ವಿಟ್ಲ: Vitla : ಮಾ 18: ಕಳೆದ ವಿಧಾನ ಸಭೆಯಲ್ಲಿ ಉಂಟಾದ ಸೋಲು ಬೇಸರ ತರಿಸಿಲ್ಲ. ಆದರೆ ಸೋಲಿಸಲು ಬಳಸಿದ ದಾರಿ, ವಿಧಾನ ನೋವುಂಟು ಮಾಡಿದೆಯೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈರವರು ಹೇಳಿದ್ದಾರೆ. ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ 9 ನೇ ದಿನದ ಕಾರ್ಯಕ್ರಮಕ್ಕೆ ಸಾಲೆತ್ತೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಬಾರಿ ಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೆನೆ, ಎಲ್ಲರಿಗಿಂತ ಹೆಚ್ಚು ಅನುದಾನ ತಂದಿದ್ದೇನೆ. ಹಾಗಾಗಿ ನನ್ನನ್ನೂ ಸೋಲಿಸಲು ವಿರೋಧ ಪಕ್ಷದವರು ಸುಳ್ಳು ಕಥೆಗಳನ್ನು ಹೆಣೆಯುವ ಮೂಲಕ ಅಪಪ್ರಚಾರ ನಡೆಸಿದರು. ನಾನು ಮಾಡಿದ ಅಭಿವೃದ್ದಿ ಕಾರ್ಯವನ್ನು ಮರೆ ಮಾಚಲು ವರ್ಚಸ್ಸು ಕುಗ್ಗಿಸಲು ಅಪಪ್ರಚಾರವನ್ನು ಅಸ್ತ್ರವಾಗಿ ಬಳಸಿಕೊಂಡರು ಎಂದರು
ಬಿಜೆಪಿಯವರು ಬಳಸಿದ ಈ ವಿಧಾನ ನನಗೆ ನೋವುಂಟು ಮಾಡಿದೆ. ಸತ್ಯ ನಿಧಾನವಾಗಿಯಾದರು ಹೊರಬರುತ್ತದೆ. ಪ್ರಾಮಾಣಿಕವಾಗಿ ಸುದೀರ್ಘ ರಾಜಕೀಯ ಮಾಡಿದ್ದೇನೆ. ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ಕ್ಷೇತ್ರದ ಜನ ಹಾಗೂ ಈ ರಾಜ್ಯದ ಜನರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ಬಂಟ್ವಾಳ ಕ್ಷೇತ್ರಕ್ಕೆ ನಿಸ್ವಾರ್ಥವಾಗಿ ದುಡಿದಿದ್ದೇನೆ. ನಾವೆಲ್ಲರೂ ದೃತಿಗೆಡದೆ ಒಗ್ಗಟ್ಟಿನಿಂದ ಮನ್ನುಗ್ಗುವ ಎಂದರು
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಾಜಿ ತಾ.ಪಂ. ಸದಸ್ಯ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣಿಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಯೂತ್ ಅಧ್ಯಕ್ಷ ಇಬ್ರಾಹಿಂ ನವಾಝ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಯಾತ್ರೆಯ ಸಂಚಾಲಕ ಪಿಯೂಸ್ ಎಲ್ ತೋಡ್ರಿಗಸ್, ಸಾಲೆತ್ತೂರು ಗ್ರಾ.ಪಂ. ಅಧ್ಯಕ್ಷ. ಹಸೈನಾರ್, ಉಪಾಧ್ಯಕ್ಷೆ ಅಮಿತಾ ಎಸ್. ಭಂಡಾರಿ,
ಕೊಳ್ನಾಡು ವಲಯಾಧ್ಯಕ್ಷ ಪವಿತ್ರ ಪೂಂಜ, ಪ್ರಮುಖರಾದ ಹೈಡಾಸುರೇಶ್, ಲೋಲಾಕ್ಷಿ ಶೆಟ್ಟಿ, ಪದ್ಮನಾಭ ರೈ, ಹರ್ಷಾದ್ ಶರಾವು, ಚಿತ್ತರಂಜನ್ ಶೆಟ್ಟಿ, ಮೋಹನದಾಸ್, ಬ್ಲಾಕ್ ಕಾರ್ಯದರ್ಶಿ ಪ್ರಶಾಂತ್ ಪಕಳ, ಸಾಲೆತ್ತೂರು ಪಂಚಾಯತ್ ಸದಸ್ಯರಾದ ಮೀನಾಕ್ಷಿ, ಸಿದ್ದಿಕ್ ಸರಾವು, ಪ್ರೇಮಲತಾ ಮೊದಲಾದವರು ಉಪಸ್ಥಿತರಿದ್ದರು.