ವಿಟ್ಲ : Vitla : ಮಾ 18 : ಕಡೂರು ಕಾಂಞಗಾಡ್ ಅಂತರಾಜ್ಯ ಹೆದ್ದಾರಿಯವಿಟ್ಲ ಸಮೀಪದ ಕಾಶಿ ಮಠ ಬಳಿ ಕೊಳವೆ ಬಾವಿ ಕೊರೆಯುವ ಯಂತ್ರ ಹೊತ್ತ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಬೀಕರ ಅಪಘಾತ ಸಂಭವಿಸಿದ್ದು , ವಾಹನ ಸಹ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಾ 18 ರಂದು ಮಧ್ಯಾಹ್ನ ದುರ್ಘಟನೆ ನಡೆದಿದೆ.
ಅಲಂಗಾರು ಬ್ರಾಣ ಪಾದೆ ನಿವಾಸಿ ರಂಜಿತ್ (19 ) ಸ್ಥಳದಲ್ಲೆ ಮೃತಪಟ್ಟ ಯುವಕ. ಸವಾರ ನಿತಿನ್ (28) ಗಂಭೀರವಾಗಿ ಗಾಯಗೊಂಡಿದ್ದಾರೆ ಕೊಳವೆ ಬಾವಿ ಕೊರೆಯುವ ಯಂತ್ರವಿದ್ದ ಲಾರಿಯ ಚಾಲಕ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ, ಘನ ವಾಹನವೆಂದು ಲೆಕ್ಕಿಸದೆ ಚಲಾಯಿಸಿದೆ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಅರೋಪಿಸಿದ್ದಾರೆ.
ಢಿಕ್ಕಿಯ ಬಳಿಕ ಲಾರಿಯು ಬೈಕ್ ಸವಾರರನ್ನು ಕೆಲ ಮೀಟರುಗಳ ದೂರ ಎಳೆದೊಯ್ಯಿದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿಧ್ರವಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.




(38) ರಸ್ತೆಯೇ ಇಲ್ಲದ ಊರಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿರುವ ಕೋಡಿಂಬಾಡಿ ಅಶೋಕ್ ಕುಮಾರ್ ರೈ – YouTube