ ಕೋತಿಯನ್ನು ಓಡಿಸಲು ಕೃಷಿಕರೋಬ್ಬರು 112 ಕ್ಕೆ ಕರೆ ಮಾಡಿ ʻತೋಟಕ್ಕೆ ಮಂಗ ಬಂದಿದೆ. ಕೂಡಲೇ ಬರಬೇಕುʼ ಎಂದು ಮನವಿ ಮಾಡಿದ್ದರು. ಸಂಜೆ 5 ಗಂಟೆಯ ವೇಳೆಗೆ ಅವರು ಫೋನ್‌ ಮಾಡಿದ್ದು, ರಾತ್ರಿ 8 ಗಂಟೆಯ ವೇಳೆಗೆ ವಿಟ್ಲ ಪೋಲಿಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ತುರ್ತು ಪೊಲೀಸರನ್ನೇ ತೋಟಕ್ಕೆ ಕರೆಸಿದ ಘಟನೆ, ಪೊಲೀಸರ ಜೊತೆ ನಿಶಾಂತ್ ಬಿಲ್ಲಂಪದವು ನಡೆಸಿದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

ಅಪರಾಧ

‘Chicken fight’-ವಿಟ್ಲ : ʼಕೋಳಿ ಜಗಳʼ ವ್ಯಕ್ತಿಯೊಬ್ಬರ ಮೇಲೆ ತಂಡದಿಂದ ಹಲ್ಲೆ

Ad Widget

Ad Widget

Ad Widget

Ad Widget Ad Widget

ವಿಟ್ಲ: ಇಲ್ಲಿನ ಪಳಿಕೆ ರಂಗಮಜಲು ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಹಲ್ಲೆ ಮಾಡಿದ್ದು ಇದನ್ನು ಗಮನಿಸಿ ಆ ವ್ಯಕ್ತಿಯನ್ನು ಬಿಡಿಸಲು ಹೋದವರನ್ನು ತಳ್ಳಿ ನೆಲಕ್ಕೆ ಬೀಳಿಸಿದ ಪರಿಣಾಮ ಇಬ್ಬರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Ad Widget

Ad Widget

Ad Widget

Ad Widget

Ad Widget

ಪಳಿಕೆ ರಂಗಮಜಲು ನಿವಾಸಿ ಭವಿತ್ ಪೂಜಾರಿ (28) ಹಲ್ಲೆಗೊಳಗಾಗಿದ್ದು, ರಂಗಮಜಲು ನಿವಾಸಿ ರಾಮಣ್ಣ ಶೆಟ್ಟಿ (70) ಅವರನ್ನು ತಳ್ಳಿ ಗಾಯಗೊಳಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget

ಹಲ್ಲೆಗೊಳಗಾದ ಭವಿತ್ ಮನೆಯೊಂದರ ಆವರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕೋಳಿಯನ್ನು ಗಮನಿಸಿ ಅದನ್ನು ಬಿಡಿಸಿ ಕಳುಹಿಸಿದ್ದರು. ಆ ಬಳಿಕ ರಸ್ತೆಯಲ್ಲಿ ನಾಯಿಗಳು ಕೋಳಿಯನ್ನು ಓಡಿಸುತ್ತಿರುವುದನ್ನು ಹೇಳಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಈ ಸಂದರ್ಭ ಹಲ್ಲೆ ನಡೆಯುತ್ತಿದ್ದುದನ್ನು ಕಂಡು ಬಿಡಿಸಲು ಹೋದ ಮನೆಯ ಮಾಲೀಕರನ್ನೂ ತಳ್ಳಿ ಹಾಕಿದ್ದು, ನೆಲಕ್ಕೆ ಬಿದ್ದ ಅವರಿಗೆ ಗಾಯಗಳಾಗಿದೆ ಎಂದು ಹೇಳಲಾಗಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading