Ad Widget

Ashok Kumar Rai : ಪುತ್ತೂರು : 10 ದಿನಗಳಿಂದ ನೀರಿಲ್ಲದೆ ಸಂಕಟ ಪಡುತ್ತಿದ್ದ 20 ಕುಟುಂಬಗಳು – ಟ್ಯಾಂಕರ್‌ ಮೂಲಕ ನೀರು ಒದಗಿಸಿ ಮಾನವೀಯತೆ ಮೆರೆದ ಅಶೋಕ್‌ ಕುಮಾರ್‌ ರೈ  

WhatsApp Image 2023-03-17 at 17.23.40
Ad Widget

Ad Widget

ಪುತ್ತೂರು Puttur : ಮಾ 17 : ಕುಡಿಯಲು ನೀರಿಲ್ಲದೆ ಸಂಕಟ ಪಡುತಿದ್ದ 20 ಕುಟುಂಬಗಳಿಗೆ ಕಾಂಗ್ರೆಸ್‌ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ (Ashok Kumar Rai)  ತನ್ನ ಸ್ವಂತ ಖರ್ಚಿನಲ್ಲಿ  ಟ್ಯಾಂಕರ್‌ ಮೂಲಕ ನೀರು ಒದಗಿಸುವ  ಮೂಲಕ ಮಾನವೀಯತೆ ( humanity ) ಮೆರೆದಿದ್ದಾರೆ.  ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಇಡಬೆಟ್ಟು ಎಂಬಲ್ಲಿ  20 ಕುಟುಂಬಗಳು ಕಳೆದ 10 ದಿನಗಳಿಂದ ನೀರಿಲ್ಲದೆ ತೊಂದರೆಗೆ ಒಳಗಾಗಿದ್ದರು.

Ad Widget

Ad Widget

Ad Widget

Ad Widget

ನೀರಿನ ಸಮಸ್ಯೆ ಕುರಿತು ತೊಂದರೆಗೆ  ಒಳಗಾದವರು  ಜನ ಪ್ರತಿನಿದಿಗಳು ಹಾಗೂ ಅಧಿಕಾರಿಗಳ ಮೊರೆ ಹೋದರು ಪ್ರಯೋಜನವಾಗಿರಲಿಲ್ಲ. ಪಂಚಾಯತ್‌ ವತಿಯಿಂದ ಎರಡೆರಡು ಕೊಳವೆ ಬಾವಿ ಕೊರೆಸಿದರು ನೀರು ಸಿಕ್ಕಿರಲಿಲ್ಲ. ಹೀಗಾಗಿ ಊರಿನವರ ನೀರಿನ ಬವಣೆ ಮುಂದುವರಿದಿತ್ತು.  

Ad Widget

Ad Widget

Ad Widget

Ad Widget

 ಬೇರೆ ದಾರಿ ಕಾಣದ ಸಂತ್ರಸ್ತ ಕುಟುಂಬಿಕರು ಮಾ16 ರಂದು ಆಶೋಕ್‌ ಕುಮಾರ್‌ ರೈ ಯವರ ನೆರವು ಯಾಚಿಸಿದ್ದಾರೆ. ಪುತ್ತೂರು ಬಾಗದಲ್ಲಿ ಕಾರ್ಯಚರಿಸುವ ಟ್ಯಾಂಕರ್‌ ಗಳು ಬೇರೆ ಕಡೆಗೆ ನೀರು ಸರಬರಜು ಮಾಡುವ ಒತ್ತಡದಲ್ಲಿದ್ದರು. ಬಳಿಕ ಅಶೋಕ್‌ ರೈ ಯವರು ಬೇರೆಡೆಯಿಂದ ಟ್ಯಾಂಕರ್‌ ತರಿಸಿ ಗುರುವಾರ ರಾತ್ರಿ ವೇಳೆ 20 ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಅಶೋಕ್‌ ಕುಮಾರ್‌ ರೈಯವರು ತಿಂಗಳ ಹಿಂದೆ ಕೂಡ, ಆರ್ಯಾಪು ಗ್ರಾಮದ ಕೆಲ ಮನೆಗಳಿಗೆ ನೀರಿಲ್ಲದಿದ್ದಾಗ ನೀರು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಕಳೆದೊಂದು ದಶಕದಿಂದ ಅಶೋಕ್‌ ಕುಮಾರ್‌ ರೈಯವರು ಸಾಮಾಜಿಕ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಬಡ ಹಾಗೂ ದುರ್ಬಲರಿಗೆ ಆರೋಗ್ಯ ಸಮಸ್ಯೆಗೆ ಧನ ಸಹಾಯ , ಮನೆ ನಿರ್ಮಿಸಲು, ಕಲ್ಲು,  ಸಿಮೆಂಟ್‌ ಹಾಗೂ ಆರ್ಥಿಕ ಸಹಕಾರ ನೀಡುತ್ತಿದ್ದಾರೆ.  ಇದರ ಜತೆಗೆ ಹತ್ತು ಹಲವು ಸಾಮಾಜಿಕ ಮಾನವೀಯ ಕಾರ್ಯದಲ್ಲಿ ನಿತ್ಯ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.  

Ad Widget

Ad Widget

10 ದಿನಗಳಿಂದ ಆರ್ಯಾಪು ಗ್ರಾಮದ ಇಡಬೆಟ್ಟು ಭಾಗದ ಜನತೆಗೆ ನೀರಿನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆ ಬಾಗದ ಜನತೆ  ನೀರು ಒದಗಿಸುವಂತೆ ನನ್ನಲ್ಲಿ  ವಿನಂತಿಸಿದರು.  ಕುಡಿಯುವ ನೀರು ಕೊಡುವುದು ಮನುಷ್ಯ ಧರ್ಮ . ಇದರಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ . ಪುತ್ತೂರಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ಟ್ಯಾಂಕರ್‌ ಗಳಿಲ್ಲ. ಕೇವಲ ಎರಡು ಟ್ಯಾಂಕರ್‌ ಗಳಿದ್ದು , ಅದಕ್ಕೆ ಕಾರ್ಯದೊತ್ತಡ ಅಧಿಕವಾಗಿದೆ. ಹೀಗಾಗಿ ಬೇರೆಡೆಯಿಂದ ಟ್ಯಾಂಕರ್‌ ತರಿಸಿದ್ದೇನೆ. ಪಂಚಾಯತ್‌ ವತಿಯಿಂದ ನೀರಿನ ವ್ಯವಸ್ಥೆ ಆಗುವವರೆಗೆ ನೀರು ಒದಗಿಸಲು ನಾನು ಬದ್ದ : ಅಶೋಕ್‌ ಕುಮಾರ್‌ ರೈ.

 

Ad Widget

Leave a Reply

Recent Posts

error: Content is protected !!
%d bloggers like this: