Ad Widget

ತನ್ನ ಮೇಲೆ ವಾಮಾಚರ ನಡೆದಿದೆಯೆಂದಿದ್ದ ವಿಟ್ಲದ ಯುವಕ ಸಂಬಂಧಿಕರ ಮನೆಯಂಗಲದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

WhatsApp-Image-2023-03-20-at-10.07.53-AM-750x343
Ad Widget

Ad Widget

Ad Widget

ಮಂಗಳೂರು : ಮಾರ್ಚ್ 20: ವಿಟ್ಲ ಮೂಲದ ನವ ವಿವಾಹಿತ ಯುವಕ ಕೊಣಾಜೆಯ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈದ ಘಟನೆ ಮಾ 19 ರಂದು ಸಂಜೆ ನಡೆದಿದೆ.

Ad Widget

Ad Widget

Ad Widget

Ad Widget

Ad Widget

ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಮೃತಪಟ್ಟ ಯುವಕ. ಇವರು ಕಳೆದ 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು.

Ad Widget

Ad Widget

Ad Widget

Ad Widget

Ad Widget

ಮಾರ್ಚ್ 12 ರಂದು ಹರೀಶ್ ತನ್ನ ತಾಯಿಯ ಅಕ್ಕನ ಮಗನಾಗಿರುವ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ ತನ್ನ ಬ್ಯಾಗಿನಲ್ಲಿ ಭಸ್ಮ, ತಗಡು ದೊರೆತಿದ್ದು, ವಾಮಾಚಾರ ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ತಾನು ಆತಂಕಕ್ಕೆ ಒಳಗಾಗಿರುವುದಾಗಿಯೂ ತಿಳಿಸಿದ.

ಇದಕ್ಕೆ ಸಹೋದರ ರಮೇಶ್ ಮಾರ್ಚ್ 19 ಭಾನುವಾರ ಮನೆಗೆ ಬರುವಂತೆ ಆಮಂತ್ರಿಸಿ, ಆ ಕುರಿತು ಮಾತುಕತೆ ನಡೆಸುವ ಎಂದು ಸಮಾಧನಿಸಿದ್ದರು.

Ad Widget

Ad Widget

Ad Widget

Ad Widget

ಹರೀಶ್ ತನ್ನ ಸೋದರ ಸಂಬಂಧಿಯ ಮನೆಗೆ ಮಾತುಕತೆಗೆಂದು ಬರುವಾಗ ಕೈಯಲ್ಲಿ ಪೆಟ್ರೋಲ್ ಅನ್ನು ಕ್ಯಾನಿನಲ್ಲಿ ಹಿಡಿದುಕೊಂಡು ಬಂದಿದ್ದಾರೆ.

ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಮೈಪೂರ್ತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಣಾಜೆ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹರೀಶ್ ಸಾವನ್ನಪ್ಪಿದ್ದಾರೆ. ಅರೆಬೆಂದ ಸ್ಥಿತಿಯಲ್ಲಿದ್ದ ಹರೀಶ್ ಖುದ್ದಾಗಿಯೇ ಆಂಬ್ಯುಲೆನ್ಸ್ ಹತ್ತಿದ್ದರು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: