ರಾಷ್ಟ್ರೀಯ
Narendra Modi Animated Video : ಪ್ರಧಾನಿಯನ್ನು ಟೀಕಿಸುತ್ತಿರುವ ವಿಪಕ್ಷಗಳಿಗೆ ಬಿಜೆಪಿ ತಿರುಗೇಟು – ಟೀಕೆಯನ್ನು ನಿರ್ಲಕ್ಷಿಸಿ ಮೋದಿ ಸಾಗಿ ಬಂದ ಹಾದಿಯ ಅನಿಮೇಟೆಡ್ ವಿಡಿಯೋ ಬಿಡುಗಡೆ
Narendra Modi Animated Video : ಹಿಂಡನ್ ಬರ್ಗ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಭಾರತದ ಟಾಪ್ ಉದ್ಯಮಿ ಗೌತಮ್ ಅದಾನಿ ಕುರಿತು ಪ್ರಕಟಿಸಿದ ಅಧ್ಯಯನ ವರದಿ ಯ ಬಳಿಕ ಕಾಂಗ್ರೆಸ್ ಆದಿಯಾಗಿ ದೇಶದ ವಿಪಕ್ಷಗಳು ಪ್ರಧಾನಿ ಮೋದಿಯನ್ನು ಟೀಕಿಸುತ್ತಿದೆ. ಸಂಸತ್ತಿನಲ್ಲೂ ಈ ಕುರಿತು ಜಂಟಿ ಪಾರ್ಲಿಮೆಂಟ್ ಸಮಿತಿ ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದೆ. ಇನ್ನು ರಾಹುಲ್ ಗಾಂಧಿ ಈ ತನ್ನ ವಿದೇಶ ಪ್ರವಾಸದ ವೇಳೆಯಲ್ಲೂ ಪ್ರಧಾನಿಯನ್ನು ಟೀಕಿಸಿದರು. ಇದರ ಬೆನ್ನಲೆ ಬಿಜೆಪಿಯು ಅನಿಮೇಟೆಡ್ ವಿಡಿಯೋ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದೆ.
ಈ ವಿಡಿಯೋದಲ್ಲಿ 2007 ರಿಂದ ವಿಪಕ್ಷಗಳು ಮೋದಿಯನ್ನು ಟೀಕಿಸಿದ ರೀತಿ ಹಾಗೂ ಬಳಸಿದ ಪದಗಳನ್ನು ತೋರಿಸಲಾಗಿದ್ದು, ಆ ಟೀಕೆಗಳನ್ನು ನಿರ್ಲಕ್ಷಿಸಿ ಹೇಗೆ ಮೋದಿ ಯಶಸ್ಸಿನ ಹಾದಿಯಲ್ಲಿ ಸಾಗಿದರು ಎನ್ನುವುದನ್ನು ತೋರಿಸಲಾಗಿದೆ.
ಪ್ರಧಾನಿ ಮೋದಿ ಅವರನ್ನು “ಮೌತ್ ಕಾ ಸೌದಾಗರ್”, “ಗೌತಮ್ ದಾಸ್”, “ಚಾಯ್ವಾಲಾʼʼ ಎಂದೆಲ್ಲಾ ಕರೆದಿರುವ ಪ್ರತಿಪಕ್ಷಗಳಿಗೆ ಈ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡಿದೆ.
ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಪ್ರಧಾನಿ ಹುದ್ದೇಗಿರಿದ ಸಂದರ್ಭದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮೋದಿ ಅವರು ಪ್ರಧಾನಿ ಕುರ್ಚಿಯತ್ತ ನಡೆಯಲು ಪ್ರಾರಂಭಿಸುತ್ತಿದ್ದಂತೆ ಅವರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದರು, “ಮೌತ್ ಕಾ ಸೌದಾಗರ್” ಎಂದು ಕರೆದಿದ್ದರು. ಮೋದಿ ಈ ಎಲ್ಲಾ ಟೀಕೆ ಟಿಪ್ಪಣಿಗಳನ್ನು ನಿರ್ಲಕ್ಷಿಸಿ ಪ್ರಧಾನಿ ಗದ್ದುಗೆಯತ್ತ ಸಾಗುವುದನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ.
ಪ್ರತಿಪಕ್ಷಗಳು ಮೋದಿ ಅವರನ್ನು “ಚಾಯ್ವಾಲಾ” ಎಂದು ಕರೆದಿದ್ದರು, ಅಮೆರಿಕ ವೀಸಾ ನಿಷೇಧಕ್ಕಾಗಿ ಅಪಹಾಸ್ಯ ಮಾಡಿದ್ದರು. ಆದರೆ ಮೋದಿ ಪ್ರಧಾನಿ ಹುದ್ದೆಗೇರಿದ ಬಳಿಕ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ನಮೋ ಅವರನ್ನು ಆಹ್ವಾನಿಸಿದ್ದರು. ಇದನ್ನು ಕೂಡ ಅನಿಮೇಟೆಡ್ ವಿಡಿಯೋದಲ್ಲಿ ಚಿತ್ರಿಸಲಾಗಿದೆ.
ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ‘ಸ್ವಚ್ಛ ಭಾರತ್ ಮಿಷನ್’, ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’, ‘ಉಜ್ವಲ ಯೋಜನೆ’, ‘ಜನ್ ಧನ್ ಯೋಜನೆ’, ‘ಜೀವನ ಜ್ಯೋತಿ ಬಿಮಾ ಯೋಜನೆ’, ‘ಪಿಎಂ ಆವಾಸ್ ಯೋಜನೆ’, ‘ಫಸಲ್ ಬಿಮಾ ಯೋಜನೆ’ಯಂತಹ ಹಲವಾರು ಕಾಮಗಾರಿಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ.
2019 ರಲ್ಲಿ ಪ್ರಧಾನಿಯಾಗಿ ಪುನರಾಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಅವರ ವಿರುದ್ಧ ರಫೇಲ್ ಹಗರಣದ ಆರೋಪ ಮಾಡಿದ್ದರು. ಇದು ಕೂಡ ವಿಡಿಯೋದಲ್ಲಿದೆ. ವೀಡಿಯೊ ಕ್ಲಿಪ್ನ ಕೊನೆಯ ಭಾಗದಲ್ಲಿ ‘ಗೌತಮ್ ದಾಸ್’, ‘ನೀಚ್’, ‘ಜಿರಳೆ’, ‘ರಾವಣ’ ಮುಂತಾದ ಟೀಕೆಗಳಿಂದ ಪ್ರಧಾನಿ ಮೋದಿ ಪ್ರಭಾವಿತರಾಗಿಲ್ಲ ಮತ್ತು ಭಾರತವನ್ನು ಮುನ್ನಡೆಸುವತ್ತ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವಿಡಿಯೋದನ್ನು ವಿವರಿಸಲಾಗಿದೆ.
ರಾಷ್ಟ್ರೀಯ
ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಯುಟ್ಯೂಬರ್ ಜೋಡಿ
ಹೊಸದಿಲ್ಲಿ ಎ.14: ಸೋಶಿಯಲ್ ಮಿಡಿಯಾ ಯೂಟ್ಯೂಬರ್ ಮೂಲಕ ಟ್ರೆಂಡಿಗ್ ನಲ್ಲಿದ್ದ ಜೋಡಿಯೊಂದು ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದ ಬಹದ್ದೂರ್ಗಢದ ರುಹಿಲ್ ರೆಸಿಡೆನ್ಸಿಯಲ್ಲಿ ನಡೆದಿದೆ.
