Koragajja | ಕೊರಗಜ್ಜನಿಗೆ ಗುಡಿ ಕಟ್ಟಿ ಆರಾಧಿಸಿದ ಮಂಗಳೂರಿನ ಖಾಸಿಂ ಸಾಹೇಬರು ಇನ್ನಿಲ್ಲ – ಸಾಹೇಬರು ಕೊರಗಜ್ಜನೊಂದಿಗೆ ಯಾವೂದೆಲ್ಲ ದೈವ ದೇವರ ಆರಾಧಕರು ಗೊತ್ತೇ ..? ಕೇರಳದಿಂದ ಬಂದ ಮುಸ್ಲಿಂ ವ್ಯಕ್ತಿಗೆ ಕೊರಗಜ್ಜನೊಳಿದ ಅಪರೂಪದ ಕೋಮುಸೌಹರ್ದತೆಗೊಂದು ಸಾಕ್ಷಿಯಾದ ಕಥೆ ಓದಿ

Screenshot_20230305-142039_Chrome
Ad Widget

Ad Widget

Ad Widget

ಮಂಗಳೂರು : ದಕ್ಷಿಣಕನ್ನಡದ ಕೋಮು ಸೌಹರ್ದತೆಗೆ ಕನ್ನಡಿಯಂತಿದ್ದ ಕೇರಳದಿಂದ ಬಂದ ಮುಸ್ಲಿಂ ವ್ಯಕ್ತಿಗೆ ಕೊರಗಜ್ಜ ಒಲಿದು ಅವರಿಂದ ಆರಾಧಿಸಲ್ಪಡಿಕೊಂಡು, ಕೊರಗಜ್ಜನ (Koragajja) ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ಮಾ.5 ಮುಂಜಾನೆ ನಿಧನರಾದರು ಎಂದು ತಿಳಿದು ಬಂದಿದೆ.

Ad Widget

ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಳುಂಜೆಯಲ್ಲಿ ನೆಲೆಸಿದ್ದರು. ಕಳೆದ 20 ವರ್ಷಗಳಿಂದ ಅವರು ಕೊರಗಜ್ಜನ ಆರಾಧನೆಯನ್ನು ಮಾಡುತ್ತಿದ್ದರು.

Ad Widget

Ad Widget

ತನಗೆ ಕಷ್ಟ ಎದುರಾದಗ ಕೊರಗಜ್ಜನ ದರ್ಶನದಲ್ಲಿ ತನ್ನನ್ನು ನಂಬುವಂತೆ ದೈವ ಹೇಳಿದ ನಂತರ ಖಾಸಿಂ ಕೊರಗಜ್ಜನ ಆರಾಧನೆ ನಡೆಸಿಕೊಂಡು ಬರುತ್ತಿದ್ದಾರೆ.

Ad Widget

ದೈವದ ಸೇವೆಯ ಪದ್ದತಿಯೇ ಅರಿಯದ ಖಾಸಿಂ ನಂತರ ತನ್ನಷ್ಟಕ್ಕೆ ಕಳಿತುಕೊಂಡು ಆರಾಧಿಸಲು ಪ್ರಾರಂಭಿಸಿದರು. ಬಡ್ಡಿಯವರ ಹಣ ತೆಗೊಂಡು ಕೊರಗಜ್ಜನ ಕೋಲ ಮಾಡುತಿದ್ದರು ಎಂದು ಸಂದರ್ಶನದಲ್ಲಿ ತಿಳಿಸಿದ್ದರು.

Ad Widget

Ad Widget

ಪ್ರಶ್ನಾ ಚಿಂತನೆಗೂ ಸಾಕಷ್ಟು ಭಕ್ತಾದಿಗಳು ಆ ಕ್ಷೇತ್ರಕ್ಕೆ ನಿನ್ನೆಯವರೆಗೂ ಆಗಮಿಸುತಿದ್ದರು. ಇದೇ ಕ್ಷೇತ್ರದಲ್ಲಿ ಕೊರಗಜ್ಜ, ಕೊರತಿ ದೈವಗಳೊಂದಿಗೆ ದುರ್ಗಾಪರಮೇಶ್ವರಿಯ ಸಾನಿಧ್ಯವೂ ಇದೆ. ಇದಕ್ಕೆಲ್ಲ ಖಾಸಿಂ ಸಾಹೇಬರೇ ಪೂಜೆ ಸಲ್ಲಿಸುತಿದ್ದರು .

ಈ ಕ್ಷೇತ್ರದಲ್ಲಿ ಕೊರಗಜ್ಜನಿಗೆ, ದುರ್ಗಾಪರಮೇಶ್ವರಿಗೆ ಗುಡಿ ಕಟ್ಟಿ ದೀಪವಿಟ್ಟು ಪೂಜೆಯನ್ನು ಮಾಡುತ್ತಿದ್ದರು.ಕರಾವಳಿಯಲ್ಲಿ ಕೊರಗಜ್ಜನನ್ನು ಆರಾಧಿಸುವ ಮುಸ್ಲಿಂ ವ್ಯಕ್ತಿಯೆಂದೇ ಪ್ರಸಿದ್ಧಿ ಪಡೆದಿದ್ದರು.ಈ ಬಗ್ಗೆ ಹಲವು ಲೇಖನಗಳು ವಿವಿಧ ಮಾಧ್ಯಮಗಳಲ್ಲಿ ಬಂದಿದ್ದವು.ಈ ಕುರಿತ ಸುದ್ದಿ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಖಾಸಿಂ ಅವರು ಕೇರಳದಿಂದ 35 ವರ್ಷದ ಹಿಂದೆ ಬಳ್ಳುಂಜೆಗೆ ಬಂದಿದ್ದು, ಅಲ್ಲಿ ಗುಡಿ ಕಟ್ಟಿ ಪೂಜಿಸುತ್ತಿದ್ದರು.

Leave a Reply

Recent Posts

error: Content is protected !!
%d bloggers like this: