ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರವಾಗಿರುವ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಪ್ರಾಕ್ಟಿಕಲ್ & ಟ್ಯಾಕ್ಸ್ಯೇಷನ್ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದ್ದು ಇನ್ನು ಮುಂದೆ ಅಕೌಂಟ್ಸ್ , ಟ್ಯಾಕ್ಸ್ , ಟ್ಯಾಲಿ , ಜಿ ಎಸ್ ಟಿ ಸೇರಿದಂತೆ ಎಲ್ಲಾ ಕಂಪ್ಯೂಟರ್ ತರಗತಿಗಳನ್ನು ಉದ್ಯೋಗವನ್ನು ಪಡೆಯಲು ಪೂರಕವಾಗುವಂತೆ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ವಿದ್ಯಾ ಮಾತಾ ಆಕಾಡೆಮಿಯ ಕಂಪ್ಯೂಟರ್ ಲ್ಯಾಬ್ ನ್ನು ವಿಜಯಪುರದ ಚಾಣಕ್ಯ ಕೆರಿಯರ್ ಅಕಾಡೆಮಿ ಸ್ಥಾಪಕರಾದ ಎನ್. ಎಮ್ ಬಿರಾದಾರ್ ರವರು ಉದ್ಘಾಟಿಸಿದರು.
ಒಂದು ಕಂಪನಿಯ ಅಕೌಂಟ್ಸ್, ಟ್ಯಾಕ್ಸ್, ಜಿ.ಎಸ್.ಟಿಯಿಂದ ಹಿಡಿದು ಎಲ್ಲ ವಿಭಾಗಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಪ್ರಾಕ್ಟಿಕಲ್ ಆಗಿ ಅಧ್ಯಯನ ಮಾಡುವ ಕೋರ್ಸ್ ಗಳನ್ನು ವಿದ್ಯಾಮಾತಾ ಅಕಾಡೆಮಿಯು ಹೊಸದಾಗಿ ಪರಿಚಯಿಸಿದೆ.
ಇದರಿಂದ ಉದ್ಯೋಗ ಪಡೆಯುವಾಗ ನೇರ ಸಂದರ್ಶನವನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಸುಲಭವಾಗಲೆಂದು ಈ ಕೊರ್ಸನ್ನು ಪಡೆಯುವವರಿಗೆ ಉಚಿತವಾಗಿ ಉದ್ಯೋಗವಕಾಶಗಳನ್ನು ಕಲ್ಪಿಸುವ ಕೆಲಸವನ್ನು ವಿದ್ಯಾ ಮಾತಾ ಅಕಾಡೆಮಿಯು ಮಾಡಲಿದೆ.
ಸದ್ಯ ಪಿಯುಸಿ/ಪದವಿ/ ಡಿಪ್ಲೋಮಾ/ ಸ್ನಾತಕೋತ್ತರ ಪದವಿ ಓದುತ್ತಿರುವ ಅಥವಾ ಓದು ಮುಗಿಸಿರುವ ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ಪಡೆದುಕೊಳ್ಳಬಹುದು ಕೋರ್ಸುಗಳು ವಾರದ / ವಾರಾಂತ್ಯದ ತರಗತಿಗಳಲ್ಲಿ ಲಭ್ಯವಿದೆ.
ಈ ತರಬೇತಿಯನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಸರ್ಟಿಫಿಕೇಟ್ ಸಿಗುತ್ತದೆ ಅಲ್ಲದೆ ಅಕೌಂಟಿಂಗ್, ಇನ್ಕಮ್ ಟ್ಯಾಕ್ಸ್ , ಜಿ ಎಸ್ ಟಿ , ಟಿಡಿಎಸ್, ಪೆರೋಲ್ , ಎಕ್ಸ್ ಎಲ್, ಟ್ಯಾಲಿ, ರಿಪೋರ್ಟಿಂಗ್ ಎಲ್ಲವನ್ನೂ ಕೂಡ ಒಂದೇ ಸೂರಿನಲ್ಲಿ ತರಬೇತಿ ಕೊಡಿಸುವ ಮೂಲಕ ಸುಲಭದಲ್ಲಿ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ಭಾಗ್ಯೇಶ್ ರೈ ರವರು ಚಾಣಕ್ಯ ಕೆರಿಯರ್ ಅಕಾಡೆಮಿಯ ಸ್ಥಾಪಕರಾದ ಎನ್. ಎಮ್ ಬಿರಾದಾರ ರವರನ್ನು ಸನ್ಮಾನಿಸಿದರು ತರಬೇತುದಾರರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಹೆಚ್ಚಿನ ಮಾಹಿತಿಗಾಗಿ. ವಿದ್ಯಾಮಾತಾ ಅಕಾಡೆಮಿ ,ಪುತ್ತೂರು . ಫೋನ್ 9620468869 ನ್ನು ಸಂಪರ್ಕಿಸಬಹುದು.