ಮೃತರನ್ನು ಗರ್ವಿತ್ (25) ಮತ್ತು ನಂದಿನಿ (22) ಎಂದು ಗುರುತಿಸಲಾಗಿದೆ. ಮೃತ ಜೋಡಿ ತಮ್ಮ ಯೂಟ್ಯೂಬ್ ಚಾನೆಲ್ ನಿರ್ವಹಣೆ ಮತ್ತು ಕಿರುಚಿತ್ರಗಳನ್ನು ರಚಿಸುವಲ್ಲಿ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ, ಅವರು ತಮ್ಮ ತಂಡದೊಂದಿಗೆ ಡೆಹ್ರಾಡೂನ್ನಿಂದ ಬಹದ್ದೂರ್ಗಢಕ್ಕೆ ಸ್ಥಳಾಂತರಗೊಂಡಿದ್ದರು.
ದಂಪತಿಗಳು ಕಟ್ಟಡದ ಏಳನೇ ಮಹಡಿಯಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅವರು ತಮ್ಮ ತಂಡದ ಸರಿಸುಮಾರು ಐದು ಮಂದಿಯೊಂದಿಗೆ ವಾಸಿಸುತ್ತಿದ್ದರು.
ಮಂಗಳೂರು
Padmaraj R ಜಿಲ್ಲೆಯ ಪ್ರಭಾವಿ ಬಿಲ್ಲವ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಶಿಷ್ಯ ಪದ್ಮರಾಜ್ ರಾಮಯ್ಯ ಗೆ ಒಲಿದ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ –
ಪುತ್ತೂರು: ಕಾಂಗ್ರೆಸ್ ಪಕ್ಷ ರಾಜ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಜಿಲ್ಲೆಯ ಪ್ರಭಾವಿ ಬಿಲ್ಲವ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜನಾರ್ಧನ ಪೂಜಾರಿಯರ ಶಿಷ್ಯ , ಕಳೆದ 25 ವರ್ಷಗಳಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಪದ್ಮರಾಜ್ ರಾಮಯ್ಯನವರಿಗೆ ಟಿಕೆಟ್ ನೀಡಲಾಗಿದೆ. ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀಲರಾಗಿದ್ದಾರೆ.
ಪದ್ಮರಾಜ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರುನಲ್ಲಿ ವಾಸ್ತವ್ಯವಿದ್ದ ಮಂಗಳೂರು ಮೂಲದ ಎಚ್.ಎಂ. ರಾಮಯ್ಯ ಪೂಜಾರಿ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರ. ಅವರು ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಬೆಳ್ತಂಗಡಿಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು
1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ ಇವರು ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್ಬಾಗ್ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಅವರ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ ಸದಸ್ಯರಾದರು. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಬಿ.ಜನಾರ್ದನ ಪೂಜಾರಿಯವರು ಸ್ಪರ್ಧಿಸಿದ ಎಲ್ಲಾ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡಿರುವ ಪದ್ಮರಾಜ್ ಅವರಿಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ, ಭಕ್ತಿ. ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿಪದ್ಮರಾಜ್ ರವರು ಮಂಗಳೂರಿನ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಶ್ರಮ ಪಟ್ಟಿದ್ದಾರೆ.
ಕೊರೊನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್ಡೌನ್ ಉಂಟಾದ ಸಂದರ್ಭ ಬಿ.ಜನಾರ್ದನ ಪೂಜಾರಿಯವರ sUcneyMte ದಿನಂಪ್ರತಿ ದೇವಸ್ಥಾನದ ವತಿಯಿಂದ ಸುಮಾರು 1000 ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು
ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್ಡೌನ್ ಸಂದರ್ಭದಲ್ಲಿ ತನ್ನ ಮುಂದಾಳತ್ವದ ಗುರು ಬೆಳದಿಂಗಳು ಪೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಾಗ್ರಿ ತಲುಪಿಸಿದರು. ಗುರು ಬೆಳದಿಂಗಳು ಪೌಂಡೇಶನ್ ಅಶಕ್ತರ ಕಣ್ಣೀರು ಒರೆಸಲು ಪದ್ಮರಾಜ್ ಆರಂಭಿಸಿದ ಪೌಂಡೇಷನ್. ಇದರ ಮೂಲಕ ಸಾವಿರಾರು ನೊಂದವರಿಗೆ ಸಹಾಯ ಮಾಡಲಾಗಿದೆ.
ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಸಿ. ಪ್ರತಿಷ್ಠಾನ ದ.ಕ. ಜಿಲ್ಲಾ ಗೌರವ ಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿ ನೀಡುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪದ್ಮರಾಜ್ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡವರು. 2 ವರ್ಷಗಳ ಹಿಂದೆ ಗಣ ರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೊ ಪ್ರದರ್ಶನವನ್ನು ನಿರಾಕರಿಸಿದಾಗ ಅದರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ದ್ದವರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ 10ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಅಪರಾಧ
Mother Kills Own Daughter: ಮನೆಯಲ್ಲಿ ಬಾಯ್ ಫ್ರೆಂಡ್ ಜತೆ ಮಗಳ ನೋಡಿ ತಾಯಿ ಕೆಂಡಮಂಡಲ – ಕತ್ತು ಹಿಸುಕಿ ಹತ್ಯೆ
ಹೈದರಾಬಾದ್: ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮಗಳು ತನ್ನ ಬಾಯ್ಫ್ರೆಂಡ್ ಜೊತೆ ಮನೆಯೊಳಗಡೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಸ್ವಂತ ಮಗಳನ್ನೆ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಹೈದರಾಬಾದ್ನಲ್ಲಿ (Hyderabad) ನಡೆದಿದೆ. 19ರ ಹರೆಯದ ಬಾರ್ಗವಿ ಕೊಲೆಯಾದವಳು.
ಹೈದರಾಬಾದ್ ನ ಇಬ್ರಾಹಿಂಪಟ್ಟಣದಲ್ಲಿ ಕೃತ್ಯ ನಡೆದಿದೆ. ಬಾರ್ಗವಿಯ ತಾಯಿ ಜಂಗಮ್ಮ ಕೊಲೆ ಆರೋಪಿ. ಭಾರ್ಗವಿಗೆ ಮದುವೆ ಮಾಡಲು ನಿರ್ಧರಿಸಿದ್ದ, ಜಂಗಮ್ಮ ಸೂಕ್ತ ವರನ ಅನ್ವೇಷಣೆಯಲ್ಲಿದ್ದರು. ಆದರೆ ಯುವತಿ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದು ಜಂಗಮ್ಮನಿಗೆ ಇಷ್ಟವಿರಲಿಲ್ಲ. ಆಕೆ ಅವರಿಬ್ಬರ ಪ್ರೀತಿ ಸಂಬಂಧವನ್ನು ವಿರೋಧಿಸಿದ್ದಳು.
ಸೋಮವಾರ ಮಧ್ಯಾಹ್ನ ಜಂಗಮ್ಮ ಗದ್ದೆಯಿಂದ ಊಟಕ್ಕೆಂದು ಮನೆಗೆ ಬಂದಾಗ ಮಗಳ ಗೆಳೆಯ ಮನೆಯಲ್ಲಿದ್ದದ್ದನ್ನು ಕಂಡು ಕೋಪಗೊಂಡಿದ್ದಾಳೆ. ಮಗಳಿಗೆ ಬೈಯಲು ಆರಂಭಿಸಿದ್ದಾಳೆ. ಈ ವೇಳೆ ಯುವಕ ಮನೆಯಿಂದ ಓಡಿ ಹೋಗಿದ್ದು, ಯುವತಿಯ ತಮ್ಮನಿಗೆ ವಿಷಯ ತಿಳಿಸಿದ್ದಾನೆ. ಆಕೆಯ ಸಹೋದರ ಮನೆಗೆ ಬಂದಾಗ ಬಾಗಿಲು ಬೀಗ ಹಾಕಿತ್ತು. ಕಿಟಕಿಯಿಂದ ನೋಡಿದಾಗ, ತಾಯಿ ಅಕ್ಕನ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದು ಕಾಣಿಸಿದೆ.
ಹೀಗಾಗಿ ಆತ ಕೋಣೆಯ ಬಾಗಿಲು ಬಿಡಿದಿದ್ದು, ಅಲ್ಲಿಂದ ಹೊರ ಬಂದ ಜಂಗಮ್ಮ , ತಾನು ನೋಡಿದಾಗ ಮಗಳು ಕೊರಳಿಗೆ ಸೀರೆಯ ಕುಣಿಕೆ ಹಾಕಿಕೊಂಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ಸುಳ್ಳು ಕಥೆಯೊಂದನ್ನು ಮಗನಲ್ಲಿ ಹೇಳಿದ್ದಳು. ಸಂಬಂಧಿಕರು ವೈದ್ಯರನ್ನು ಮನೆಗೆ ಕರೆತಂದು ಪರೀಖ್ಷೆಗೆ ಒಳಪಡಿಸಿದಾಗ, ಭಾರ್ಗವಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿರುವುದಾಗಿ ತಾಯಿಯ ವಿರುದ್ಧ ದೂರು ನೀಡಿದ್ದು , ಅದರಂತೆ ಪ್ರಕರಣ ದಾಖಲಾಗಿದೆ.
-
ದಕ್ಷಿಣ ಕನ್ನಡ2 days ago
ವಿಟ್ಲ : ದುರಸ್ತಿಗೆ ಬಾವಿಗಿಳಿದ ಇಬ್ಬರು ಅಮ್ಲಜನಕ ಕೊರತೆಯಿಂದ ಮೃತ್ಯು
-
ಬಿಗ್ ನ್ಯೂಸ್20 hours ago
NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ
-
ನಿಧನ ವಾರ್ತೆ1 day ago
Run over-ತಂದೆಯಿಂದಲೇ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣ
-
ಅಪರಾಧ1 day ago
Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ
-
ದಕ್ಷಿಣ ಕನ್ನಡ6 hours ago
Student harrased in bus ಉಪ್ಪಿನಂಗಡಿ: ಸ್ಲೀಪರ್ ಕೋಚ್ ಬಸ್ನಲ್ಲಿ ವಿದ್ಯಾರ್ಥಿನಿಗೆ ಜತೆ ಸಹ ಪ್ರಯಾಣಿಕನಿಂದ ಕಿರುಕುಳ – ಯುವತಿ ವ್ಯಗ್ರಗೊಳ್ಳುತ್ತಾಳೆ ಕಿಟಕಿಯಿಂದ ಹಾರಿ ಆರೋಪಿ ಪರಾರಿ – ಮುಂದೇನಾಯಿತು ?
-
Uncategorized2 days ago
ಮಠಂತಬೆಟ್ಟು ಗುಲಾಬಿ ಅನಂತ ರೈ ನಿಧನ
-
ದಕ್ಷಿಣ ಕನ್ನಡ1 day ago
ಬೆಲೆಯೆರಿಕೆ ಗಗನಕ್ಕೆರಿದ ಸಂದರ್ಭ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಮೂಲಕ ಮಹಿಳೆಯರ ನೆರವಿಗೆ ನಿಂತಿದೆ : ಅನಿತಾ ಹೇಮನಾಥ ಶೆಟ್ಟಿ
-
ಸಾಮಾಜಿಕ ಮಾಧ್ಯಮ5 hours ago
Hasana sex tape : ಚುನಾವಣೆ ಹೊಸ್ತಿಲಲ್ಲಿ ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್ ಡ್ರೈವ್ ಸೌಂಡ್ ! ಅಸಲಿಯ / ನಕಲಿಯ ತೀವ್ರ ಚರ್ಚೆ